ಪೋಸ್ಟ್‌ಗಳು

ಫೆಬ್ರವರಿ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹ್ಯಾಲೋವೀನ್

ಇಮೇಜ್
 ಹ್ಯಾಲೋವೀನ್ ಕಟುಕನ ಭಾರೀ ಗಾತ್ರದ ಚಾಕು ಮೊದಲು ಒಳನುಗ್ಗಿ ಕೊರೆಯುತ್ತದೆ ತೊಟ್ಟುಳ್ಳ ಗುಂಡನೆ ಮುಚ್ಚಳ ಮೇಲುಗಡೆ. ಈಗ ಕೈಹಾಕಿ ಒಳಗೆ ಬಗೆದು ಕೈಗಂಟುವ ಮಾಂಸಲ ಭಾಗ ಚಮಚದಿಂದ ಕೆರೆದು ಶುದ್ಧಗೊಳಿಸಬೇಕು  ಒಳಗೋಡೆ. ಅಂದು ಮಧ್ಯಾಹ್ನವೇ ರೂಪಿಸಿದ ಭಯಾನಕ ಆಕೃತಿ: ಮೊದಲು ಕೆತ್ತಬೇಕು ತ್ರಿಕೋನಾಕಾರದ ಕಣ್ಣು ಅಥವಾ ವಜ್ರಾಕ್ರಾರದವು ಮತ್ತು ಚೌಕಾಕಾರದ ಮೂಗು. ಕೆಳಗೆ ಬಾಗಿದ ಬಾಯಲ್ಲಿ ಮೂರು ಭಯಾನಕ ಹಲ್ಲು.  ಬೇಕೆನಿಸಿದರೆ ಗುಂಡನೆಯ ಕಿವಿ. ಮುಸ್ಸಂಜೆ ಹೊತ್ತು ಒಳಗೆ ಮೋಂಬತ್ತಿ ಇಟ್ಟು ಹಚ್ಚಿದಾಗ ಕಾಣುತ್ತದೆ  ಹಿಂಭಾಗದಲ್ಲಿ ಕತ್ತಲು. ಮುಂದಿನಿಂದ ನೋಡಿದರೆ ಕಾಣುವುದು ಪಕ್ವ ಕುಂಬಳಕಾಯಿ, ಅಷ್ಟೇ. ಹೊರಗೆ ತರಗೆಲೆಗಳುದುರಿದ ಹುಲ್ಲಿನ ಮೇಲೆ ಬಿದ್ದ ನೆರಳು ಕೈ ಮಾಡಿ ಕರೆದಾಗ ಬೆರಳು ಆಗಮಿಸುತ್ತಾರೆ ಮಕ್ಕಳು. "ಟ್ರಿಕ್ ಆರ್ ಟ್ರೀಟ್."  ತೆರೆದ ಬಾಗಿಲಿನ ಮುಂದೆ ನಿಂತ ಕುಂಬಳಕಾಯಿ ಕೊರೆದ ಮಾಯಾವಿ ವೇಷದಾರಿ ಉದುರಿಸುತ್ತಾನೆ ಅವರ ಜೋಳಿಗೆಗಳಲ್ಲಿ ಪೆಪ್ಪರ್ಮಿಂಟು ಅವನಿಗೆ ಗೊತ್ತು ಏನೆಂದು ಚಳಿಗಾಲದ ಸಂದೇಶ: ಭೂತಗಳಂತೆ ನಟಿಸುವ ಮಕ್ಕಳಷ್ಟೇ ವಾಸ್ತವ. ಮೂಲ: ಮ್ಯಾಕ್ ಹ್ಯಾಮಂಡ್ ಅನುವಾದ: ಸಿ. ಪಿ. ರವಿಕುಮಾರ್

