ಒರೆಹಚ್ಚಿ ನೋಡಬಾರದೇನು ನನ್ನನ್ನು
ಮೂಲ ... ನಂದ್ ಸಾರಸ್ವತ್
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್

ಒಮ್ಮೆ ಒರೆಹಚ್ಚಿ ನೋಡಬಾರದೇನು ನನ್ನನ್ನು
ನನ್ನವಳಾಗು ಇಲ್ಲ ನಿನ್ನವನಾಗಗೊಡು ನನ್ನನ್ನು
ತೋಡಿಕೊಳ್ಳುವೆ ಅಂತರಂಗವನ್ನೆ ನಿನ್ನ ಬಳಿ
ಆಡಿ ಮಾತೆರಡು, ಕೇಳಲೊಪ್ಪಿದರೆ ಮಾತನ್ನು
ಸೋಲುವೆನು ನನ್ನ ಹೃದಯವನ್ನೆ ನಿನ್ನ ಪ್ರೇಮದೊಳು
ಗೆಲ್ಲು ನನ್ನನ್ನು, ಒಮ್ಮೆ ಸೋಲಿಸು ಬಾ ನನ್ನನ್ನು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