ಪೋಸ್ಟ್‌ಗಳು

2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಾಜಪೇಯಿ ಅವರ ಎರಡು ಕವಿತೆಗಳು

ಇಮೇಜ್
  ಮೂಲ ಹಿಂದಿ ಕವಿತೆ: ಅಟಲ್ ಬಿಹಾರಿ ವಾಜಪೇಯಿ  ಕನ್ನಡಕ್ಕೆ: ಸಿ ಪಿ ರವಿಕುಮಾರ್   ಕ್ಷಮಾಯಾಚನೆ  ನಮ್ಮನ್ನು ಕ್ಷಮಿಸು ಬಾಪೂ! ನಾವು ವಚನ ಮುರಿದ ಅಪರಾಧಿಗಳು, ರಾಜಘಾಟ್ ನಮ್ಮಿಂದ ಅಪವಿತ್ರವಾಯಿತು, ಯಾತ್ರೆ ಮಧ್ಯದಲ್ಲೇ ಗುರಿಯನ್ನು ಮರೆತೆವು. ಜಯಪ್ರಕಾಶ್ ಜೀ! ನಂಬಿಕೆ ನಮ್ಮಲ್ಲಿರಲಿ, ಭಗ್ನ ಸ್ವಪ್ನಗಳ ಪುನಃ ಜೋಡಿಸಿ ಉರಿದ ಚಿತೆಯ ಭಸ್ಮದ ಕಿಡಿಯಿಂದ ಕತ್ತರಿಸುವೆವು ಕತ್ತಲ ಬಂಧ! ಸ್ವಾತಂತ್ರ್ಯ  ಸ್ವಾತಂತ್ರ್ಯೋತ್ಸವ  ಆಚರಿಸುವೆವು ಹೊಸ ಗುಲಾಮಗಿರಿ ನಡುವೆ; ಒಣಗಿದೆ ನೆಲ, ಅಂಬರ ಬರಿದಾಗಿದೆ, ಮನಸಿನಲ್ಲಿ ಬರಿ ಕೊಚ್ಚೆ; - ಮನಸಿನಲ್ಲಿ ಬರಿ ಕೊಚ್ಚೆ, ಒಣಗಿಹವು ಕೆಂದಾವರೆ ಒಂದೊಂದೂ, ಆರಿಹೋಗಿ ಒಂದೊಂದೇ ದೀಪ, ಎಲ್ಲೆಡೆ ಕತ್ತಲು ಕವಿದು. ಕೈದಿಯಾಗಿರುವ ಕವಿಯ ಉವಾಚ, ಕಳೆದುಕೊಳ್ಳದಿರು ಸ್ಥೈರ್ಯ, ನಿಶಾರಕ್ಕಸಿಯ ಎದೆಯ ಸೀಳಿ ಕಂಗೊಳಿಸಿ ಮಿನುಗುವನು ಸೂರ್ಯ!

ಹಣತೆಯ ಮತ್ತೆ ಬೆಳಗುವ ಬನ್ನಿ!

ಇಮೇಜ್
ಮೂಲ ಹಿಂದಿ ಕವಿತೆ : ಅಟಲ್ ಬಿಹಾರಿ ವಾಜಪೇಯಿ  ಅನುವಾದ: ಸಿ ಪಿ ರವಿಕುಮಾರ್  ಕವಿತೆಯನ್ನು ಕುರಿತು   ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ನಮ್ಮ ದೇಶದ ಪ್ರಧಾನಿಯಾಗಿದ್ದವರು. ಅವರು ಹಿಂದಿಯಲ್ಲಿ ಎಂಟು ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಈ ಕವಿತೆಯಲ್ಲಿ ಕವಿಗೆ ದೇಶ ಹಾದಿ ತಪ್ಪುತ್ತಿದೆ ಎನ್ನುವ ತಲ್ಲಣವಿದೆ. ಸುತ್ತಲೂ ತಮ (ಕತ್ತಲು) ಕವಿದಂತೆ ಭಾಸವಾಗುತ್ತಿದೆ. ಕತ್ತಲೆ ಇರುವುದು ನಮ್ಮ ಮನಸ್ಸಿನ ಒಳಗೆ; ಅದನ್ನು ಹೋಗಲಾಡಿಸಲು ನಮಗೆ ಬೇಕಾಗಿರುವುದು ವಿದ್ಯೆ ಮತ್ತು ಇಚ್ಛಾಶಕ್ತಿ. ಇಂದಿನ ಮೋಹದಲ್ಲಿ ನಾವು ನಾಳೆಯನ್ನೇ ಮರೆತು ಬಿಡುತ್ತಿದ್ದೇವೆಯೇ ಎಂದು ಕವಿಗೆ ಭಯವಾಗುತ್ತದೆ. ನಮ್ಮ ದೇಶ ಇನ್ನೂ ಪ್ರಗತಿಪಥದಲ್ಲಿ ಸಾಕಷ್ಟು ಮುಂದೆ ಹೋಗಬೇಕಾಗಿದೆ. ಈ ಪ್ರಗತಿಯಲ್ಲಿ ನಮ್ಮ ಒಳಜಗಳಗಳೇ ನಮಗೆ ವಿಘ್ನಗಳು. ದೇವ-ದಾನವರ ಕಾಳಗದಲ್ಲಿ ಬೇಕಾದ ವಜ್ರಾಯುಧವನ್ನು ದಧೀಚಿ ಎಂಬ ಮಹರ್ಷಿಯ ಬೆನ್ನುಮೂಳೆಯಿಂದ ತಯಾರಿಸಲಾಯಿತಂತೆ. ಇಂದಿನ ಯುವಕರು ತಮ್ಮ ಪ್ರಯಾಸದಿಂದ ವಿಘ್ನಗಳನ್ನು ಪಾರು ಮಾಡಿ ದೇಶವನ್ನು ಮುಂದಕ್ಕೆ ಕರೆದೊಯ್ಯಬೇಕು ಎಂಬುದು ಕವಿಯ ಆಶಯ.  ನಡುಹಗಲಲ್ಲೂ  ತಮಾಂಧಕಾರ ನೆರಳಿಗೆ ಸೋತಿರುವನು ದಿವಾಕರ ಒಳಗಿನ ತಮಸ್ಸಿಗೆ ನೀಡು ತಿಲಾಂಜಲಿ ಮನಸಿನಾಳಕ್ಕೆ ಬೆಳಕು ಹರಿಯಲಿ!               ಹಣತೆಯ ಮತ್ತೆ ಬೆಳಗುವ ಬನ್ನಿ! ಬಳಸನ್ನೇ ಗುರಿಯೆಂದು ನಂಬಿದೆವು...

