ಜ್ಯೋತಿರ್ಗಮಯ

ಮೂಲ ಕವಿತೆ: ಯಾವೋ ಫೆಂಗ್ 
ಕನ್ನಡಕ್ಕೆ:  ಸಿ. ಪಿ. ರವಿಕುಮಾರ್ 
ಕವಿತಾಸ್ವಾದನೆ: ಮೊದಲು ಕವಿತೆಯನ್ನು ಓದಿ ಅನಂತರ ಈ ಟಿಪ್ಪಣಿ ಓದಿ. ದೀಪದ ಹುಳುವನ್ನು ಕಂಡಾಗ ಬಹುತೇಕ ಕವಿಗಳಿಗೆ ಹೊಳೆಯುವುದು ಬೆಂಕಿಯ ಆಕರ್ಷಣೆಗೆ ಒಳಗಾಗಿ ತನ್ನ ನಾಶಕ್ಕೆ ತಾನೇ ಕಾರಣವಾಗುವ ವ್ಯಕ್ತಿತ್ವ.  ಆದರೆ ಪ್ರಸ್ತುತ ಕವಿತೆಯಲ್ಲಿ ಇದಕ್ಕಿಂತ ಭಿನ್ನವಾದ ಕಲ್ಪನೆಯಿದೆ.   ಪತಂಗವು ಕತ್ತಲಿನ ಮರಿಯೂ ಆಗಿರಬಹುದು. ದೀಪದೊಂದಿಗೆ ಹೋರಾಡಿ ಬೆಳಕನ್ನು ನಂದಿಸಿ ಮತ್ತೆ ಕತ್ತಲು ಮಾಡಲು ಕೂಡಾ ಅದು ಪ್ರಯತ್ನಿಸುತ್ತಿರಬಹುದು! ಈ ಪತಂಗದಲ್ಲಿ ನಿಮಗೆ ಮನುಷ್ಯನ ವ್ಯಸನಗಳೂ  ಗೋಚರಿಸಬಹುದು. 



ದೀಪದ ಮರೆಗೆ ಬೆಳಕನ್ನು ಹಿಂದಿರುಗಿಸಿದಾಗ  
ಆವರಿಸಿಕೊಳ್ಳುತ್ತದೆ ಕತ್ತಲು. 
ದೀಪದ ಹುಳುವನ್ನು ಕತ್ತಲಿಗೆ ಹಿಂದಿರುಗಿಸಿ 
ಕತ್ತಲಲ್ಲೇ ಇರುವಂತೆ ಯಾರು ತರಬೇತಿ ಕೊಟ್ಟವರು?

ಕೊನೆಯಿಲ್ಲದ ತರಬೇತಿಯ ನಂತರವೂ 
ರೆಕ್ಕೆ ಮೊಳೆತ ನಂತರ  
ಹಾರಲಾಗದ ಹುಳ
ತನ್ನೊಂದಿಗೆ  ಜಗ್ಗಿಕೊಂಡು ಮುಸ್ಸಂಜೆಯನ್ನು 
ದೇಕುತ್ತದೆ ಬಹು ನಿ-ಧಾ-ನ-ವಾ-ಗಿ  
ಬೆಳಕಿನ ಕಡೆಗೆ. 


ಕಾಮೆಂಟ್‌ಗಳು

  1. TOWARD THE LIGHT
    Return light to the lampshade
    and then it’s dark
    Who is it that blocks out a moth
    and trains it to stay in darkness?

    After endless training
    the moth eventually breaks its wings
    and is unable to fly
    Dragging the dusk
    it creeps as slow as a snail toward light

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)