ಗಂಟೆ
ಮೂಲ ಹಿಂದಿ ಕವಿತೆ - ಸುಮಿತ್ರಾನಂದನ್ ಪಂತ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್

ನಭದ ನೀಲ ನೀರವದ ಕೆಳಗೆ
ಸುಂದರ ಗಂಟೆಯೊಂದು ತೂಗುತ್ತಿದೆ.
ಘಳಿಗೆಘಳಿಗೆಗೂ ಬಾಜಿಸುತ್ತಾ
ಮನದಾಳದಲ್ಲಿ ಏನನ್ನೋ ಕೂಗುತ್ತಿದೆ.
ಮುದ್ದಾಗಿದೆ ಹಕ್ಕಿಯ ಮರಿಯಂತೆ
ಗಂಟೆಯ ಕೋಮಲ ಸ್ವರಗಳ ರೆಕ್ಕೆ
ಕಿವಿಗಳಿಂದ ಮನದೊಳಗಿಳಿದು
ಕಟ್ಟುತ್ತದೆ ಸ್ವರಪಕ್ಷಿಯು ಗೂಡು!
ತುಂಬುತ್ತದೆ ಮನದಂಗಳದೊಳಗೆ
ಮಂಗಳಧ್ವನಿ ಹಿನ್ನೆಲೆಯಲಿ ಮೊಳಗೆ
ಏಳು ಮೇಲೆ, ಮೂಡಿತು ಮುಂಬೆಳಗು!
ಬಂತು ಬಂತು ಚೆಂಬೆಳಕಿನ ಹಡಗು!
ಹೊಸದಿನವು ಬಂತು, ಹೊಸ ಮಾತನಾಡು!
ನವಲ ಚಿಂತೆ, ಹೊಸ ಕೃತಿಯ ಮಾಡು!
ಸ್ವಚ್ಛ ಮನದಿಂದ ಸ್ವಚ್ಛ ಕಾಯಕವ
ಮಾಡು! ಬೆಳಕಾಯ್ತು ಕಣ್ತೆರೆದು ನೋಡು!
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ನಭದ ನೀಲ ನೀರವದ ಕೆಳಗೆ
ಸುಂದರ ಗಂಟೆಯೊಂದು ತೂಗುತ್ತಿದೆ.
ಘಳಿಗೆಘಳಿಗೆಗೂ ಬಾಜಿಸುತ್ತಾ
ಮನದಾಳದಲ್ಲಿ ಏನನ್ನೋ ಕೂಗುತ್ತಿದೆ.
ಮುದ್ದಾಗಿದೆ ಹಕ್ಕಿಯ ಮರಿಯಂತೆ
ಗಂಟೆಯ ಕೋಮಲ ಸ್ವರಗಳ ರೆಕ್ಕೆ
ಕಿವಿಗಳಿಂದ ಮನದೊಳಗಿಳಿದು
ಕಟ್ಟುತ್ತದೆ ಸ್ವರಪಕ್ಷಿಯು ಗೂಡು!
ತುಂಬುತ್ತದೆ ಮನದಂಗಳದೊಳಗೆ
ಮಂಗಳಧ್ವನಿ ಹಿನ್ನೆಲೆಯಲಿ ಮೊಳಗೆ
ಏಳು ಮೇಲೆ, ಮೂಡಿತು ಮುಂಬೆಳಗು!
ಬಂತು ಬಂತು ಚೆಂಬೆಳಕಿನ ಹಡಗು!
ಹೊಸದಿನವು ಬಂತು, ಹೊಸ ಮಾತನಾಡು!
ನವಲ ಚಿಂತೆ, ಹೊಸ ಕೃತಿಯ ಮಾಡು!
ಸ್ವಚ್ಛ ಮನದಿಂದ ಸ್ವಚ್ಛ ಕಾಯಕವ
ಮಾಡು! ಬೆಳಕಾಯ್ತು ಕಣ್ತೆರೆದು ನೋಡು!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