ಶಾಂತಿ ನಿಕೇತನ




ನೇರಳೆ ಬಣ್ಣದ ಹೂವಿನ ಹೊದರು

ನೀಲಾಕಾಶವು ಹಿನ್ನೆಲೆಯಲ್ಲಿ

ಹಸಿರುಹುಲ್ಲು, ಮಣ್ಣಿನ ಕಿರುದಾರಿ

ಹಳದಿ ಹೂವುಗಳ ರತ್ನಗಂಬಳಿ


ಕೇಳಿಸಿತೇ ಮರಗಳ ಮರೆಯಲ್ಲಿ

ಯಾವುದೋ ಹಕ್ಕಿಯ ಪ್ರೇಮಾರ್ತ ಕರೆ?

ಎಸೆದ ಕಲ್ಲಿಗೆ  ನಗೆತರಂಗ ತರಂಗ

ಚಿಮ್ಮಿಸಿ ಮತ್ತೆ ಶಾಂತವಾದಂತೆ ಕೆರೆ


ಮತ್ತೆ ನೆಲೆಸುವುದೆಂತೋ ಶಾಂತಿ ಹಾಗೇ

ಮರಳಿ ಬರಲಿ ನೆಮ್ಮದಿ ನಮ್ಮ ಬಾಳ್ಗೆ.

ಕೊನೆಗೊಳ್ಳಲಿ  ಕೊರೋನಾ ರೋಗರುಜಿನ,

ಮತ್ತು ಮಾನವ-ಮಾನವ ದ್ವೇಷ, ರಕ್ತಪಾತ, ಕದನ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)