ರೂಪಾಯಿಗೆ ಇಪ್ಪತ್ತು

ಇಮೇಜ್
 "ರೂಪಾಯಿಗೆ ಇಪ್ಪತ್ತು" ಮೂಲ: ಟಾಮ್ ಬಾರ್ಲೋ ಅನುವಾದ: ಸಿ. ಪಿ. ರವಿಕುಮಾರ್ ಐದುಪೈಸೆಯ ನಾಣ್ಯಗಳ ಬಗ್ಗೆ ಯೋಚಿಸುತ್ತಿದ್ದೆ ಹುಡುಗರ ಜೋಬುಗಳಲ್ಲಿ ಝಣಝಣ ಎನ್ನುತ್ತ ಅಂಗಡಿಯ ಮುಂದೆ  ಹೋಗಿ ನಿಲ್ಲಲು ಧೈರ್ಯ ತುಂಬುತ್ತಿದ್ದವಲ್ಲ ಪೆಪ್ಪರಮಿಂಟು, ಹಾಲುಖೋವಾ, ಚಿಕ್ಕಿ, ಮಾವಿನಕಾಯಿ ವಾರದ ಸಂಬಳ ಪಡೆದ ದಿನಗೂಲಿ ಕೆಲಸಗಾರ  ಅಡ್ಡಾಡುವಂತೆ ಅಂಗಡಿಯಿಂದ ಅಂಗಡಿಗೆ. ಇವತ್ತು ದಾರಿಯಲ್ಲಿ ಬಿದ್ದಿತ್ತು ಐದುಪೈಸೆಯ ನಾಣ್ಯ, ಯಾರೋ ಎಂದೋ ಕಳೆದುಕೊಂಡದ್ದು, ಬಹಳ ದಿನಗಳಿಂದ ಅಲ್ಲೇ ಇದ್ದಿರಬಹುದು, ಧೂಳು ಸೇರಿಕೊಂಡಿತ್ತು. ನಾನು ಅಲ್ಲೇ ಬಿಟ್ಟು ನಡೆದೆ. ರೂಪಾಯಿಗೆ ಇಪ್ಪತ್ತು ಸಿಕ್ಕುತ್ತವೆ ಕೈತುಂಬಾ ಭಿಕ್ಷೆಯವನೂ ಮೂಸಿ ನೋಡದ ವಸ್ತು. ಅವನಿಗೆ ಗೊತ್ತು ಐದುಪೈಸೆಯ ನಾಣ್ಯದ ಬೆಲೆ ಏನಿದ್ದರೂ ಅಲ್ಲಾಡುವ ಮೇಜಿನ ಅಡಿಯಲ್ಲಿಡಲು ಅಷ್ಟೇ. ನಾನು ಇಟ್ಟುಕೊಂಡಿರುತ್ತೇನೆ ಒಂದನ್ನು ನನ್ನ ಬಳಿ, ಇಂದೇನು ಕುಡಿಯಲಿ ಗಾಳಿಯನ್ನೋ ಔಷಧವನ್ನೋ ಇತ್ಯಾದಿ ಮುಖ್ಯ ನಿರ್ಧಾರಗಳನ್ನು  ಕೈಗೊಳ್ಳಲು. ಕಾಲಾಂತರದಲ್ಲಿ ನಾವೆಲ್ಲರೂ ಕುಗ್ಗುತ್ತೇವೆ, ಹುಡುಗನ ಬೊಗಸೆಯಿಂದ ನಡುಗುವ ಕೈಗಳಿಗೆ. ಕೈಗಳಿಂದ ಜಾರಿಹೋಗುತ್ತವೆ ನಾಣ್ಯಗಳು ಜಾರಿ ಉರುಳಿ ಬೀದಿಯಲ್ಲಿ ಎಲ್ಲೋ ಮಾಯವಾಗುತ್ತವೆ.