ಕೆಲವಂ ಬಲ್ಲವರಿಂದ && ಬಲ್ಲೆವೆಂದು ಬಲ್ಲವರಿಂದ ಕಲ್ತು

ಇಮೇಜ್
ಬಹಳ ಹಿಂದೆ ನಾನು  ಇಂಗ್ಲಿಷ್ ಭಾಷಾಂತರದಲ್ಲಿ ಓದಿದ ಒಂದು ಅರೇಬಿಯನ್ ಗಾದೆ ಹೀಗಿದೆ: ಯಾರಿಗೆ ಗೊತ್ತಿದೆಯೋ ಮತ್ತು ತಮಗೆ ಗೊತ್ತು ಎಂದು ಗೊತ್ತಿದೆಯೋ ಅವನು ಜ್ಞಾನಿ, ಅವನನ್ನು ಗುರುವಾಗಿ ಸ್ವೀಕರಿಸು. ಯಾರಿಗೆ ಗೊತ್ತಿದೆಯೋ, ಆದರೆ   ತಮಗೆ ಗೊತ್ತಿದೆ ಎಂದು ಗೊತ್ತಿಲ್ಲವೋ ಅವರನ್ನು ನಿದ್ರೆಯಿಂದ ಎಚ್ಚರಿಸು.  ಯಾರಿಗೆ ಗೊತ್ತಿಲ್ಲವೋ ಮತ್ತು ತಮಗೆ ಗೊತ್ತಿಲ್ಲವೆಂದು ಗೊತ್ತಿದೆಯೋ ಅವರು ಮುಗ್ಧರು, ಅವರಿಗೆ ತಿಳುವಳಿಕೆ ನೀಡು. ಯಾರಿಗೆ ಗೊತ್ತಿಲ್ಲವೋ ಮತ್ತು ತಮಗೆ ಗೊತ್ತಿಲ್ಲವೆಂದೂ   ಗೊತ್ತಿಲ್ಲವೋ ಅವರು ಮೂರ್ಖರು, ಅವರಿಂದ ದೂರವಿರು. ನೀವು ಯಾವುದೋ ವಿಷಯವನ್ನು ಕುರಿತು ವಿಷಯ ಸಂಗ್ರಹಣೆ ಮಾಡಬೇಕು ಎಂದುಕೊಳ್ಳಿ. ಈಗಂತೂ ಗೂಗಲ್ಲಿಗೆ ಹೋಗಿ ಏನೇ ಹುಡುಕಿದರೂ ಅದು ಪುಟಗಟ್ಟಲೆ ಮಾಹಿತಿ ಕಕ್ಕಿಬಿಡುತ್ತದೆ! ಇವುಗಳಲ್ಲಿ ಯಾವುದನ್ನು ನಂಬುವುದು? ಯಾವುದನ್ನು ಸ್ವೀಕರಿಸುವುದು? ಅರೇಬಿಯನ್ ಗಾದೆ ನಮಗೆ ಸಹಾಯ ಮಾಡುತ್ತದೆ.  ಕೆಲವರಿಗೆ ವಿಷಯ ಗೊತ್ತಿರುತ್ತದೆ; ಅಷ್ಟೇ ಅಲ್ಲ, ತಮಗೆ ಅದು ಗೊತ್ತು ಎಂಬುದರ ಅರಿವೂ ಇರುತ್ತದೆ. ಹೀಗಾಗಿ ಅವರನ್ನು ಕೇಳಿದರೆ ಅವರು ಆತ್ಮವಿಶ್ವಾಸದಿಂದ ನಿಮಗೆ ವಿಷಯವನ್ನು ಹೇಳಿಕೊಡುತ್ತಾರೆ. ಇಂಥ ಗುರುಗಳು ಸಿಕ್ಕುವುದು ಅಪರೂಪ. ಕುಮಾರವ್ಯಾಸ "ಗುರುವರಿಯದವನೆ ಮರುಳ" ಎಂದಿದ್ದಾನೆ. ಇಂಥ ಗುರುಗಳು ಸಿಕ್ಕಾಗ ಗುರುತಿಸದೇ ಹೋದವನು ಮರುಳ ಎನ್ನುವುದು ಈ ಮಾತಿನ ಅರ್ಥ.  ...

