ಚಾಟ್ ಜಿಪಿಟಿ

 ಗಜಲ್ 🌹

ಇನ್ನೆಷ್ಟು ಜಗಳಗಳನ್ನು ತಂದಿಡುವುದೋ ಚಾಟ್ ಜಿಪಿಟಿ
ಅದನ್ನೂ ನೀನೇ ಹೇಳಿಬಿಡು ಚಾಟ್ ಜಿಪಿಟಿ

ಎಷ್ಟು ತ್ರಿಶಂಕುಗಳಿಗೆ ನೀನು ಕೊಡಿಸುವೆ ಮುಕ್ತಿ
ಅದನ್ನೂ ನೀನೇ ಹೇಳಿಬಿಡು ಚಾಟ್ ಜಿಪಿಟಿ

ಹುಟ್ಟುವ ಮಕ್ಕಳ ಮಿದುಳಲ್ಲಿ ಚಾಟ್ ಜಿಪಿಟಿ -
ಚಿಪ್ಪು ಜೋಡಿಸಬಹುದೇ ಹೇಳು ಚಾಟ್ ಜಿಪಿಟಿ

ಮಾತಾಡಿಕೊಳ್ಳುತ್ತಾರೆ ಸ್ಕ್ರೋಲ್ ಮಾಡುತ್ತ ಪಿಟಿಪಿಟಿ
ನಿನ್ನದೇ ಜಪ ಮಾಡುತ್ತಾರೆ ಚಾಟ್ ಜಿಪಿಟಿ

ಎಲ್ಲರೂ ಜಾಣರಾಗಿ ಸಿದ್ಧವಾಗಿದೆ ಸ್ಮಾರ್ಟ್ ಸಿಟಿ
ಹೇಳು ಇನ್ನೇನು ಬೇಕು ಜೀವಕ್ಕೆ, ಚಾಟ್ ಜಿಪಿಟಿ

ಗಜಲ್ 🌹🌹 

ಎಲ್ಲ ಕೆಲಸಗಳನ್ನೂ ಮಾಡಲಿದೆ ಏಐ 
ಕೈಗೆ ಕೆಲಸವಿಲ್ಲದೆ ಮಿಲಾಯಿಸೋಣ ಕೈಕೈ

ಎಲ್ಲರಿಗೂ ಎಲ್ಲ ನೀಡಲಿದೆ ಏಐ
ತಾಳು ಮನವೇ ಸುಮ್ಮನೇ ತಲ್ಲಣಿಸದಿರೈ

ಎಲ್ಲರಿಗೂ ವಿದ್ಯೆ ನೀಡಲಿದೆ ಏಐ 
ಹೇಳಿರಿ ಎಲ್ಲರೂ ವಿದ್ಯಾ ಏಐಪತಿಕೀ ಜೈ

ಎಲ್ಲರಿಗೂ ಬುದ್ಧಿ ನೀಡಲಿದೆ ಏಐ 
ಎಲ್ಲರಿಗೂ ಸದ್ಬುದ್ಧಿಯೇ ಎಂದು ಹೇಳಲಾಗದೈ 

ಎಲ್ಲರಿಗೂ ಜ್ಞಾನ ನೀಡಲಿದೆ ಏಐ 
ಗುರುಪೂರ್ಣಿಮೆಯ ದಕ್ಷಿಣೆ ಏಐಗೆ ನೀಡಿರೈ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