ಐತಿಹಾಸಿಕ ನೋಟ

ಇಮೇಜ್
 ಮೂಲ ಕವಿತೆ: ಕ್ಯಾರಲ್ ಹ್ಯಾಮಿಲ್ಟನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನೇರನಡೆಯನ್ನು  ನಾವೆಲ್ಲರೂ  ಮರೆತಿದ್ದೇವೆಂಬುದು ಸುಳ್ಳು ಬಹುಶಃ ಅದರ ಹಿಂದೆ ಬಿದ್ದಿದ್ದೇವೆ ಲಗುಬಗೆಯಿಂದ ಹಿಂದೆಂದೂ ಇಲ್ಲದಷ್ಟು.   ಉದಾಹರಣೆಗೆ ಟಿವಿಯಲ್ಲಿ ವ್ಯಾಖ್ಯಾನ ಮಾಡಲು ಬರುವವರ ಮನೆಯಲ್ಲಿ ಅವರ ಹಿಂದಿರುವ ಕಪಾಟುಗಳಲ್ಲಿ ಕಾಣುವ ಪುಸ್ತಕಗಳನ್ನು ನೋಡಿ ಎಲ್ಲದರ ಬೆನ್ನೆಲುಬು ನೇರ, ಅಂದವಾದ ಜೋಡಣೆ, ಎಲ್ಲೂ ಕಾಣದು ಯಾವ ಗೊಂದಲ ಎಲ್ಲೂ ಕಾಣದು ಮಾಸಿದ ರಕ್ಷಾಕವಚ. ಇಷ್ಟಾದರೂ ನಾವು ಉತ್ಸಾಹದಿಂದ ಪ್ರತಿಪಾದಿಸಲು ಆಯ್ದುಕೊಳ್ಳುವ ಕಟ್ಟಾ ಸತ್ಯಗಳು ವಿರುದ್ಧ ಧ್ರುವಗಳು. ಇತಿಹಾಸದಲ್ಲಿ ಇದು ಮೊದಲ ಸಲವೇನಲ್ಲ ಬಿಡಿ.   ಬಿಗ್ ಬ್ಯಾಂಗ್ ನಂತರ ಕ್ವಾರ್ಕುಗಳು ಮಾಡಿದಹಾಗೆ  ನಾವು ಎಷ್ಟೇ ಅಂಟಿಕೊಂಡರೂ ಘರ್ಷಿಸಿದರೂ ನಮ್ಮ ಅಡ್ಡಾದಿಡ್ಡಿ ನಡೆಗಳು ಹೊತ್ತಿಸುವ ಮುನ್ನ ಬೆಳಕು  ನಾವು ಏನು ಮರೆಯುತ್ತೇವೆ ಎಂದರೆ,  ಮುನ್ನುಗ್ಗುವಾಗ ನಾವು ಎಷ್ಟೇ ಅಲಕ್ಷಿಸಿದರೂ, ಸತ್ಯದ ಧಾರಕರಾದ ನಾವು ಮರೆಯುತ್ತೇವೆ ಬಗ್ಗಲು,  ಮರೆಯುತ್ತೇವೆ ಕುತೂಹಲಗೊಳ್ಳಲು, ಮರೆಯುತ್ತೇವೆ ನಮ್ಮ ಅರ್ಧಮುಗಿದ ಕೆಲಸದ ಅವಶೇಷಗಳನ್ನು ಒಂದು ತೆರೆದ ಕಿಟಕಿಯ ಪಕ್ಕದಲ್ಲಿಡಲು.

ಹೆಣಿಗೆ (ಕವನ)

ಇಮೇಜ್
ಹೆಣಿಗೆ ಹೆಣಿಗೆಯಲ್ಲಿ ಏನೂ ತಪ್ಪಿಲ್ಲದಂತೆ ಜೋಕೆ ಎಣಿಸುತ್ತ ಸಮ ಎಷ್ಟೆಂದು ಎಷ್ಟು ಬೆಸವೆಂದು ಕುಣಿಕೆ ಹಾಕಿ ಕಡ್ಡಿಗೆ ಉಣ್ಣೆಯ ದಾರದಿಂದ ಜಾಣತನದಿಂದ ಎಳೆದುಕೊಂಡು ಮತ್ತೊಂದನ್ನು ಎಳೆದು ಭದ್ರಗೊಳಿಸುತ್ತ ಸಾಗುತ್ತಿವೆ ಬೆರಳು ಬಳೆಗಳ ಸದ್ದು ಕಿಣಿಕಿಣಿಸುತ್ತಿರಲು ಹಿನ್ನೆಲೆಯಲ್ಲಿ ತಳಕು ಹಾಕಿಕೊಂಡ ಅಸಂಖ್ಯ ಜಡೆಗಳನ್ನು; ಅಳತೆಯನ್ನು ಅಂದಾಜಿಸುತ್ತವೆ ಆಗಾಗ ಕಣ್ಣು. ಇಣುಕಿ ನಡುವೆ ಎಣಿಕೆ ತಪ್ಪಿತು ಎಂದೆಣಿಸದಿರು  ಕಾಣುವ ಮಾದರಿಯಲ್ಲಿದ್ದರೂ ಅಸಮರೂಪ ಹೆಣೆಯುತ್ತಿರಬಹುದು ಕೈಗಳು ಬೇರಾವುದೋ ಗುಣವಿನ್ನೂ ಗಣಿಕೆಗೆ ಬರದ ಸಮಸೂತ್ರವನ್ನು. ಜಡೆ ಹೆಣೆಯುವುದು ಬೇಡುತ್ತದೆ ಅಪಾರ ತಾಳ್ಮೆ ಬಿಡದೆ ಹೆಣೆಯುತ್ತಿರುವುದರಲ್ಲಿ ಎಲ್ಲ ಮಹಿಮೆ.    ಲೀನಾ ನಿಯೋ ಅವರ ಕಲಾಕೃತಿ ನೋಡಿ ಬರೆದ ಚಿತ್ರಕವಿತೆ: ಸಿ ಪಿ ರವಿಕುಮಾರ್ 

