ನಡೆಯೋಣ ದುಃಖಗಳ ಅಧ್ಯಾಯ ಕೊನೆಗೊಳಿಸಿ
ಮೂಲ ... ನಂದ್ ಸಾರಸ್ವತ್
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್

ನಡೆಯೋಣ ನಮ್ಮ ಧೋರಣೆಗಳ ಮೇಳವಿಸಿ
ನಡೆಯೋಣ ದುಃಖಗಳ ಅಧ್ಯಾಯ ಕೊನೆಗೊಳಿಸಿ
ಸಹಿಸಿಕೊಂಡದ್ದು ಸಾಕು ನೋವು ಪರಿತಾಪ
ನಡೆ ಮುನ್ನಡೆಯೋಣ ಇವುಗಳನಿಲ್ಲೇ ತ್ಯಜಿಸಿ
ಎಷ್ಟು ಸಹಿಸುವುದು ಏಕೆ ಸಹಿಸುವುದು ದುರಾಚಾರ
ನಡೆ ಮುಂದೆ ರಕ್ತ ಕಣ್ಣೀರುಗಳನೊರೆಸಿ
ನಡುಗುವುದೇಕೆ ಹೇಳು ಜಗದ ಭೀತಿಯಲ್ಲಿನ್ನೂ
ಮುನ್ನಡೆಯೋಣ ಜಗದ ಪಂಥವನ್ನು ಸ್ವೀಕರಿಸಿ
ಅಲ್ಲಿ ಇಲ್ಲೆಂದು ಎಲ್ಲ ಕಡೆಗೂ ಅಲೆದಾಡಿದೆವು
ಬಾ, ನಡೆ, ಗುರಿಸೇರುವ ಮಾರ್ಗವನ್ನು ಅನುಸರಿಸಿ
ಸಾಕು ಓದಿದ್ದು ಅಮರಪ್ರೇಮಗಳ ಕಹಿಕಥನ
ನಡೆ ಪುಟವನ್ನು ತಿರುವಿ ಹೊಸ ಅಧ್ಯಾಯವನರಸಿ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