ಮರದ ಹಾಡು
ಮೂಲ ... ನಂದ್ ಸಾರಸ್ವತ್
ಕನ್ನಡಕ್ಕೆ .. ಸಿ.ಪಿ. ರವಿಕುಮಾರ್

ಮರವೂ ಯಾವಾಗ ಬೇಡುವುದೋ ನೆರಳು
ಮರುಳೇ ಆವಾಗ ಹಳ್ಳಿಗೇ ಮರಳು
ಹೆದ್ದೆರೆಗಳ ದೋಷವೇನಿಹುದು ಹೇಳಿ
ಅಂಬಿಗನು ಮುಳುಗಿಸಲು ಹೊರಟಾಗ ದೋಣಿ
ಗಾಯವೆಂಬುದು ಎಂದೂ ಮಾಗಲೇ ಇಲ್ಲ
ಬಿಡದೆ ನಮ್ಮವರೇ ಕೆದರುತ್ತಿದ್ದರಲ್ಲ
ಎರಡು ಮೆಟ್ಟಿಲು ಹತ್ತಿ ಜಾರಿದೆನು ಮೂರು
ಕಾಲೆಳೆವ ಆಟಗಳು ಗೆಳೆಯರಿಗೆ ನೂರು
ಬೆಲೆಯು ಸಿಕ್ಕದೆ ಮಾರಲೂ ಆಗಲಿಲ್ಲ
ಮಾಡಿಬಿಟ್ಟರು ನಮ್ಮವರೇ ಅಪಮೌಲ್ಯ
ಕಾಪಾಡಿಕೊಳ್ಳುವುದು ಹೇಗೆ ಈ ಪ್ರಾಣ?
ನಡೆದುಹೋಗಲಿ ಬಿಡಿ ಕೊಡಲಿ ಆಕ್ರಮಣ
Super sir Lyrics
ಪ್ರತ್ಯುತ್ತರಅಳಿಸಿದರ್ಶನ್ ಅವರೇ, ಧನ್ಯವಾದಗಳು.
ಅಳಿಸಿ