ಏನೋ ತಪ್ಪಾಗಿದೆ ಎಂದೇ ಅರ್ಥ

ಇಮೇಜ್
(ಪೇಶಾವರ್ ಹುತಾತ್ಮರಿಗೆ  ಶ್ರದ್ಧಾಂಜಲಿ) ಮೂಲ ಹಿಂದಿ ಕವಿತೆ - ಪ್ರಸೂನ್ ಜೋಷಿ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ನಿ ನ್ನ ತೋಳುಗಳಲ್ಲಿ ಬಾಲ್ಯ ಯಾವಾಗ ಬರಲು ಹಿಂಜರಿಯುವುದೋ ತಾಯ ಗರ್ಭದಿಂದ ಇಣುಕಿದ ಜೀವ ಯಾವಾಗ ಹೊರಬರಲು ಅಳುಕುವುದೋ ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ. ಖಡ್ಗಗಳು ಯಾವಾಗ ಹೂಗಳ ಮೇಲೆ ಪ್ರಹಾರ ಮಾಡುತ್ತವೋ ಮುಗ್ಧ ಕಣ್ಣುಗಳಲ್ಲಿ ಯಾವಾಗ ಭೀತಿ ಇಣುಕುತ್ತದೋ ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ. ಕೋಮಲ ಹಿಮಬಿಂದುಗಳ ಧಾರೆ ಅಂಗೈ ಮೇಲಲ್ಲದೆ  ಶಸ್ತ್ರಗಳ ಅಲುಗಿನಲ್ಲಿ ಹರಿದಾಗ  ಹಾದುಹೋಗಬೇಕಾದಾಗ ಪುಟ್ಟ ಪುಟ್ಟ ಹೆಜ್ಜೆಗಳು ಬೆಂಕಿಯ ನಡುವೆ  ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ. ಹೆದರಿಕೆಗೆ ಒಮ್ಮೆಲೇ ನಿಂತುಹೋದಾಗ ನಗು-ಕೇಕೆ ಸ್ಮಶಾನಮೌನದಲ್ಲಿ ಕರಗಿಹೋದಾಗ ತೊದಲು ನುಡಿ ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ. ಅಂತಿಂಥ ತಪ್ಪಲ್ಲ, ತೀರಾ ದೊಡ್ಡದೇ ನಡೆದುಹೋಗಿದೆ. ಜೋರಾಗಿ ಮಳೆಯಾಗಬೇಕಾಗಿತ್ತು ಇಡೀ ಜಗತ್ತಿನಲ್ಲಿ. ಎಲ್ಲಾ ಕಡೆ ಹನಿಯಬೇಕಾಗಿತ್ತು ಕಣ್ಣೀರು. ಮೇಲಿರುವವನು ಬಿಕ್ಕಿಬಿಕ್ಕಿ ಅಳಬೇಕಾಗಿತ್ತು ಆಕಾಶದಲ್ಲಿ. ನಾಚಿಕೆಯಿಂದ ತಗ್ಗಬೇಕಾಗಿತ್ತು ಮನುಷ್ಯನ ಸಭ್ಯತೆಯ ಕುತ್ತಿಗೆ. ಶೋಚನೀಯ ಕಾಲವಲ್ಲ ಇದು, ಯೋಚನೆಯ ಕಾಲ; ಅಂತ್ಯಕ್ರಿಯೆಯ ಕಾಲವಲ್ಲ ಇದು, ಪ್ರಶ್ನೆಗಳ ಕಾಲ; ಇಷ್ಟಾದ ಮೇಲೂ ಮಾನವ ತಲೆ ಎತ್ತಿ ನಿಲ್ಲಬಲ್ಲವನೇ ಆದರೆ ತಿಳಿದುಕೋ, ಏನೋ ತಪ...

ಕನ್ನಡ ಡಿಂಡಿಮ

ಇಮೇಜ್
ಬೆಂಗಳೂರಿನಲ್ಲಿ ನಡೆದ ಕೆಲವು ಘಟನೆಗಳು. ಘಟನೆ ಒಂದು. ಸ್ಥಳ - ಕ್ಷೌರದ ಅಂಗಡಿ. ಈಗ ಅದನ್ನು ಯಾರೂ ಈ ಹೆಸರಿನಿಂದ ಕರೆಯುವುದಿಲ್ಲ. "ಸಲೂನ್", "ಹೇರ್ ಡ್ರೆಸಿಂಗ್ ಸಲೂನ್", ಇತ್ಯಾದಿ ಹೆಸರುಗಳಿಂದ ಕರೆಯುವುದು ರೂಢಿಯಾಗಿದೆ. ಮಾತಾಡುವಾಗ ಕೆಲವರು "ಬಾರ್ಬರ್ ಶಾಪ್" ಅಂತಲೂ ಕರೆಯಬಹುದು.  ನಾನು ನನ್ನ ತಲೆಯನ್ನು ಬಾರ್ಬರನಿಗೆ ಒಪ್ಪಿಸಿ ಕುಳಿತಿದ್ದೇನೆ.  ಗಿರಾಕಿಗಳು ಕಾಯಲು ಕೂಡುವ ಬೆಂಚಿನ ಮೇಲೆ ಒಬ್ಬ ಪುಟ್ಟ ಹುಡುಗ ತಾಯಿಯ ಜೊತೆ ಕುಳಿತಿದ್ದಾನೆ. ಪುಟ್ಟ ಹುಡುಗನ ತಮ್ಮ ತಾಯಿಯ ತೊಡೆಯ ಮೇಲೆ ಕುಳಿತಿದ್ದಾನೆ. ಬೆಂಚ್ ಮೇಲೆ ಕುಳಿತ ಹುಡುಗ ಅರಳು ಹುರಿದ ಹಾಗೆ ತಮ್ಮ ಮತ್ತು ತಾಯಿಯ ಜೊತೆ ಕನ್ನಡದಲ್ಲಿ ಹರಟೆ ಹೊಡೆಯುತ್ತಿದ್ದಾನೆ. ಅವನ ಭಾಷೆ ಕೇಳಲು ನಿಜಕ್ಕೂ ಚೆನ್ನಾಗಿದೆ.  ಅವನು ಹೇಳಿದ್ದಕ್ಕೆಲ್ಲಾ ಅವನ ತಾಯಿ ಮುರುಕಲು ಇಂಗ್ಲಿಷ್ ನಲ್ಲಿ ಉತ್ತರ ಕೊಡುತ್ತಿದ್ದಾಳೆ. ಈಕೆ ಬಾಬ್ ಕಟ್ ಮಾಡಿಸಿಕೊಂಡಿರುವುದನ್ನು ನಾನು ಕನ್ನಡಿಯಲ್ಲಿ ಗಮನಿಸುತ್ತೇನೆ. ಘಟನೆ ಎರಡು. ಒಂದು ಕಾಲೇಜಿನಲ್ಲಿ ನನ್ನನ್ನು ಮೀಟಿಂಗ್ ಗಾಗಿ ಕರೆದಿದ್ದಾರೆ. ಗೇಟ್ ನಲ್ಲಿ ಆರಕ್ಷಕ ಸಿಪಾಯಿ (ಸೆಕ್ಯೂರಿಟಿ ಗಾರ್ಡ್) ನಮ್ಮ ಕಾರನ್ನು ಒಂದು ಕ್ಷಣ ನಿಲ್ಲಿಸಿ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಾನೆ. ನನ್ನನ್ನು ಕರೆದುಕೊಂಡು ಹೋದ ಡ್ರೈವರ್ ಗೆ ಇದು ಗೊತ್ತಿದೆ - ಅವನು ಅದನ್ನು ತಿಳಿಸುತ್ತಾನೆ. (ಟ್ಯಾಕ್ಸಿ ಡ್ರೈವರ್ ಕನ್ನಡ ಬಲ್ಲವನು ...

ರಾಜ್ ಕಪೂರ್ ನೆನಪು

ಇಮೇಜ್
ಸಿ ಪಿ ರವಿಕುಮಾರ್ ಈ ನವೆಂಬರ್ ತಿಂಗಳಲ್ಲಿ ನಾನು ವಿಮಾನದಲ್ಲಿ ಬೆಂಗಳೂರಿನಿಂದ ಅಮೆರಿಕಾಗೆ ಪ್ರಯಾಣ ಮಾಡಿದಾಗ ಭಾರತೀಯ ಭಾಷೆಗಳ ಅನೇಕ ಚಲನಚಿತ್ರಗಳು ಮನರಂಜನೆಯ ಮೆನುವಿನಲ್ಲಿದ್ದವು. ಬಾಲಿವುಡ್ ಚಿತ್ರಗಳಲ್ಲದೆ ಕನ್ನಡ, ತಮಿಳು, ತೆಲುಗು ಚಿತ್ರಗಳೂ ಇವುಗಳಲ್ಲಿ ಸೇರಿದ್ದವು. ಕೇವಲ ಐದು ವರ್ಷಗಳ ಹಿಂದೆ ಈ ಸ್ಥಿತಿ ಇರಲಿಲ್ಲ. ಮನರಂಜನೆ ಎಂದರೆ ಹಾಲಿವುಡ್ ಚಿತ್ರಗಳು ಮಾತ್ರ ಎನ್ನುವ ಪರಿಸ್ಥಿತಿ ಇತ್ತು. ಇವತ್ತು ಭಾರತದಲ್ಲಿ ತಯಾರಾದ ಚಲನಚಿತ್ರಗಳಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಬಹುಶಃ ಮೊಟ್ಟಮೊದಲು ಭಾರತೀಯ ಚಿತ್ರಗಳನ್ನು ನಮ್ಮ ದೇಶದಿಂದ ಹೊರಗೆ ಜನಪ್ರಿಯಗೊಳಿಸಿದ ಕೀರ್ತಿ ರಾಜ್ ಕಪೂರ್ ಅವರಿಗೆ ಸಲ್ಲುತ್ತದೆ. ಐವತ್ತು ಮತ್ತು ಅರವತ್ತರ ದಶಕಗಳಲ್ಲಿ ಅವರು ತಯಾರಿಸಿದ ಕಪ್ಪು-ಬಿಳುಪು ಚಿತ್ರಗಳು ರಷ್ಯಾ ಮತ್ತು ಜಪಾನ್ ದೇಶಗಳಲ್ಲಿ ಜನಪ್ರಿಯವಾದವು. ಆವಾರಾ ಚಿತ್ರವಂತೂ ಅದ್ಭುತ ಯಶಸ್ಸು ಗಳಿಸಿತು. ನೆಹರೂ ಅವರ ಸರ್ಕಾರ ರಷ್ಯನ್ ದೇಶದೊಂದಿಗೆ ವಿಶೇಷ ಸಂಬಂಧ ಹೊದಿದ್ದು ಕೂಡಾ ಇದಕ್ಕೆ ಕಾರಣವಾಗಿರಬಹುದು. ರಷ್ಯನ್ ಮತ್ತು ಜಪಾನ್ ದೇಶದ ಜನರಿಗೆ ರಾಜ್ ಕಪೂರ್ ಅವರ ಮುಗ್ಧ ಪಾತ್ರಗಳ ಅಭಿನಯ ಹಿಡಿಸಿತು. ಮುಂದೆ "ಮೇರಾ ನಾಮ್ ಜೋಕರ್" ಎಂಬ ರಾಜ್ ಕಪೂರ್ ಚಿತ್ರದಲ್ಲಿ ಒಬ್ಬ ರಷ್ಯನ್ ನಟಿ ನಟಿಸಿದರು ಕೂಡಾ. ಸಮಾಜದ ಅನ್ಯಾಯಗಳಿಗೆ ಸಿಕ್ಕಿ ಹಾಕಿಕೊಳ್ಳುವ ಒಬ್ಬ ಮುಗ್ಧ ಯುವಕನ ಪಾತ್ರಗಳಲ್ಲಿ  ರಾಜ್ ಕಪೂರ್ ಎಲ್ಲರ ಸಹಾನುಭೂತಿ ...

ಓಜಿಮಾಂಡಿಯಾಸ್

ಇಮೇಜ್
ಓಜಿಮಾಂಡಿಯಾಸ್  ಮೂಲ ಕವಿತೆ - ಪಿ ಬಿ ಷೆಲ್ಲಿ ಕನ್ನಡಕ್ಕೆ - ಸಿ ಪಿ ರವಿಕುಮಾರ್  ದೂ ರದಾವುದೋ ಪುರಾತನ ನೆಲದಿಂದ ಊರುತ್ತಾ ಕೋಲನ್ನು ಬಂದ ಯಾತ್ರಿಕನೊಬ್ಬ ಅರುಹಿದನು - ಮುಂಡವಿಲ್ಲದ ಕಲ್ಲಿನ ದೊಡ್ಡ ಕಾಲುಗ- ಳೆರಡು ನಿಂತಿವೆ ಮರಳುಗಾಡಲ್ಲಿ; ಬದಿಯಲ್ಲಿ ಅರೆಬರೆ ಹೂತುಹೋದ ಭಗ್ನ ಮುಖದಲ್ಲಿ ಕೆರಳಿದೆ ಮುಂಗೋಪ, ತಿರುಚಿದ ತುಟಿಯಲ್ಲಿ ಮರಗಟ್ಟಿದೆ ಯಾವುದೋ ಆದೇಶ; ಶಿಲ್ಪಿ ಯಾರೋ ಗ್ರಹಿಸಿ ಸೆರೆ ಹಿಡಿದಿದ್ದಾನೆ ಕ್ರೂರ ಹೃದಯದ ಸೊಕ್ಕು; ಪೀಠದ ಮೇಲೆ ಬರೆದಿದೆ - "ಓ ನೋಡಿ, ನನ್ನ ಹೆಸರು ಓಜಿಮಾಂಡಿಯಾಸ್, ಅರಸರ ಅರಸ, ಇಗೋ ನಾನು ಸೃಷ್ಟಿಸಿದ ಸಾಮ್ರಾಜ್ಯ, ಹಿರಿಯರಸರೆಲ್ಲಾ ನೋಡಿ ಹಲುಬಿ!" ಬೇರೇನೂ ಉಳಿದಿಲ್ಲ ಮುರುಕಲು ಕಲ್ಲುಶಿಲೆ ಬಿಟ್ಟರೆ, ಮರಳು ಹರಡಿದೆ ಕಣ್ ದೃಷ್ಟಿ ಹರಿವವರೆಗೆ. (c) C.P. Ravikumar, 2014 Kannada Translation of 'Ozymandias' - English poem by P.B. Shelley

ಮುಪಾಸಾ - ಒಂದು ವ್ಯಕ್ತಿ ಚಿತ್ರ

ಇಮೇಜ್
ಮುಪಾಸಾ - ಒಂದು ವ್ಯಕ್ತಿ ಚಿತ್ರ  ಸಿ ಪಿ ರವಿಕುಮಾರ್  ಎ ಮಿಲಿ ಜೋಲಾ ನಂತರ ಫ್ರೆಂಚ್ ಸಾಹಿತ್ಯದಲ್ಲಿ ಪ್ರಸಿದ್ಧಿಯ ತುದಿಯನ್ನೇರಿದವನು ಸಣ್ಣಕತೆಗಾರ ಗಿ ಡಿ ಮುಪಸಾ. ಮುನ್ನೂರಕ್ಕೂ ಹೆಚ್ಚು ಸಣ್ಣಕತೆಗಳನ್ನು ಮುಪಸಾ ಬರೆದ. ಸಣ್ಣಕತೆಗಳ ಸಾಮ್ರಾಜ್ಯದ ಅನಭಿಷಕ್ತ ಸಾಮ್ರಾಟ ಎಂದು ಅವನನ್ನು ಕರೆಯುತ್ತಾರೆ.  ಸಣ್ಣಕತೆಗಳಲ್ಲದೆ ಸುಮಾರು ಇನ್ನೂರು ಲೇಖನಗಳು, ಆರು ಕಾದಂಬರಿಗಳು ಮತ್ತು ಮೂರು ಪ್ರವಾಸಕಥನಗಳು ಇವನ ಲೇಖನಿಯಿಂದ ಹೊರಬಿದ್ದವು. ಮುಪಾಸಾ ಹುಟ್ಟಿದ್ದು ಶ್ರೀಮಂತ ಕುಟುಂಬದಲ್ಲಿ (ಆಗಸ್ಟ್ 5, 1850). ತಾಯಿ ಲಾರಾ ಅಂದಿನ ಪ್ರಸಿದ್ಧ ಲೇಖಕ ಫ್ಲಾಬರ್ಟ್ ನ ಬಾಲ್ಯ ಸ್ನೇಹಿತೆ. ಹೀಗಾಗಿ  ಮನೆಯಲ್ಲಿ ಸಾಹಿತ್ಯಕ ವಾತಾವರಣವಿತ್ತು.  ಆದರೆ ತಂದೆ ಗುಸ್ತಾವ್ ಗೆ ಲೌಕಿಕ ವ್ಯವಹಾರಗಳಲ್ಲಿ  ಹೆಚ್ಚು ಆಸಕ್ತಿ; ಸಾಹಿತ್ಯ-ಸಂಸ್ಕೃತಿಗಳ ಕಡೆ ಅಸಡ್ಡೆ. ಹೀಗಾಗಿ ಮುಪಸಾನ ತಂದೆ-ತಾಯಿ ಕ್ರಮೇಣ ದೂರವಾದರು. ಅವನು ಹದಿಮೂರು ವರ್ಷದ ಬಾಲಕನಾಗಿದ್ದಾಗ ಅವರು ವಿಚ್ಛೇದನ ಪಡೆದರು. ಬೋರ್ಡಿಂಗ್ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯಿತು.  ಬುದ್ಧಿವಂತ ಎಂಬ ಹೆಸರು ಗಳಿಸಿದರೂ ಅಸಭ್ಯ ಪದ್ಯ ಬರೆದ ಕಾರಣಕ್ಕೆ ಶಾಲೆಯಿಂದ ಮುಪಸಾನನ್ನು ಉಚ್ಚಾಟನೆ ಮಾಡಲಾಯಿತು.  ಆಗ ಅವನ ತಾಯಿ ರೂವೆನ್ ಪಟ್ಟಣಕ್ಕೆ ಬಂದು ಮಕ್ಕಳನ್ನು ಬೇರೊಂದು ಶಾಲೆಗೆ ದಾಖಲು ಮಾಡಿದಳು. ತಾಯಿಯ ಬಲವಂತದ ಕಾರಣ ಹದಿನೇಳು ವರ್ಷದವನಾಗ...

