ಪೋಸ್ಟ್‌ಗಳು

ಸೆಪ್ಟೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜಯ ಭಾರತೀ ವಸುಂಧರೆ!

ಇಮೇಜ್
ಮೂಲ ಹಿಂದಿ ಕವಿತೆ - ಸೂರ್ಯಕಾಂತ ತ್ರಿಪಾಠಿ  ನಿರಾಲಾ   ಜಯ ಭಾರತೀ ವಸುಂಧರೆ, ಕನಕ-ಸಸ್ಯ-ಕಮಲಧರೆ!  ಶ್ರೀಲಂಕೆಯ ಪದತಲ, ಪದ್ಮಪೀಠ  ಶತದಳ  ಪೂಜ್ಯ ಚರಣ ಯುಗಳವ,  ಸ್ತುತಿಸಿ ಶುಭ್ರಗೊಳಿಸುವ  ನೀಲಕಡಲ ಹೆದ್ದೆರೆ!  ವನ-ಉಪವನ-ತರುಲತೆ ಸಸ್ಯವಸನ ಶೋಭಿತೆ ಕೊರಳಿನಲ್ಲಿ ಫಳಫಳ ಗಂಗೆಯ ಜ್ಯೋತಿರ್ಜಲ ಹಾರದಂತೆ ಹೊಳೆದಿದೆ! ಮುಕುಟ ಶುಭ್ರ ಹಿಮ-ತುಷಾರ, ಪ್ರಾಣ ಪ್ರಣವ ಓಂಕಾರ ಗೊಳ್ಳುತಿಹುದು ಅನುರಣ, ಕೋಟಿಕೋಟಿ ಹೃನ್ಮನ  ಒಂದು ಕೊರಳು, ಒಂದೆದೆ! (ಚಿತ್ರ - ವಿಕಿಪೀಡಿಯಾ) 

ಭಾರತಮಾತೆ ಗ್ರಾಮವಾಸಿಣಿ!

ಮೂಲ ಹಿಂದಿ ಕವಿತೆ - ಸುಮಿತ್ರಾನಂದನ್ ಪಂತ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಭಾರತಮಾತೆ ಗ್ರಾಮವಾಸಿಣಿ ಹೊಲಗಳಲ್ಲಿ ಬಹುದೂರದವರೆಗೂ  ಹರಡಿದೆ ಈಕೆಯ ಮಾಸಿದ ಸೆರಗು  ಕಣ್ಣೊಳು ಗಂಗಾಜಮುನೆಯ ನೀರು  ಮಣ್ಣಿನ ಪ್ರತಿಮೆ! ಏಕೋ ಉದಾಸಿನಿ! ಭಾರತಮಾತೆ, ಗ್ರಾಮವಾಸಿಣಿ! ದೀನ ನೋಟ, ಕೆಳಬಾಗಿದ ವದನ, ತುಟಿಗಳಲ್ಲಿ ಚಿರನೀರವ ರೋದನ,  ಯುಗಗಳ ಕತ್ತಲು, ಬಹುವಿಷಣ್ಣ ಮನ, ತನ್ನ ಮನೆಯೊಳಗೇ ಇವಳು ಪ್ರವಾಸಿನಿ! ಭಾರತಮಾತೆ, ಗ್ರಾಮವಾಸಿಣಿ! ಹಡೆದ ಮೂವತ್ತುಕೋಟಿ ಮಕ್ಕಳೂ  ಅರೆನಗ್ನರು, ಹಸಿದವರು, ಶೋಷಿತರು, ಮೂಢ-ಅಸಭ್ಯ-ಅಶಿಕ್ಷಿತ-ನಿರ್ಗತಿಕರು, ನತಮಸ್ತಕ ಮರ-ಬುಡ ನಿವಾಸಿಣಿ!  ಭಾರತಮಾತೆ, ಗ್ರಾಮವಾಸಿಣಿ! ದರೋಡೆಯಾಗಿದೆ ಚಿನ್ನದ ಗೂಡು, ವಿಶಾಲ ಮನೆ-ಮನ ಎರಡೂ ಬರಡು, ನಡುಗುವ ತುಟಿಗಳು, ನಿಶಬ್ದ ಹಾಡು, ರಾಹುಗ್ರಸ್ತ ಶರದಿಂದುಹಾಸಿಣಿ! ಭಾರತಮಾತೆ, ಗ್ರಾಮವಾಸಿಣಿ! ಚಿಂತೆಯಲ್ಲಿ ಗಂಟಾಗಿವೆ ಹುಬ್ಬು, ಮಂಜಾಗಿವೆ ಹನಿಗೂಡಿದ ಕಣ್ಣು, ಉಪಮಿಸಲೇ ಮುಖಚಂದ್ರಮನನ್ನು? ಜ್ಞಾನ-ಮೂಢ ಗೀತಾಪ್ರಕಾಶಿಣಿ! ಭಾರತಮಾತೆ, ಗ್ರಾಮವಾಸಿಣಿ! ತಪ-ಸಂಯಮ ಫಲ ನೀಡಿತು ಕೊನೆಗೂ  ಊಡಿಸಿ ಅಹಿಂಸೆ ಎಂಬ ಎದೆಹಾಲು  ಜನಮನಭಯ  ಭವತನುಭ್ರಮೆ  ಕಳೆದಳು  ಜಗಜನನೀ ಜೀವನ ವಿಕಾಸಿನಿ! ಭಾರತಮಾತೆ, ಗ್ರಾಮವಾಸಿಣಿ! ...

