ಕಷ್ಟವೆನ್ನಿಸಿದರೂ ಬೀಳ್ಕೊಡು

ಕಷ್ಟವೆನ್ನಿಸಿದರೂ ಬೀಳ್ಕೊಡು 
ಮೂಲ: ಕ್ರಿಸ್ಟಿನಾ ರೊಸೆಟ್ಟಿ 
ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ನನ್ನ ದಾರಿಯ ಕೊನೆಗೆ ತಲುಪಿದಾಗ ನಾನು
ಮುಳುಗಿದಾಗ ನನ್ನ ಬಾಳಿನ ಮೇಲೆ ಭಾನು
ದುಗುಡ ತುಂಬಿದ ಕೋಣೆಯಲ್ಲಿ ಸಲ್ಲಿಸದಿರಾವ ವಿಧಿವಿಧಾನ
ಆತ್ಮವೊಂದು ಮುಕ್ತವಾಗಿದ್ದಕ್ಕೆ ಏತಕ್ಕೆ ರೋದನ?

ನಿನ್ನ ಅನುಭವಕ್ಕೆ ಬರಲಿ ನನ್ನ ಅನುಪಸ್ಥಿತಿ, ಆದರೆ
ಸ್ವಲ್ಪ ದಿನ ಮಾತ್ರ, ಅದೂ ಹಾಕದೇ ಅಳುಮೋರೆ.
ನಮ್ಮನ್ನು ಬಂಧಿಸಿದ್ದ ಪ್ರೀತಿಯನ್ನು ನೆನೆದು
ಕಷ್ಟವೆನ್ನಿಸಿದರೂ ನನ್ನನ್ನು ಬೀಳ್ಕೊಡು 

ಏಕೆಂದರೆ ಇದು ಎಲ್ಲರೂ ಕೈಗೊಳ್ಳಲೇಬೇಕಾದ ಪಯಣ
ಮತ್ತು ಎಲ್ಲರೂ ಒಬ್ಬಂಟಿಯಾಗೇ ಕೈಗೊಳ್ಳಬೇಕು ಇದನ್ನ
ಇದೆಲ್ಲವೂ ಪೂರ್ವಯೋಜನೆಯ ಒಂದು ಅಂಗ
ಮನೆಯತ್ತ ಮತ್ತೊಂದು ಹೆಜ್ಜೆ ಹಾಕುವ ಪ್ರಸಂಗ

ತಾಳಿಕೊಳ್ಳಲಾರದಷ್ಟು ಹೃದಯವಾದರೆ ಭಾರ
ತೆಗೆದುಕೋ ನಮ್ಮ ಸ್ನೇಹಿತರ ಆಧಾರ
ನಮ್ಮ ಹುಚ್ಚುತನವನ್ನೆಲ್ಲಾ ನೆನೆದು ನಕ್ಕು
ಕಷ್ಟವೆನ್ನಿಸಿದರೂ ಬಿಡಿಸು ಬಂಧನದ ಸಿಕ್ಕು.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)