ಹೆಣಿಗೆ (ಕವನ)

ಹೆಣಿಗೆ



ಹೆಣಿಗೆಯಲ್ಲಿ ಏನೂ ತಪ್ಪಿಲ್ಲದಂತೆ ಜೋಕೆ

ಎಣಿಸುತ್ತ ಸಮ ಎಷ್ಟೆಂದು ಎಷ್ಟು ಬೆಸವೆಂದು

ಕುಣಿಕೆ ಹಾಕಿ ಕಡ್ಡಿಗೆ ಉಣ್ಣೆಯ ದಾರದಿಂದ

ಜಾಣತನದಿಂದ ಎಳೆದುಕೊಂಡು ಮತ್ತೊಂದನ್ನು

ಎಳೆದು ಭದ್ರಗೊಳಿಸುತ್ತ ಸಾಗುತ್ತಿವೆ ಬೆರಳು

ಬಳೆಗಳ ಸದ್ದು ಕಿಣಿಕಿಣಿಸುತ್ತಿರಲು ಹಿನ್ನೆಲೆಯಲ್ಲಿ

ತಳಕು ಹಾಕಿಕೊಂಡ ಅಸಂಖ್ಯ ಜಡೆಗಳನ್ನು;

ಅಳತೆಯನ್ನು ಅಂದಾಜಿಸುತ್ತವೆ ಆಗಾಗ ಕಣ್ಣು.

ಇಣುಕಿ ನಡುವೆ ಎಣಿಕೆ ತಪ್ಪಿತು ಎಂದೆಣಿಸದಿರು 

ಕಾಣುವ ಮಾದರಿಯಲ್ಲಿದ್ದರೂ ಅಸಮರೂಪ

ಹೆಣೆಯುತ್ತಿರಬಹುದು ಕೈಗಳು ಬೇರಾವುದೋ

ಗುಣವಿನ್ನೂ ಗಣಿಕೆಗೆ ಬರದ ಸಮಸೂತ್ರವನ್ನು.


ಜಡೆ ಹೆಣೆಯುವುದು ಬೇಡುತ್ತದೆ ಅಪಾರ ತಾಳ್ಮೆ

ಬಿಡದೆ ಹೆಣೆಯುತ್ತಿರುವುದರಲ್ಲಿ ಎಲ್ಲ ಮಹಿಮೆ.

  


ಲೀನಾ ನಿಯೋ ಅವರ ಕಲಾಕೃತಿ ನೋಡಿ ಬರೆದ ಚಿತ್ರಕವಿತೆ: ಸಿ ಪಿ ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)