ಬೆಳಕು ವಿನ್ಯಾಸ

 (ಐಗಾರ್ ದುಬೊವಾಯ್ ಅವರ ಚಿತ್ರ ನೋಡಿ ಬರೆದ ಕವಿತೆ)

ಮೇಲಿಂದ ಯಾರೋ ಲೈಟಿಂಗ್ ಮಾಡುತ್ತಾರಲ್ಲ ನಮ್ಮ ರಂಗಸ್ಥಳ ಯಾರವರು -

ಪ್ರತಿದಿವಸ ಹೊಸ ವಿನ್ಯಾಸ ಏನಾದರೂ ಯೋಚಿಸಿಕೊಂಡು ಬರುವರು,

ಬೆಳಕು ಅವರದು ಕ್ಯಾಮೆರಾ ನಮ್ಮದು :

ಎಷ್ಟು ಮೆಗಾಪಿಕ್ಸೆಲ್ ಏನೋ ತಿಳಿಯದು,

ತಾಳು ಸೇವ್ ಮಾಡುವೆನೆಂದರೆ ನಕ್ಕು ಮುಂದುವರೆವರು!




ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು