ಕಠಿಣ ಪ್ರೇಮದ ನಿಯಮ

ಮೂಲ ಉರ್ದೂ : ನಕ್ಷ್ ಲಾಲ್ ಪುರಿ 
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 
File:Rocky pathway.jpg


"ರಸ್ಮೆ ಉಲ್ಫತ್ ಕೋ ನಿಭಾಯೇo ತೋ ನಿಭಾಯೇo ಕೈಸೇ" ಎಂದು ಪ್ರಾರಂಭವಾಗುವ ಈ ಗೀತೆಯ ರಚನೆ ನಕ್ಷ್ ಲಾಲ್ ಪುರಿ ಅವರದ್ದು. ಇದನ್ನು "ದಿಲ್ ಕೀ ರಾಹೇಂ" ಚಿತ್ರದಲ್ಲಿ ಬಳಸಲಾಗಿದೆ. ಮದನ್ ಮೋಹನ್ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್ ಹಾಡಿದ್ದಾರೆ.

ಕಠಿಣ ಪ್ರೇಮದ ನಿಯಮ ಪಾಲಿಸುವುದಾದರೂ ಹೇಗೆ ಪಾಲಿಸಲಿ 
ಸುತ್ತಲೂ ಹರಡಿರುವಾಗ ಬೆಂಕಿ ಸೆರಗನ್ನು ಹೇಗೆ ಕಾಪಾಡಲಿ?

ಎಬ್ಬಿಸುತ್ತಾರಲ್ಲ ಜನರು ಹೃದಯದ ಹಾದಿಯಲ್ಲಿ  ಗೋಡೆಗಳನ್ನು
ಉರುಳಿಸುವುದು ಹೇಗೆಂದು ಯಾರಾದರೂ ಹೇಳುವಿರೇನು?

ಹಾಡುಗಳು ಸಾವಿರಾರಿವೆ ದುಃಖದಲ್ಲಿ ಅದ್ದಿದ್ದು, ಆದರೂ 
ಮುರಿದ ಹೃದಯದ ವೀಣೆಯಲ್ಲಿ ನುಡಿಸುವುದದೆಂತು?

ಎತ್ತಿಕೊಳ್ಳಬಹುದಾಗಿತ್ತು ಹೇಗೋ ದುಃಖಗಳ ಹೊರೆಯನ್ನಾದರೂ 
ಬದುಕೇ ಹೊರೆಯಾದಾಗ ಮೇಲೆತ್ತಿ ಹೇಗೆ ನಡೆಯುವುದು?

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)