ಬಾ ಈ ದೀಪವು ಮಸುಕಾದಾಗ!

ಇಮೇಜ್
  ಮೂಲ ಹಿಂದಿ ಕವಿತೆ - ಮಹಾದೇವಿ ವರ್ಮಾ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಈ ಚಂಚಲ ಕನಸುಗಳು ಅಮಾಯಕ, ಬೆಳೆಸಿರುವೆನು ಕಣ್ಣೀರಿನಲಿ,  ಮೃದು ಕಣ್ ರೆಪ್ಪೆಯ ತೊಟ್ಟಿಲೊಳಿಟ್ಟು ತೂಗಿರುವೆನು ನಿದ್ರೆಯ ಬಿಟ್ಟು ಸೌರಭವೆಂಬ ರೆಕ್ಕೆಯನಿತ್ತು  ತಲುಪಿಸು ಎಲ್ಲಾ ಕಣ್ಗಳಿಗೆ! ಸಂಜೆಯ ಕರುಣಾಮಯ ಅಂಕವು ಶುರುವಾಗಿದೆ, ರಂಗೇರಿದೆ ಮುಸ್ಸಂಜೆ ಸಂಧ್ಯೆಯ ನಭದೊಳು ಬಣ್ಣದ ಜೊತೆಗೇ ಕವಿದಿಹ ವರ್ಷಾಕಾಲದ ಮೋಡಕ್ಕೆ ವಿದ್ಯುತ್ ಸ್ಪರ್ಶದ ಚೇತನ ನೀಡಿ  ತೋರು ದಾರಿ ಪ್ರತಿಯೊಂದೂ ಎದೆಗೆ! ಪುಳಕ ತುಂಬಿರುವ ಪ್ರತಿ ಕ್ಷಣಕ್ಷಣವೂ ಪಾವನ ಸ್ನೇಹಾಮೃತದೊಳು ಮಿಂದು ಹೊಳೆಯುತ್ತಿವೆ ಜ್ವಾಲಾ ಚುಂಬನಕೆ! ನೀಡಿ ತಾರೆಗಳ ಪ್ರಾಣದ ಭಿಕ್ಷೆ ಮಾಡು ಶೂನ್ಯ ಶ್ವಾಸಗಳ ರಕ್ಷೆ,  ಅಮೃತಗಳಿಗೆಗಳು ಇವುಗಳಿಂದಲೇ! ಇದು ಚಿರ ಉಜ್ಜ್ವಲ ಅನಂತ ಜೀವನ- ನಾಟಕದೊಳು ವ್ಯಥೆ-ಅಂಕದ ಸ್ಪಂದನ! ಇದು ಚೆದುರಿದ, ವಿಸ್ಮೃತ ಬದುಕಿನ ಕಥೆ ಮಾಸಿದ ಈ ಹಾಳೆಯಿಂದಲೇ ಚರಿತೆ ಬರೆಯಲು ಆರಂಭಿಸು,  ನೀಡು ಅಕ್ಷರದ ಘನತೆ! ಬತ್ತಿಯನ್ನು ಗುರುತಿಸಿರುವುದು ಹಣತೆ ಬತ್ತಿ ಸ್ನೇಹವನ್ನು ಗುರುತಿಸಿದೆ ಸ್ನೇಹ ಗುರುತಿಸಿದೆ ಮಲಿನ ಸೆರಗನು ಚಿರಬಂಧನದೊಳು ಬಂಧಿಸಿ ಇವನು ವರವ ತಾ ನೀನು ತೊಳೆದು ಶುಭ್ರವಾಗುವಂತೆ! ಕವಿತೆಯ ಸ್ವಾರಸ್ಯ: ಇದು ಬದುಕಿನ ಸಂಜೆಯಲ್ಲಿರುವ ಒಂದು ಜೀವದ ಸ್ಪಂದನ.   ತಾನು ಕಂಡ  ಎ...

