ಅಲೆಕ್ಸಾಂಡರ್ ಮತ್ತು ಸಾವು
ಜಗತ್ತನ್ನೇ ಗೆದ್ದು ಬಂದ ಅಲೆಕ್ಸಾಂಡರ್ ಗೆಲ್ಲಲಾರಲಾಗದೆ ಮೃತ್ಯುವನ್ನು
ಅಗಣಿತ ಗೆಲುವುಗಳ ಕಿರೀಟ ತೊಟ್ಟು ಮರಳಿದವನು ಈಗ
ಅಂಗತ್ತ ಮಲಗಿದ್ದಾನೆ ಮಂಚದ ಮೇಲೆ. ವೈದ್ಯರ ಶುಶ್ರೂಷೆಗೆ ಶುಷ್ಕ
ನಗೆಯ ಉತ್ತರ ನೀಡಿ ಕುಡಿಯುತ್ತಾನೆ ಕಹಿ ಔಷಧ.
ನುಂಗಿತು ಕಾಲ ಪ್ರಾಣಗೆಳೆಯ ಹೆಫೆಸ್ಟಿಯಾನನ್ನು ಕಳೆದ ವರ್ಷ.
ಇಂಗಿತು ಆಗಲೇ ಜೀವದ ಮೇಲಿನ ಆಸೆ ಅರ್ಧಕ್ಕರ್ಧ. ನಡೆದ
ಸಂಗತಿಗಳೆಲ್ಲ ನೆನಪಿಗೆ ಬಂದು ಮಾಯವಾಗುತ್ತಿವೆ ನೆನ್ನೆಯಿಂದ.
ನುಂಗುತ್ತಾನೆ ಅವನು ನೋವನ್ನು. ಯೋಧನಿಗೆ ನೋವು ದೊಡ್ಡದೇ!
ಅಂಗರಕ್ಷಕನನ್ನು ಕರೆದು ಮೆಲ್ಲಗೆ ಉಸಿರುತ್ತಾನೆ ವೈದ್ಯರನ್ನು ಕರೆದು ತಾ.
ಕಂಗಳಲ್ಲಿ ದೈನ್ಯವಿದೆ. ವೈದ್ಯರೇ ನೀವೇ ನನ್ನ ದೇಹವನ್ನು ಹೊತ್ತು ತರಬೇಕು
ವಿಂಗಡಿಸಿ ಇಡಬೇಕು ನಾನು ಗೆದ್ದು ತಂದ ಐಶ್ವರ್ಯಗಳನ್ನು ದಾರಿಯಲ್ಲಿ.
ಮುಂಗೈಗಳು ಹೊರಗೇ ಇರಬೇಕು ದೇಹವನ್ನು ಹೂತಾಗ ಗೋರಿಯಲ್ಲಿ.
ಹೀಗೇಕೆ ಎಂದಿರಾ? ತಿಳಿಯಲಿ ಜನ ಯಾವ ವೈದ್ಯನೂ ಗೆಲ್ಲಲಾರ ಸಾವನ್ನು!
ನಗನಾಣ್ಯ ವಜ್ರವೈಢೂರ್ಯ ಮುತ್ತುರತ್ನ ಎಲ್ಲವನ್ನೂ ಇಲ್ಲೇ ಬಿಟ್ಟು ಬರಿದಾದ
ಅಂಗೈಗಳಲ್ಲೇ ಹೊರಟುಹೋದ ಅಲೆಕ್ಸಾಂಡರ್ ಎಂದು ಜನರಿಗೆ ಗೊತ್ತಾಗಲೆಂದು.

ಬದುಕನ್ನು ವಾಸ್ತವವಾಗಿ ಕನ್ನಡಿಸಿರುವ ಕವನ.
ಪ್ರತ್ಯುತ್ತರಅಳಿಸಿ