ಕುಣಿವುದೆನ್ನ ಮನ

ಮೂಲ ಇಂಗ್ಲಿಷ್  ಕವಿತೆ: ವಿಲಿಯಂ ವರ್ಡ್ಸ್‌‌ವರ್ತ್ 
 ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 
Rainbow on Grass Field

ಕುಣಿವುದೆನ್ನ ಮನ ಗರಿಗೆದರಿ
ಕಂಡಾಗ ಕಾಮನಬಿಲ್ಲು ಬಾನಲ್ಲಿ!
ಬಾಲ್ಯದಲ್ಲಿ ಹೇಗೆ ಚಿಮ್ಮುತ್ತಿತ್ತೋ ಸೋಜಿಗದ ಹೊನಲು
ಹಾಗೇ ಹೊಮ್ಮುವುದು ಮಾನವನಾಗಿ ಬೆಳೆದು ನಿಂತಾಗಲೂ
ಚಿಮ್ಮುತ್ತಿರಲಿ ಹೀಗೆಯೇ ಮುಂದೆಯೂ!
ಇಲ್ಲದಿರೆ ನನಗೆ ಕೊಟ್ಟುಬಿಡು ಸಾವು!
ಮಗುವಲ್ಲವೇ ಮಾನವನ ಜನಕ:
ಬೇಡಿಕೊಳ್ಳುವೆ ದೈವದಲ್ಲಿ ನಾನನಕ!
ಉರುಳುತ್ತ ಹೋದಂತೆ ನನ್ನ ದಿನಗಳು ಪರಸ್ಪರ
ಸಹಜಭಕ್ತಿಯಿಂದ ಬೆಸೆದುಕೊಂಡಿರಲೆಂಬ ವರ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)