ನೀಡೌ, ವೀಣಾವಾದಿನಿ, ವರವ!

ಇಮೇಜ್
ಮೂಲ - ಸೂರ್ಯಕಾಂತ ತ್ರಿಪಾಠಿ "ನಿರಾಲಾ" ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನೀಡೌ, ವೀಣಾವಾದಿನಿ, ವರವ! ನವ ಸ್ವಾತಂತ್ರ್ಯದ  ಅಮೃತಮಂತ್ರವು  ತುಂಬುವಂತೆ ಭಾರತವ! ಸೀಳಿ ಅಂಧಕಾರದ ಎದೆಯನ್ನು  ಹರಿಸು ತಾಯೆ ಜ್ಯೋತಿರ್ಮಯವನ್ನು  ಭೇದವೆಂಬ ತಮವನು ಕತ್ತರಿಸಿ  ಎಲ್ಲೆಡೆ ಜ್ಞಾನಪ್ರಕಾಶವ ಹರಿಸಿ ಬೆಳಗು ನಮ್ಮ ಮಾನಸವ! ಹೊಸ ತಾಳ-ಸ್ವರ-ರಾಗ-ಲಯಗಳು  ಕಂಠವು ಮರಿಮೋಡದ ಗುಡುಗಿನೊಲು, ನೀಡೌ ಆಕಾಶದ ತುದಿಯೊಳಗೆ   ರೆಕ್ಕೆಯೊಡೆದು ಹಾರುವ ಖಗಗಳಿಗೆ  ಮಾಡಲಿ ಶುಭ ಕಲರವವ!  ನೀಡೌ, ವೀಣಾವಾದಿನಿ, ವರವ! (ಹಿಂದಿಯ ಪ್ರಸಿದ್ಧ ಕವಿ "ನಿರಾಲಾ" ಅವರು ಬರೆದ ಈ ಸರಸ್ವತಿವಂದನೆಯನ್ನು  ಅನೇಕ ಕಲಾವಿದರು ಹಾಡಿದ್ದಾರೆ. ನಿಮಗೆ ಯೂಟ್ಯೂಬಿನಲ್ಲಿ ಧ್ವನಿಮುದ್ರಿಕೆಗಳು ಸಿಕ್ಕುತ್ತವೆ. ಭಾರತಕ್ಕೆ ಸ್ವಾತಂತ್ರ್ಯಪ್ರಾಪ್ತಿಯಾದಾಗ ಬರೆದ ಈ ಕವಿತೆಯಲ್ಲಿ ಭಾರತವನ್ನು ಕುರಿತು ಕವಿಯ ಕನಸುಗಳಿವೆ.) 