ಬೆಣ್ಣೆ ಮುದ್ದೆ - ಭಾಗ ೯

ಇಮೇಜ್
ಬೆಣ್ಣೆ ಮುದ್ದೆ - ಭಾಗ ೯ ಫ್ರೆಂಚ್ ಕತೆ - ಗಿ ಡಿ ಮುಪಸಾ  ಕನ್ನಡಕ್ಕೆ - ಸಿ ಪಿ ರವಿಕುಮಾರ್  (ಇದು ಕಡೆಯ ಭಾಗ -  ಎಂಟನೇ ಭಾಗವನ್ನು ಇಲ್ಲಿ ಓದಿ )  ಅ ವರು ಇಡೀ ಮಧ್ಯಾಹ್ನ ಅವಳಿಗೆ ಯೋಚಿಸಲು ಅವಕಾಶ ಮಾಡಿಕೊಟ್ಟರು. ಆದರೆ ಅವಳನ್ನು "ಮದಾಂ"   ಎಂದು ಸಂಬೋಧಿಸುವ ಬದಲು "ಮದಮೊಸೆಲ್" ಎಂದು ಸಂಬೋಧಿಸಿದರು. ತಮ್ಮ ದೃಷ್ಟಿಯಲ್ಲಿ ಅವಳು ಒಂದು ಅಂಗುಲ ಗಾತ್ರ  ಕೆಳಕ್ಕಿಳಿದಿದ್ದಾಳೆ ಎಂದು ಸೂಕ್ಷ್ಮವಾಗಿ ಬೊಟ್ಟು ಮಾಡಿದಂತೆ ತೋರಿತು. ಸಂಜೆಯ ಉಪಾಹಾರ ಬಡಿಸಿದ ನಂತರ ವಸತಿಗೃಹದ ಮಾಲೀಕ ಪ್ರತ್ಯಕ್ಷನಾಗಿ ಮತ್ತೆ ಅದೇ ಹಾಡು ಹಾಡಿದ - "ಮಿಸ್ ಎಲಿಜಬೇತ್ ರೂಸೋ ತಮ್ಮ ನಿಲುವು ಬದಲಾಯಿಸಿದ್ದಾರೆಯೇ ಎಂದು ಕೇಳಲು ಪ್ರಷ್ಯನ್ ಅಧಿಕಾರಿ ನನ್ನನ್ನು ಕಳಿಸಿದ್ದಾರೆ." ಬೆಣ್ಣೆಮುದ್ದೆ ಅಷ್ಟೇ ಒಣಕಲು ಸ್ವರದಲ್ಲಿ "ಇಲ್ಲ," ಎಂದಳು. ರಾತ್ರಿಯ ಊಟದ ವೇಳೆ ಪ್ರಯಾಣಿಕರ ಮೈತ್ರಿಕೂಟ ಸ್ವಲ್ಪ ಬಡವಾದಂತೆ ಕಂಡಿತು. ಲುಸೆವೂ ಒಂದಲ್ಲ ಮೂರು ಸಲ ಕಹಿಯಾಗಿ ಮಾತಾಡಿದ. ಪ್ರತಿಯೊಬ್ಬರೂ ಹೆಣ್ಣಿನ ತ್ಯಾಗದ ಹೊಸ ನಿದರ್ಶನಕ್ಕಾಗಿ ತಮ್ಮ ಸ್ಮೃತಿಪಟಲಗಳಲ್ಲಿ ವ್ಯರ್ಥವಾಗಿ ಹುಡುಕಾಡಿದರು. ಕೌಂಟೆಸ್ ಗೆ ಒಮ್ಮೆಲೇ ಅದೇಕೋ ಧರ್ಮವನ್ನು ಕುರಿತು ಸ್ವಲ್ಪ ಜಿಜ್ಞಾಸೆ ಮಾಡುವ ಹಂಬಲ ಉಂಟಾಗಿ ಸಾಧ್ವಿಗಳನ್ನು "ಸಂತರು ಮಾಡಿದ ಯಾವುದಾದರೂ ಕಾರ್ಯಗಳ ವಿಷಯ ಹೇಳಿ" ಎಂದು ಕೇಳಿಕೊಂಡಳು. ಅವರು ಹೇಳಿದ ಕತೆಗಳನ್ನು ...

