ದುಃಖ ಉಮ್ಮಳಿಸಿತು

ಮೂಲ ಗಜಲ್ - ಶಕೀಲ್  ಬದಾಯೂನಿ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್  
Image result for disappointment

ದುಃಖ ಉಮ್ಮಳಿಸಿತು ಓ ಪ್ರೇಮವೇ  ನಿನ್ನ ಪ್ರತಿಫಲ ನೆನೆದು
ದುಃಖ ಉಮ್ಮಳಿಸಿತು ಯಾಕೋ ನಿನ್ನ  ಹೆಸರನು ನೆನೆದು

ಸಂಜೆಗಳು ಕಳೆವುವು ಹಾಗೂ ಹೀಗೂ ಭರವಸೆಗಳ ಮೇಲೆ
ಇಂದದೇನಾಯಿತೋ  ದುಃಖ ಉಮ್ಮಳಿಸಿತು ಸಂಜೆಯ ನೆನೆದು

ಅತ್ತ   ಭವಿಷ್ಯವು ನಿರ್ನಾಮ, ಇತ್ತ  ಜಗದೊಳೆಲ್ಲರ  ಮುನಿಸು
ಪ್ರತಿ ಹೆಜ್ಜೆಗೂ ದುಃಖ ಉಮ್ಮಳಿಸಿತು ಪ್ರೇಮದ ದಾರಿಯ ಹಿಡಿದು

ಹಾಳು ಈ ಗೋಳ ಕರೆ ತೊಡರಿತು ನನ್ನದೇ ಕಾಲಿಗೆ ಏಕೆ?
ದುಃಖ ಉಮ್ಮಳಿಸಿತು ನನ್ನ ವಿಧಿ ಲಿಖಿತವ  ನೆನೆದು

ಯಾರೇ ಹಾಡಲಿ  ಪ್ರೇಮದ ಮಾತನ್ನು ತೆಗೆದು
 ದುಃಖ ಉಮ್ಮಳಿಸಿತು ನನ್ನ ಭಗ್ನ ಹೃದಯವ ನೆನೆದು 
(ಚಿತ್ರ ಕೃಪೆ - ವಿಕಿಮೀಡಿಯಾ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)