ರೇಡಿಯೋ

ಇಮೇಜ್
ರೇಡಿಯೋ ಮೂಲ: ಲಾರೆಲ್ ಬ್ಲಾಸಮ್ ಕನ್ನಡಕ್ಕೆ - ಸಿ. ಪಿ.  ರವಿಕುಮಾರ್  ಕಾರಿನಲ್ಲಿ ರೇಡಿಯೋ ಇಲ್ಲಪ್ಪಾ  ಇಲ್ಲಿ ರೇಡಿಯೋ ಇಲ್ಲ ರೇಡಿಯೋ ಖಂಡಿತಾ ಇಲ್ಲ! ರೇಡಿಯೋ ಕೆಟ್ಟು  ಕೂತಿದೆ ಅಲಾರಂ ಹೊಡಕೊಳ್ಳುವಂತೆ  ಸೆಟ್ ಮಾಡಿದೆ ರೇಡಿಯೋ ಇಲ್ಲ ಹಣವೂ ಇಲ್ಲ ರೇಡಿಯೋ ಇಲ್ಲ ಬೆಲೆ ಬಾಳುವುದು ಏನೂ ಇಲ್ಲ ರೇಡಿಯೋ ಆಗಲಿ ಬೆಳೆಬಾಳುವುದಾಗಲಿ ಏನೂ ಇಲ್ಲ ಕಾರಿನಲ್ಲಾಗಲಿ ಡಿಕ್ಕಿಯಲ್ಲಾಗಲಿ ರೇಡಿಯೋ ಇಲ್ಲ ಕಳುವಾಗಿದೆ,  ಮೂರುಸಲ ಹೇಳುತ್ತೇನೆ ರೇಡಿಯೋ ಇಲ್ಲ ಡಿಕ್ಕಿ ಖಾಲಿ, ಡ್ರೈವರ್ ಕಂಪಾರ್ಟ್ಮೆಂಟ್ ಖಾಲಿ ನಿಜ ಹೇಳುತ್ತಿದ್ದೀನಿ ಕಾರಿನಲ್ಲಿ ಬೆಲೆ ಬಾಳುವುದು ಏನೂ ಇಲ್ಲ ರೇಡಿಯೋ ಇಲ್ಲ ಎಂಥದ್ದೂ ಇಲ್ಲ (ಸುಳ್ಳು ಹೇಳುತ್ತಿಲ್ಲ) ಕೆಟ್ಟಿದೆ ರೇಡಿಯೋ ಏನೂ ಉಳಿದಿಲ್ಲ. ರೇಡಿಯೋ ಹೋಯಿತು ಡ್ಯಾಷ್ ಬೋರ್ಡ್ ಮೇಲೆ ಖಾಲಿ ಜಾಗ ನೋಡಿ ಬೇಕಾದರೆ ಹುಷಾರು! ರೇಡಿಯೋ ಇಲ್ಲಿಂದ ತೆಗೆದರೆ ಅದು ಕೆಲಸ ಮಾಡುವುದಿಲ್ಲ ಅದಕ್ಕೆ ಸಂರಕ್ಷಣಾ ಕೋಡ್ ಬೇಕು ಈ ಡಬ್ಬಾ ವಾಹನದಲ್ಲಿ ಯಾರಾದರೂ ಬೆಲೆ ಬಾಳುವುದೇನನ್ನಾದರೂ ಇಡ್ತಾರಾ?  ಬೆಲೆ ಬಾಳುವುದು ಏನೂ ಇಲ್ಲ ಈ ವ್ಯಾನಿನಲ್ಲಿ  ದಯವಿಟ್ಟು ಸುಮ್ಮಸುಮ್ಮನೆ ಗಾಜು ಒಡೆಯಬೇಡಿ.  ನಿಮ್ಮ ಸಹಕಾರಕ್ಕೆ ವಂದನೆಗಳು. ಕಾರಿನಲ್ಲಿ ಬೆಲೆ ಬಾಳುವುದು ಏನೂ ಇಲ್ಲ ರೇಡಿಯೋ ಇಲ್ಲ ಟೇಪ್ ಇಲ್ಲ ಫೋನ್ ಕೂಡಾ ಇಲ್ಲ. ಕವಿತೆಯ ಸ್ವಾರಸ್ಯ: ತನ್ನ ಕಾರಿನಲ್ಲಿ ರೇಡಿಯೋ ಇಲ್ಲ...

ಮನಸು ನಿಲ್ಲಿಸದೆ ಆಗದು, ನಿರ್ಮೋಹಿ!