ಬೆಣ್ಣೆಮುದ್ದೆ - ಭಾಗ ೮

ಇಮೇಜ್
ಬೆಣ್ಣೆಮುದ್ದೆ - ಭಾಗ  ೮  ಮೂಲ ಫ್ರೆಂಚ್ ಕತೆ - ಗಿ ಡಿ ಮುಪಸಾ  ಕನ್ನಡಕ್ಕೆ - ಸಿ ಪಿ ರವಿಕುಮಾರ್   ( ಏಳನೇ ಭಾಗ ಇಲ್ಲಿ ಓದಿ ) ಈ ಗ ಶ್ರೀಮತಿ ಲುಸೆವೂ ತನ್ನ ನಾಲಿಗೆ ಹರಿಯಬಿಟ್ಟಳು. "ನಾವೇನು ಇಲ್ಲಿ ಮುದುಕರಾಗುವ ತನಕ ಇರಬೇಕಂತೇನು! ಈ ಹಲ್ಕಾ ಹೆಣ್ಣು ಎಂತೆಂಥವರ ಜೊತೆಗೋ ಹೋಗಿದ್ದಾಳೆ. ಇವನ ಜೊತೆ ಹೋಗೋದಕ್ಕೆ ಏನು ಬಿನ್ನಾಣವೋ ಕಾಣೆ! ರೂವೆನ್ ಪಟ್ಟಣದಲ್ಲಿ ಫ್ರೆಂಚ್ ಅಧಿಕಾರಿಗಳು ಹಾಗಿರಲಿ ಅವರ ಗಾಡಿ ಓಡಿಸುವವರ ಜೊತೆ ಕೂಡಾ ಇವಳ ಧಂಧೆ ನಡೆದಿದೆ! ಹೂಂ, ಯಾಕೆ ಹೇಳ್ತೀರಿ! ಪ್ರಿಫೆಕ್ಟ್ ನ ಗಾಡಿ ಓಡಿಸುವವನು! ಅವನ ಪರಿಚಯ ನನಗೆ ಚೆನ್ನಾಗಿದೆ. ಅವನು ವೈನ್ ಕೊಳ್ಳುವುದೇ ನನ್ನ ಮನೆಯಿಂದ! ಅಂಥಾ ಹಲ್ಕಾಹೆಣ್ಣಿನ ಕಾರಣ ನಾವು ಇಂಥಾ ಹೇಯ ಪರಿಸ್ಥಿತಿಗೆ ಸಿಕ್ಕಿಹಾಕಿಕೊಳ್ಳುವುದೇ! ನನ್ನ ಮಾತು ಕೇಳಿದರೆ ಈ ಆಫೀಸರ್ ನಡತೆ ಚೆನ್ನಾಗೇ ಇದೆ. ಅವನು ಬೇಕಾದರೆ ನಮ್ಮಲ್ಲಿ ಯಾರನ್ನಾದರೂ ಒಬ್ಬರನ್ನು ಕೇಳಬಹುದಾಗಿತ್ತು. ಆದರೆ ಅವನಿಗೂ ನಿಯತ್ತು ಅನ್ನೋದು ಒಂದು ಇದೆ ನೋಡಿ. ಮದುವೆ ಆದವರು, ಮರ್ಯಾದಸ್ಥರು ಅಂತ ನಮ್ಮ ತಂಟೆಗೆ ಬರಲಿಲ್ಲ. ಅವಳ ಹತ್ತಿರ ಹೋದ. ಅವನೇ ಇಲ್ಲಿಗೆ ಸರದಾರ ಅನ್ನೋದನ್ನು ನಾವು ಮರೆಯೋಕಾಗುತ್ಯೆ? ಅವನು ಒಂದು ಮಾತು ಅಂದರೆ ಅವನ ಸೈನಿಕರು ಬಂದು ನಮ್ಮನ್ನು ದರದರ ಅಂತ ಎಳೆದು ಕರೆದುಕೊಂಡು  ಹೋಗಿ ಅವನ ಮುಂದೆ ನಿಲ್ಲಿಸುತ್ತಾರೆ!" ಇದನ್ನು ಕೇಳಿ ಇನ್ನಿಬ್ಬರು ಮಹಿಳೆಯರಿಗೆ ನ...

ಬೆಣ್ಣೆ ಮುದ್ದೆ - ಭಾಗ ೭

ಇಮೇಜ್
ಬೆಣ್ಣೆಮುದ್ದೆ - ಭಾಗ ೭ ಮೂಲ ಫ್ರೆಂಚ್ ಕತೆ - ಗಿ ಡಿ ಮುಪಸಾ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ( ಆರನೇ ಭಾಗ ಇಲ್ಲಿ ಓದಿ ) ಈಗ ಎಲ್ಲರ ಬಾಯಿ ಕಟ್ಟಿಹೋಯಿತು. ಅಪಮಾನದ ಚಾಟಿ ಏಟು ಜೋರಾಗಿತ್ತು. ಕಾನ್ವುಡೇ ತನ್ನ ಮುಷ್ಟಿಯನ್ನು ಮೇಜಿಗೆ ಕೋಪದಿಂದ ಗುದ್ದಿದ. ಆ ರಭಸಕ್ಕೆ ಅವನ ಗಾಜಿನ ಲೋಟ ಕೆಳಗುರುಳಿ ಚೂರುಚೂರಾಯಿತು. ಎಲ್ಲರೂ ಜರ್ಮನ್ ಅಧಿಕಾರಿಗೆ ಶಾಪ ಹಾಕಿದರು. ಕೋಪದಲ್ಲಿ ಅವರು ಒಗ್ಗಟ್ಟಾದರು. ಜರ್ಮನ್ ಅಧಿಕಾರಿ ತಮ್ಮನ್ನೇ ವ್ಯಭಿಚಾರಕ್ಕೆ ಆಹ್ವಾನಿಸಿದಂತೆ ಅವರಿಗೆ ಅನ್ನಿಸಿತು. ಇದೆಂಥ ಬರ್ಬರ ಪದ್ಧತಿ ಎಂದು ಕೌಂಟ್ ಹರಿಹಾಯ್ದ. ಹೆಂಗಸರು ಅವಳನ್ನು ಸಮಾಧಾನ ಪಡಿಸಿ ಅವಳೊಂದಿಗೆ ಕರುಣೆ-ಸಹಾನುಭೂತಿಗಳೊಂದಿಗೆ ನಡೆದುಕೊಂಡರು. ಊಟದ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಸಾಧ್ವಿಗಳು ಮುಖ ಕೆಳಕ್ಕೆ ಹಾಕಿ ಮೌನವಾಗಿ ಕುಳಿತರು. ಕೋಪದ ಅಲೆ ಶಮನವಾದ ನಂತರ ಅವರು ಊಟಕ್ಕೆ ಕುಳಿತರು. ಯಾರೂ ಹೆಚ್ಚು ಮಾತಾಡಲಿಲ್ಲ. ಎಲ್ಲರೂ ಆಲೋಚನೆಯಲ್ಲಿ ಮಗ್ನರಾಗಿದ್ದರು. ಊಟವಾದ ನಂತರ ಹೆಂಗಸರು ಕೋಣೆಗಳಿಗೆ ತೆರಳಿದರು. ಗಂಡಸರು ಹೊಗೆಸೊಪ್ಪು ಸೇದುತ್ತಾ ಅಲ್ಲೇ ಇಸ್ಪೀಟ್ ಆಟಕ್ಕೆ ಕುಳಿತು ವಸತಿಗೃಹದ ಮಾಲೀಕನನ್ನೂ ಕೂಡಿಸಿಕೊಂಡರು. ಜರ್ಮನ್ ಅಧಿಕಾರಿಯನ್ನು ಗೆಲ್ಲುವುದು ಹೇಗೆ ಎಂಬ ಬಗ್ಗೆ  ಅವನಿಂದ ಏನಾದರೂ  ಸುಳಿವು ಸಿಕ್ಕಬಹುದೇ ಎಂಬುದು ಅವರ ಆಶಯ. ಆದರೆ ಅವನಿಗೆ ಮಾತಾಡುವುದಕ್ಕಿಂತ ಆಟದಲ್ಲಿ ಆಸಕ್ತಿ. ಅವರ ಪ್ರಶ್ನೆಗ...