ಹೀರೆ ಕಾ ಹಾರ್

ಇಮೇಜ್
 ಹೀರೆ ಕಾ ಹಾರ್  ಹಾರ ತುರಾಯಿ ಅನ್ನುವಾಗ ಬಹಳ ಜನರಿಗೆ ತುರಾಯಿ ಏನೆಂದು ಗೊತ್ತೇ ಇಲ್ಲ.  ಕೈಗೆ ಕೊಡುವ ಹೂವಿನ ಗುಚ್ಛಕ್ಕೆ ತುರಾಯಿ ಎನ್ನುವ ಹೆಸರಿದೆ. ಇದರ ಮೂಲ ಏನೋ ಯಾರಿಗೆ ಗೊತ್ತು? ಹಿಂದಿಯಲ್ಲಿ ತುರಈ ಎಂಬ ಪದ ಇದೆ. ಹೀರೆಕಾಯಿಗೆ ತುರಈ ಎನ್ನುತ್ತಾರೆ.  ಹಿಂದೊಮ್ಮೆ ಸಮಾರಂಭಗಳಲ್ಲಿ ಕೈಗೆ ಹೀರೆಕಾಯಿ ಕೊಡುತ್ತಿದ್ದರೋ ಏನೋ ಎಂಬುದನ್ನು ಕುರಿತು ಸಂಶೋಧನೆ ನಡೆಯಬೇಕಾಗಿದೆ. ಅತಿಥಿ ಹಿಗ್ಗಿ ಹೀರೇಕಾಯಿ ಆಗಲು ಹಾಗೆ ಮಾಡುತ್ತಿದ್ದರೋ ಏನೋ.  ಬಹುಶಃ ಹೀರೇಕಾಯಿ ಆಗ ಅಪರೂಪದ ತರಕಾರಿ ಆಗಿರಬಹುದು. ಬಂದವರ ಕೈಗೆ ನಿಂಬೆಹಣ್ಣು ಕೊಡುವ ಸಂಪ್ರದಾಯ ಹಿಂದೆ ಇತ್ತೆಂದು ಹೇಳುತ್ತಾರೆ. ಮದುವೆಯಲ್ಲಿ ಕಾಶೀಯಾತ್ರೆ ಸಂದರ್ಭದಲ್ಲಿ ತೆಂಗಿನಕಾಯಿ ವರನ ಕೈಗೆ ಕೊಡುವ ಸಂಪ್ರದಾಯವೂ ಇದೆ. ಕೆಲವರು ಅದನ್ನು "ನೋಡು ಹೀಗೆ ಇದ್ದ ತೆಂಗಿನಕಾಯಿ ಮುಂದೆ ಹೇಗೆ ಚಟ್ನಿ ಆಗುತ್ತದೆ ನೋಡು, ಹೀಗಾಗಿ ನೀನೇನೂ ಹೆದರಬೇಡ" ಎಂದೆಲ್ಲ ಹೇಳುವ ಬದಲು ಸಾಂಕೇತಿಕವಾಗಿ ಅದನ್ನೇ ಹೇಳುವ ಪ್ರಯತ್ನ ಎಂದು ಊಹಿಸಿದ್ದಾರೆ. ನಿಂಬೆ ಹಣ್ಣನ್ನು ಅತಿಥಿಗೆ ಕೊಟ್ಟರೆ "ನೋಡಿ, ಪಾನಕ ಮಾಡಲು ನಮಗೆ ಪುರುಸೊತ್ತಿಲ್ಲ, ಮನೆಯಲ್ಲಿ ಸಕ್ಕರೆ ಇಲ್ಲ, ಯಾಲಕ್ಕಿ ತಂದಿಲ್ಲ, ಹೀಗಾಗಿ ನಿಂಬೆಹಣ್ಣನ್ನು ನಿಮಗೆ ಕೊಡುತ್ತಿದ್ದೇವೆ ಸ್ವೀಕರಿಸಿ" ಎಂದು ಪರೋಕ್ಷವಾಗಿ ಹೇಳಿದಂತೆ ಎಂದು ಅದೇ ಸಂಶೋಧಕರು ಊಹಿಸಿದ್ದಾರೆ.  ಆದರೆ ಹೀರೇಕಾಯಿ ಕೊಡುವ ಸಂಪ್ರದಾಯದ ಬಗ್ಗೆ ಅವರು ಏನೂ ಹೇಳ...

