ಬೆಳಗಿನ ಹಾಡು

 

ಮೂಲ: ಸಾರಾ ಟೀಸ್‌ಡೇಲ್

ಅನುವಾದ: ಸಿ ಪಿ ರವಿಕುಮಾರ್




ವಜ್ರದಂತಹ ಬೆಳಗು ಕೂಗಿ ಎಬ್ಬಿಸಿತು ನನ್ನನ್ನು
ಏಕೋ ಒಂದು ಗಂಟೆ ಮುಂಚೆಯೇ ಇಂದು.
ನಸುಕು ಕೊಂಡೊಯ್ದಿತ್ತು ತಾರೆಗಳನ್ನು ತನ್ನೊಂದಿಗೆ
ಬಿಟ್ಟು ಹೋಗಿತ್ತು ಬಾನಲ್ಲಿ ಬೆಳ್ಳನೆಯ ಬಿಂದು.

ಓಹ್ ಇಂದು! ನೀನು ಏಕಾಂಗಿನಿ!
ಇರಲಿ ಬಿಡು, ನಿನ್ನಂತೆಯೇ ಒಂಟಿ ನಾನು ಕೂಡಾ.
ಆದರೆ ನಮಗಿದೆ ಸುತ್ತಾಡಲು ಇಡೀ ಜಗತ್ತು,
ಒಂಟಿಯಾದವರಿಗೆ ಮಾತ್ರ ಈ ಸ್ವಾತಂತ್ರ್ಯ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