ಒಂದು ಹಳೆಯ ನೀತಿಕಥೆ

 ಮೂಲ : ರಾಲ್ಫ್ ವಾಲ್ಡೋ ಎಮರ್ಸನ್

ಅನುವಾದ: ಸಿ. ಪಿ. ರವಿಕುಮಾರ್




ಬೆಟ್ಟಕ್ಕೂ ಅಳಿಲಿಗೂ ಜಗಳವಾಯಿತು ಒಮ್ಮೆ, ವಿಷಯ ಇಷ್ಟೇ
ಪುಟ್ಟದಾದರೂ ನಿನಗೆ ಎಷ್ಟೋ ದುರಹಂಕಾರ ಎಂದಿತಂತೆ ಬೆಟ್ಟ.
ಅಳಿಲು ನೀಡಿತು ಮಾರುತ್ತರ: ನೀನೇನೋ ಮಹಾಕಾಯ, ದಿಟ,
ಹಲವು ಋತು ಹೇಗೋ ವರ್ಷದಲ್ಲಿ, ಹಲವು ಬಗೆ ವಸ್ತು ಭೂಮಿಯ ಸುತ್ತ.
ನನ್ನ ಸ್ಥಾನದಲ್ಲಿ ನಾನಿರುವೆ, ನನಗೇನೂ ಕೀಳೆಂದು ಅನ್ನಿಸದು.
ನಾನಿಲ್ಲದೇ ಇರಬಹುದು ನಿನ್ನಷ್ಟು ಅಗಾಧ, ನೀನೂ ಅಲ್ಲ ನನ್ನಷ್ಟು ಪುಟ್ಟ.
ನನ್ನಷ್ಟು ಚುರುಕಂತೂ ಇಲ್ಲವೇ ಇಲ್ಲ, ಚಲಿಸಲೂ ಆಗದು ಅತ್ತಿತ್ತ.
ನಿಸ್ಸಂಶಯ ನೀನು ಒಳ್ಳೆಯ ಆಡುಂಬೊಲ ಅಳಿಲುಗಳಿಗೆ ಓಡಾಡಲು ಸುತ್ತ.
ಎಲ್ಲರೂ ಚೆನ್ನ ಅವರವರ ಸ್ಥಳದಲ್ಲಿ, ಎಲ್ಲರಿಗೂ ಅವರವರ ಪ್ರತಿಭೆ, ದೈವಚಿತ್ತ.
ನಿನ್ನಂತೆ ನಾನು ಹೊರಲಾರೆ ಕಾನು,
ನನ್ನಂತೆ ಕಾಯಿ ಹೊರಲಾರೆ ನೀನು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)