ಬೆಳಕು ವಿನ್ಯಾಸ

ಇಮೇಜ್
 (ಐಗಾರ್ ದುಬೊವಾಯ್ ಅವರ ಚಿತ್ರ ನೋಡಿ ಬರೆದ ಕವಿತೆ) ಮೇಲಿಂದ ಯಾರೋ ಲೈಟಿಂಗ್ ಮಾಡುತ್ತಾರಲ್ಲ ನಮ್ಮ ರಂಗಸ್ಥಳ ಯಾರವರು - ಪ್ರತಿದಿವಸ ಹೊಸ ವಿನ್ಯಾಸ ಏನಾದರೂ ಯೋಚಿಸಿಕೊಂಡು ಬರುವರು, ಬೆಳಕು ಅವರದು ಕ್ಯಾಮೆರಾ ನಮ್ಮದು : ಎಷ್ಟು ಮೆಗಾಪಿಕ್ಸೆಲ್ ಏನೋ ತಿಳಿಯದು, ತಾಳು ಸೇವ್ ಮಾಡುವೆನೆಂದರೆ ನಕ್ಕು ಮುಂದುವರೆವರು! ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಕಲಾವಿದನ ಮಗಳು

ಇಮೇಜ್
ಮಗಳು ಕೇಳುತ್ತಾಳೆ ಚಿತ್ರಕಾರನನ್ನು ಅಪ್ಪಾ ರಂಗು ಮಾಡುವುದರಲ್ಲೇ ಹೋಯಿತು ಇಡೀ ಹಗಲು! ಯಾವ ಸೌಖ್ಯಕ್ಕಾಗಿ ನಿನ್ನ ಕಲೆ! ನಗದು ನಾಣ್ಯ ಎಂದೂ ಕಾಣೆ ನಿನ್ನ ಬಳಿ, ಸಿಗದು ಎಂದೂ ಪುರುಸೊತ್ತು ನಮಗಾಗಿ, ಬಿಗಿಹಿಡಿದ ಸೊಂಟದ ಪಟ್ಟಿ ಬಾಳ್ವೆ! ಬಿಗುಮಾನ ಅಷ್ಟೇ ಕಲಾವಿದರೆಂಬ ಹಣೆಪಟ್ಟಿ! ಸಿಗಲಿಲ್ಲ ಇದುವರೆಗೂ ಯಾವುದೇ ಸನ್ಮಾನ! ಜಗತ್ತು ಎಷ್ಟು ಮುಂದುವರೆದಿದೆ ಅಪ್ಪಾ ಈಗ ಸಿಕ್ಕುತ್ತದೆ ಚಿತ್ರ ಬರೆದುಕೊಡಲು ಆ್ಯಪ್ ಚಿಗರೆಯ ವೇಗದಲ್ಲಿ ಬಿಡಿಸಿಕೊಡುತ್ತದೆ  ಏಐ  ಮುಗುಳ್ನಗುವ ಮೋನಾ ಮಲ್ಲಿಗೆ ಮುಡಿದ ಚಿತ್ರ! ಈಗ ಕೂಡಲೇ ಬಿಡಿಸಿಕೊಡು ನೋಡೋಣ ಮಗಳೇ  ಬಾಗಿ  ಓದಲು ಕೂತ ಚಿತ್ರ, ಸಾಕು ಏಐ ರಗಳೆ!

