ನೋವಿನಲ್ಲಿ ಅರಳಿ ತೋರಿಸು ನೋಡೋಣ
ಮೂಲ ... ನಂದ್ ಸಾರಸ್ವತ್
ಕನ್ನಡಕ್ಕೆ ... ಸಿ.ಪಿ.ರವಿಕುಮಾರ್

ನೋವಿನಲ್ಲಿ ಅರಳಿ ತೋರಿಸು ನೋಡೋಣ
ಎಲ್ಲರೊಂದಿಗೆ ನಗೆಸೂಸಿ ತೋರಿಸು, ನೋಡೋಣ
ಯಾರದೋ ಮನೆಯನ್ನು ಹಚ್ಚಿರುವೆ ಕಿಚ್ಚು
ಮೂಲೆಯಲ್ಲೊಂದು ಒಲೆಹೂಡಿ ತೋರಿಸು, ನೋಡೋಣ
ನಿಂತಿರುವೆ ಯಾರದೋ ಮುಂದೆ ಕೈ ಮುಗಿದು
ಜಗವನ್ನು ಬಗ್ಗಿಸಿ ತೋರಿಸು, ನೋಡೋಣ
ಬಗೆಹರಿಯಿತೇ ಜಗಳದಿಂದ ವ್ಯಾಜ್ಯ ಯಾವುದಾದರೂ
ಪ್ರೀತಿಯನು ಹಬ್ಬಿಸಿ ತೋರಿಸು, ನೋಡೋಣ
ಕೈಯಲ್ಲಿ ಕತ್ತಿಯನು ಹಿಡಿದು ನಿಂತಿರುವೆ
ಗಾಯವನು ಗುಣ ಮಾಡಿ ತೋರಿಸು, ನೋಡೋಣ
ಕಡಿದು ಹಾಕಿದ್ದಾಯು ತರುಲತೆಗಳನ್ನು
ಮಾಡಿತೋರಿಸು ಒಂದು ಹೂದೋಟ, ನೋಡೋಣ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