ಇಮೇಜ್
ಮೂಲ: ಮಹಾತ್ಮಾ ಕಬೀರ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಅಶ್ವಿನಿ ಭಿಡೆ ಅವರು ಅದ್ಭುತವಾಗಿ ಹಾಡಿರುವ ಕಬೀರನ ಈ ಭಜನೆಯನ್ನು (ಶಬದ್) ನೀವು ಇಲ್ಲಿ ಕೇಳಬಹುದು .    ಇದೇ ಭಜನೆಯನ್ನು ಅಶ್ವಿನಿ ಅಂಬೇಡ್ಕರ್ ಎಂಬ ಗಾಯಕಿ ಕೂಡಾ ಅದ್ಭುತವಾಗಿ ಹಾಡಿದ್ದಾರೆ .  ಭಕ್ತಿಯಿಲ್ಲದ ಪೂಜೆಯನ್ನು ಕುರಿತು ನಮ್ಮ ಹರಿದಾಸರು ಮತ್ತು ವಚನಕಾರರು ಕೂಡಾ ಹಾಡಿದ್ದಾರೆ.  ಕಬೀರನು ಹೇಳುವುದೂ ಅದೇ - ಮೋಹ (ಭಕ್ತಿ) ಇಲ್ಲದೆ ಮನಸು ನಿಲ್ಲಿಸದೆ  ಪೂಜಿಸಿದರೆ ಅದರಿಂದ ಏನೂ ಸಿದ್ಧಿಸದು! ಇಷ್ಟಾಗಿ ಏನಾದರೂ ದೇವರ ಇಷ್ಟದಲ್ಲಿದ್ದಂತೆಯೇ ಆಗುತ್ತದೆ!  ದೇವನ ಕೃಪೆಯಿದ್ದರೆ ನಿನಗೆ ಸದ್ಗುರು ದೊರಕುತ್ತಾನೆ. ಗುರುವಿನಿಂದ ಮುಕ್ತಿ ದೊರಕುತ್ತದೆ, ಇಲ್ಲದಿದ್ದರೆ ಇಲ್ಲ! ಮನಸು ನಿಲ್ಲಿಸದೆ ಆಗದು, ನಿರ್ಮೋಹಿ! ಮನಸು ನಿಲ್ಲಿಸದ ಪ್ರೀತಿಯು ಹುಚ್ಚ, ಇಬ್ಬನಿಯಿಂದ ಮೈ ತೊಳೆದಂತೆ! ನಂಬಿ  ರಾಮನನ್ನು ನಡೆಸುವ ಈ ಬದುಕು  ನಡೆವುದು ಅವನ ಮನದೊಳಿರುವಂತೆ! ಕೃಪೆಯಿಲ್ಲದೆ ಸಿಗುವನೇ  ಸದ್ಗುರು, ಎಷ್ಟು ಪ್ರಯತ್ನಿಸಿದರೆ ಏನಂತೆ! ಹೇಳುವನು ಕಬೀರ ಕೇಳಿ ಸಂತರೇ,  ಮುಕ್ತಿ  ದೊರೆಯದು   ಗುರುವಿಲ್ಲದೆ!

ಆರ್ಕಿಮಿಡೀಸನ ಸಾವು

ಇಮೇಜ್
ಸಿ. ಪಿ. ರವಿಕುಮಾರ್  ("ವಿಚಾರದಲ್ಲಿ ಮುಳುಗಿದ ಆರ್ಕಿಮಿಡೀಸ್" -  ಚಿತ್ರ - ಡಾಮಿನಿಕೋ ಫೆಟ್ಟಿ (೧೬೨೦), ಕೃಪೆ - ವಿಕಿಪೀಡಿಯಾ) ಯುರೇಕಾ ಎಂದು ಸ್ನಾನದಿಂದ  ಮೇಲೆದ್ದು ಬಂದಾಗ  ಅವನಿಗೆ ಮೈಮೇಲೆ  ಇರಲಿಲ್ಲ ಪರಿವೆ ತಲೆಯಲ್ಲಿ ಕೊರೆಯುತ್ತಿತ್ತು ಒಂದೇ ಹುಳು   ಹೇಗೆ ಬೇರ್ಪಡಿಸುವುದು ಸತ್ಯದಿಂದ ಸುಳ್ಳಿನ ಎಳೆ? ರಾಜನಿಗೆ ಅವನ ಮೇಲೆ ಎಷ್ಟೊಂದು ನಂಬಿಕೆ! ಎತ್ತಿಕೊಟ್ಟಿದ್ದಾನೆ ತಲೆಯ ಮೇಲಿನ ಮುಕುಟ - ಆರ್ಕಿಮಿಡೀಸ್! ನೀನು ಕಂಡುಹಿಡಿಯಬಲ್ಲೆಯಾ  ಅಕ್ಕಸಾಲಿಯು ಬಂಗಾರದಲ್ಲಿ ಮಾಡಿರುವನೇ  ಬೆರಕೆ ? ಎಷ್ಟು ನೀರು ಹೊರಚೆಲ್ಲುವುದು  ತೊಟ್ಟಿಯಿಂದ ನೀರಿನಲ್ಲಿ ಮುಳುಗಿಸಿದಾಗ ಬಂಗಾರದ  ಮುಕುಟ? ಮತ್ತು ಎಷ್ಟು ನೀರು ಹೊರಚೆಲ್ಲುವುದೋ   ಹಂಸಕ್ಷೀರ ನ್ಯಾಯಕ್ಕೊಡ್ಡಿದ ರಾಜನ ಕಿರೀಟ? ಯುರೇಕಾ ಎಂದು ಮೇಲೆದ್ದು ಬಂದಾಗ  ಅವನಿಗೆ ಮೈಮೇಲೆ ಇರಲಿಲ್ಲ ಒಂದಾದರೂ ಅರಿವೆ ಚಕಿತರಾಗಿ ನೋಡಿದರು ಮಹಿಳೆಯರು, ಮಹನೀಯರು  ಹುಚ್ಚನಂತೆ ಓಡುವುದು ಮೈಮೇಲೆ ಇಲ್ಲದೆ  ಅರಿವೇ  ಇಂಥ ಆರ್ಕಿಮಿಡೀಸ್ ಮುಳುಗಿದ್ದಾನೆ ಲೆಕ್ಕದಲ್ಲಿ  ಹೊತ್ತಿಕೊಂಡು ಉರಿಯುತ್ತಿದೆ ಸಿರಕ್ಯೂಸ್ ಅತ್ತ  ಒಳನುಗ್ಗಿ ಬಂದಿದ್ದಾನೆ ಕತ್ತಿ ಹಿರಿದು ಪಕ್ಕದಲ್ಲಿ   ರೋಮನ್ ಸೈನಿಕನೊಬ್ಬ ಏದ...