ರಹೀಮನ ದ್ವಿಪದಿಗಳು

 ಉತ್ತಮ ಪ್ರಕೃತಿಯ ಜನರನ್ನು ಕೆಡಿಸಲಾರದು ದುಷ್ಟರ ಸಂಗ| ಚಂದನವನ್ನು ಕೆಡಿಸದೋ ಹೇಗೆ  ಸುತ್ತಿಕೊಂಡ ಭುಜಂಗ|| (ಭುಜಂಗ : ಹಾವು) (ಬೇವು ಬೆಲ್ಲದೊಳಿಡಲೇನು ಫಲ ಎಂದು ದಾಸರು ಹಾಡಿದ್ದಾರೆ. ಅದರ ಪಾಸಿಟಿವ್ ಸ್ಪಿನ್ ಇಲ್ಲಿದೆ ನೋಡಿ.) (೨) ತನ್ನ ನೀರನ್ನು ತಾನೇ ಹೀರದು ನದಿ ತನ್ನ ಹಣ್ಣನ್ನು ತಾನೇ ಭಕ್ಷಿಸದು ಮರ| ಸಾಧುಸಂತರು ಹಾಗೇ ಪರಮಾರ್ಥಕ್ಕಾಗಿ  ಧರಿಸಿ ಬಂದಿರುತ್ತಾರೆ ಶರೀರ || (೩) ಮೌನವಾಗಿರಲು ಎರಡೂ ಒಂದೇ ಬಗೆ ಕೋಗಿಲೆ ಮತ್ತು ಕಾಗೆ| ಯಾರು ಏನೆಂದು ತಿಳಿಯುವುದು ವಸಂತ ಕಾಲಿಡುತ್ತಿದ್ದ ಹಾಗೇ|| (೪) ಕೆಟ್ಟ ಕಾಲ ಬಂದಾಗ ರಹೀಮ ಬಾಯಿಗೆ ಮೌನದ ಮುದ್ರೆ ಒತ್ತು | ಒಳ್ಳೆಯ ದಿನಗಳು ಬಂದಾಗ ಕೆಲಸ ಕೈಗೂಡುವುದೆಷ್ಟು ಹೊತ್ತು|| (೫) ಪರೋಪಕಾರ ಮಾಡುವ ಜನ ಧನ್ಯರು ಸೌಖ್ಯ ನೆಲೆಸುವುದು ಅವರಲ್ಲಿ| ಸದಾ ಶೋಭಾಯಮಾನವಾಗಿರುವಂತೆ ಗೋರಂಟಿ ಹಚ್ಚುವವರ ಕೈಯಿ|| (೬) ನಮ್ಮ ಕೈಯಲ್ಲಿರುವುದು ಏನಿದ್ದರೂ ಕೆಲಸ ಮಾಡುವುದು, ಅದರ ಫಲವಲ್ಲ| ದಾಳ ಹಾಕುವುದಷ್ಟೇ ನಮ್ಮ ಕೈಲಾಗುವುದು ಬೀಳುವ ಗರವು ನಮ್ಮ ಕೈಯಲ್ಲಿಲ್ಲ|| (೭) ಪ್ರಯತ್ನಿಸಿದರೆ ಮನಸ್ಸಿಟ್ಟು ಮನುಜನಿಗೆ ಸಾಧಿಸದಿರಲು ಏನಿದೆ ಕಾರಣ| ಮನಸ್ಸಿಟ್ಟು ಮಾಡಿದರೆ ಪ್ರಯತ್ನ ನರನಿಗೆ ವಶನಾಗುವನು ನಾರಾಯಣ|| (೮) ರಹೀಮ ಬಂದರೆ ಬರಲಿ ಬಿಡು ಸ್ವಲ್ಪ ದಿವಸ ವಿಪತ್ತು| ಯಾರು ಹಿತವರು ಯಾರಲ್ಲ ಎಂದು ತಿಳಿಯುವ ಹೊತ್ತು|| (೯) ಮೆತ್ತಗಾಗುವುದುಂಟೆ ರಹೀಮ ನೀರಲ್ಲಿಟ್ಟ ಕಲ್ಲು | ಮೂರ್ಖನಿಗೆ ಬಂದೀ...

