ನನ್ನ ಪುಟ್ಟ ದೋಣಿ

 



ನನ್ನ ಪುಟ್ಟ ದೋಣಿಯನ್ನು 
ನೀರಿನಲ್ಲಿ ತೇಲಿಬಿಟ್ಟು
ಮುಂದೆ ಸಾಗು ಎಂದು ನಾನು
ಅಣತಿ ಮಾಡಿದೆ!
ಇಲ್ಲ ದೋಣಿ ಸಾಗಲಿಲ್ಲ,
ಮುಂದೆ ಮುಂದೆ ಹೋಗಲಿಲ್ಲ,
ನಿಂತು ನನ್ನ ಅಣಕಿಸಿತು,
ಮುಂದೆ ಕದಲದೆ!

ನನ್ನ ಗೆಳತಿ ಸಪ್ಪೆ ಮೋರೆ
ಹಾಕಿಕೊಂಡು ನೋಡಿದಳು,
ದೋಣಿ ಏಕೆ ತೇಲದೆಂದು
ಅವಳ ಕಾತುರ!
ಕೈಗಳಿಂದ ನೀರು ಬಡಿದು
ಅಲೆಯ ಮಾಡಿ ತಳ್ಳಿದಾಗ
ದೋಣಿಯಲ್ಲಿ ಕಂಡು ಬಂತು
ತೇಲುವಾತುರ!

ಬೀಸಿತಾಗ ತಂಪು ಗಾಳಿ
ಅಲುಗತೊಡಗಿ ದೋಣಿ ಹಾಯಿ
ಕಾಣಬಂತು ಅದರ ನಡೆಯೊ-
ಳೊಂದು ಸಂಭ್ರಮ!
ದೋಣಿ ತೇಲುವುದನು ಕಂಡು
ಚಪ್ಪಾಳೆಯ ತಟ್ಟಿ ನನ್ನ
ಕೈಯ ಹಿಡಿದು ಮಾಡಿದಳು
ಗೆಳತಿ, ನರ್ತನ!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)