ಬೆಣ್ಣೆ ಮುದ್ದೆ - ಭಾಗ ೬

ಇಮೇಜ್
ಬೆಣ್ಣೆ ಮುದ್ದೆ - ಭಾಗ ೬  ಫ್ರೆಂಚ್ ಕತೆ - ಗಿ ಡಿ ಮುಪಸಾ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ( ಐದನೇ ಭಾಗ ಇಲ್ಲಿ ಓದಿ ) ಮ ರುದಿನ ಬೆಳಗ್ಗೆ ಎಂಟುಗಂಟೆಗೆ ಹೊರಡುವ ನಿರ್ಧಾರವಾಗಿತ್ತು. ಎಲ್ಲರೂ ಹಜಾರದಲ್ಲಿ ಸೇರಿದರು. ಆದರೆ ಮೇಲೆಲ್ಲಾ ಮಂಜಿನಿಂದ ಆವೃತವಾಗಿದ್ದ ಗಾಡಿಗೆ ಇನ್ನೂ ಕುದುರೆಗಳನ್ನು ಕಟ್ಟಿರಲಿಲ್ಲ. ಗಾಡಿಯ ಚಾಲಕನ ಸುಳಿವೇ ಇರಲಿಲ್ಲ. ಮನೆಯಲ್ಲಿ ಎಲ್ಲಿ ಹುಡುಕಿದರೂ ಅವನ ಪತ್ತೆ ಇಲ್ಲ. ಅವನನ್ನು ಹುಡುಕಿಕೊಂಡು ಅವರು ಪಟ್ಟಣದ ಒಳಗೆ ಹೋದರು. ಅದೊಂದು ಚಿಕ್ಕ ಊರು. ಊರಿನ ನಡುವಿನ ಚೌಕದ ಒಂದು ಕಡೆ ಚರ್ಚ್ ಇತ್ತು. ಉಳಿದ ಮೂರೂ ಕಡೆ ಪುಟ್ಟ ಮನೆಗಳಿದ್ದವು.  ಅಲ್ಲಿ ಕೆಲವು ಪ್ರ್ಯಷ್ಯನ್ ಸೈನಿಕರು ಕಾಣಿಸಿದರು. ಒಬ್ಬ ಆಲೂಗಡ್ಡೆಗಳ ಸಿಪ್ಪೆ ತೆಗೆಯುತ್ತಿದ್ದ. ಇನ್ನೊಬ್ಬ ಕ್ಷೌರದಂಗಡಿಯನ್ನು ಶುಚಿ ಮಾಡುತ್ತಿದ್ದ. ಮೂರನೆಯವನೊಬ್ಬ ಕಂಕುಳಲ್ಲಿ ಅಳುವ ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡುತ್ತಿದ್ದ.  ಯುದ್ಧಕ್ಕೆ ಹೋಗಿದ್ದ ತಮ್ಮ ಗಂಡಂದಿರು ಮಾಡಬೇಕಾದ ಕೆಲಸಗಳನ್ನು ಹಳ್ಳಿಯ ಹೆಂಗಸರು ಈ ವಿಧೇಯ ಸೈನಿಕರಿಗೆ ಹಚ್ಚಿದ್ದರು.  ಸೌದೆ ಕಡಿಯುವುದು, ಸೂಪ್ ತಯಾರಿಸುವುದು, ಕಾಫಿಬೀಜ ಪುಡಿಮಾಡುವುದು, ಇತ್ಯಾದಿ ಇತ್ಯಾದಿ. ಒಬ್ಬನಂತೂ ಕೈಲಾಗದ ವಯಸ್ಸಾದ ಮನೆಯೊಡತಿಯ ಬಟ್ಟೆಗಳನ್ನೂ ಒಗೆಯುತ್ತಿದ್ದ. ಕೌಂಟ್ ಇದನ್ನೆಲ್ಲಾ ನೋಡಿ ಆಶ್ಚರ್ಯಚಕಿತನಾಗಿ ಚರ್ಚ...