ತಾಯಿ

ಇಮೇಜ್
 ತಾಯಿ ಟರ್ಕಿಯ ಭೂಕಂಪದ ನಾಲ್ಕು ದಿವಸಗಳ ತರುವಾಯ ಸಿಕ್ಕಿದ್ದಾರೆ ಜೀವಂತವಾಗಿ ಕಲ್ಲುಮಣ್ಣುಗಳ ತಳದಲ್ಲಿ ಹೊಕ್ಕಳುಬಳ್ಳಿಗೆ ಅಂಟಿಕೊಂಡಿದ್ದ ನವಜಾತ ಶಿಶು ಮತ್ತು ಪಕ್ಕದಲ್ಲಿ ಇನ್ನೂ ಜೀವಕ್ಕೆ ಅಂಟಿಕೊಂಡಿದ್ದ  ಅದರ ತಾಯಿ. ಮೂಳೆ ಕೊರೆವ ಚಳಿಯಲ್ಲಿ ಹೇಗೆ ಕಾಪಾಡಿದಳೊ ಎಳೆಯ ಬಾಳನ್ನು! ಎದೆಗವಚಿಕೊಂಡು, ಕತ್ತಲೆಯ ಕಂಬಳಿಯನ್ನೇ ಸೀಳಿ ಹೊದ್ದಿಸಿಕೊಂಡು! ತನ್ನೆದೆಯ ಹಾಲೇ ಅಮೃತವೆಂದು ಸೋಲನ್ನೊಪ್ಪದೆ ಹಾಡುತ್ತಾ ಕ್ಷೀಣದನಿಯಲ್ಲಿ ಹಳ್ಳುಳ್ಳಾಯಿ. ಎಲ್ಲಿದ್ದಾನೋ ಮಗುವಿನ ತಂದೆ! ಹುಡುಕುತ್ತಿರುವನೋ ಇಲ್ಲ ತತ್ತರಿಸಿಹೋದನೋ ವಿಧಿಯ ವಜ್ರಾಘಾತಕ್ಕೆ? ತಲ್ಲಣಿಸಿ ಅಳಲು ತಾಯಿಗೆ ಪುರುಸೊತ್ತೆಲ್ಲಿ! ಕರುಳಿನ ಬಳ್ಳಿಯನ್ನು ಕಾಪಾಡುವ ಹೊರೆಹೊತ್ತ ಏಕಧ್ಯೇಯಿ. ಕಪ್ಪುತೆರೆ ಆವರಿಸುತ್ತಿದೆ ಕಣ್ಮುಂದೆ, ನಿದ್ರೆಯ ಸುಖದ ಸುಪ್ಪತ್ತಿಗೆಯು ಕರೆಯುತ್ತಿದೆ, ಆದರೆ ಕಣ್ಮುಚ್ಚಲು ಅಳುಕು! ತಪ್ಪಿ ಕಣ್ತೆರೆಯದೇ ಹೋದರೆ ಏನಾದೀತು ಇದರ ಗತಿ! ಅಪ್ಪಿಕೊಂಡು ನನ್ನನ್ನೇ ನಂಬಿಕೊಂಡಿದೆ ಬಡಪಾಯಿ! ದೂರದಲ್ಲೆಲ್ಲೋ ಕುಟ್ಟಿದ ಸದ್ದು ಕೇಳುತ್ತಿದೆ, ಅರೆಮರುಳೇ? ತೂರಿ ಬರುತ್ತಿದೆ ಎಲ್ಲಿಂದಲೋ ಬೆಳಕು, ಸ್ವರ್ಗದ ಬಾಗಿಲೇ? ಯಾರೋ ಮೇಲೆತ್ತಿಕೊಂಡರು, ಅಂತಿಮಯಾತ್ರೆಯೇ? ನೀರು ಕುಡಿಸುತ್ತಿದ್ದಾರೆ! 'ನೋಡಿ ಇಲ್ಲಿದೆ ಮಗುವಿನ ಬಾಯಿ.' ದಪ್ಪ ಕಾಂಕ್ರೀಟ್ ಕೆಳಗೇನು ಸಿಕ್ಕಿತೆಂಬ ಪ್ರಶ್ನೆಗೆ ಸಪ್ಪಗೆ ನಕ್ಕು ಉತ್ತರಿಸಿದ  ರಕ್ಷಣಾ ಸಿಬ್ಬಂದಿ:  ಇಪ್ಪತ್ತುಸಾವಿರಕ್ಕೂ ಸ...

ಕಬೀರನ ವಜ್ರಗಳು

ಇಮೇಜ್
  (೧) ಅಂಥ ವಜ್ರವನ್ನು ಆಯ್ದುಕೋ ಎಂಥದ್ದು ಸಹಿಸಿಕೊಳ್ಳಬಲ್ಲದೋ ಸುತ್ತಿಗೆಯ ಪೆಟ್ಟು ಕಪಟಿಗಳನ್ನು ಎಂದಿಗೂ ನೆಚ್ಚದಿರು ಯಾರು ಹೊಳೆವರೋ ಬಣ್ಣದ ವೇಷವನು ತೊಟ್ಟು (ಜ್ಞಾನಿಗಳಂತೆ ತೋರುವವರೆಲ್ಲ ಜ್ಞಾನಿಗಳಲ್ಲ.) (೨) ನಿನ್ನ ವಜ್ರಗಳ ಥೈಲಿಯನು ತೆರೆಯದಿರು ಡೇರೆ ಹಾಕಿರುವ ಕಡೆ ಜನರು ಅಲೆಮಾರಿ ಗಂಟು ಹಾಕಿ ಭದ್ರ ಮಾಡಿಟ್ಟುಕೋ ಮತ್ತು ನಿನ್ನ ಪಾಡಿಗೆ ನೀನು ಹಿಡಿ ನಿನ್ನ ದಾರಿ (ಎಲ್ಲಾ ಕಡೆಗೂ ನಿನ್ನ ಜ್ಞಾನ ಪ್ರದರ್ಶಿಸಬೇಡ) (೩) ಎಣ್ಣೆಯನ್ನು ತನ್ನೊಳಗೆ ಇಟ್ಟುಕೊಂಡಂತೆ ಎಳ್ಳು ಬೆಂಕಿಯನ್ನು ತನ್ನೊಳಗೆ ಇಟ್ಟುಕೊಂಡಂತೆ ಕಲ್ಲು ಭಗವಂತನನ್ನು ಒಳಗೆ ಇಟ್ಟುಕೊಂಡಿರುವೆ ನೀನು ಸಾಧ್ಯವಾದರೆ ಕಣ್ತೆರೆದು ಮೇಲೆದ್ದು ನಿಲ್ಲು (೪) ಇಡೀ ಭೂಮಿಯನ್ನೇ ಮಾಡಿಕೊಂಡು ಕಾಗದ ಲೇಖನಿ ಮಾಡಿಕೊಂಡು ಎಲ್ಲ ವನಕಾನನ ಸಪ್ತ ಸಾಗರವನ್ನೇ ಮಾಡಿಕೊಂಡು ಮಸಿ ಬರೆದರೂ ಪೂರೈಸದು ಗುರುವಿನ ಗುಣಗಾನ (೫) ಏನು ಬಂದಂತೆ ನೀರೆರೆದು ಮಾಡಿದರೆ ಸ್ನಾನ  ಮಡಿಯಾಗದೆ ಕಳೆದು ಮನದೊಳಗಿನ ಮೈಲಿಗೆ ಬಿಟ್ಟಿತೇ ಹೇಳು ಮೀನಿನ ವಾಸನೆ ಮೈಯೊಳಗಿಂದ ಇದ್ದರೂ ಮೀನು ಸದಾಕಾಲ ನೀರೊಳಗೆ (೬) ಸಾಯದು ಮಾಯೆ, ಸಾಯದು ಮನಸ್ಸು ಸಾಯುವುದು ಪುನಃಪುನಃ  ಶರೀರ ಸಾಯದು ಆಸೆ, ಸಾಯದು ತೃಷ್ಣೆ ಇದೋ ಹೇಳಿ ಹೋಗಿದ್ದಾನೆ ಕಬೀರ (೮) ಮನವು ಸತ್ತಿತೆಂದು ಭಾವಿಸಿದೆ ನಾನು ಸತ್ತು  ತಾಳಿತೋ ಏನೋ ಪ್ರೇತ ರೂಪ ನನ್ನ ಬೆಂಬತ್ತಿದೆ ಸತ್ತ ನಂತರವೂ! ಹಾಳು ಮನಸ್ಸು ಅಂತಹ ಭೂಪ ! (೯) ಸರೋವರದಲ್ಲಿ ಅರ...