ಗಾಯ

ಸಿ ಪಿ ರವಿಕುಮಾರ್ 'ಗಾಯವು ಮಾಗಬೇಕೆಂದರೆ ಅದನ್ನು ಮುಟ್ಟುವುದನ್ನು ನಿಲ್ಲಿಸು' ನಮ್ಮ ಸಮಾಜದ ಗಾಯಗಳೂ ಹೀಗೇ. ಸದಾ ಕಿತ್ತುತ್ತಾ ಇದ್ದರೆ ಮಾಗುವುದಿಲ್ಲ ಗಾಯ ಮಾಗಲು ಬೇಕಾದದ್ದು ಮದ್ದು, ಸಹಿಷ್ಣುತೆ, ತಾಳ್ಮೆ. ನಿನಗೆ ಗಾಯವಾದಾಗ ಔಷಧ ಹಚ್ಚದೆ ಊರನ್ನೆಲ್ಲಾ ಬಯ್ಯುತ್ತಿದ್ದರೆ ಗಾಯ ಮಾಗುವುದಿಲ್ಲ. ಗಾಯ ಯಾಕಾಯಿತು ಎಂಬ ದೀರ್ಘವಿಶ್ಲೇಷಣೆಯಿಂದಲೂ ಗಾಯ ಮಾಗುವುದಿಲ್ಲ. ನಿನಗಲ್ಲ, ನಿನ್ನ ಸ್ನೇಹಿತನಿಗೆ ಗಾಯವಾಗಿದ್ದರೆ ಅವನಿಗೆ ಬೇಕಾದದ್ದು ಔಷಧ, ಸಾಂತ್ವನ, ಗಾಯ ಮಾಗುವ ಭರವಸೆ. ಊರನ್ನೆಲ್ಲಾ ಬೈದು ಗಾಯದ ಕಾರಣಗಳನ್ನು ಊಹಿಸುತ್ತಾ ಗಾಯವನ್ನು ಕೆದಕುತ್ತಿದ್ದರೆ ಗಾಯ ಮಾಗುವುದಿಲ್ಲ. ಮಗು ಬಿದ್ದು ಅತ್ತಾಗ ಯಾರು ಬೀಳಿಸಿದರು ನೆಲ ಯಾಕೆ ಡೊಂಕಾಗಿದೆ ಎಂಬ ಯಾವುದನ್ನೂ ಲೆಕ್ಕಿಸದೆ ತಾಯಿಯೊಬ್ಬಳು ಮಾತ್ರ ಗಾಯಕ್ಕೆ ಔಷಧ ಹಚ್ಚಿ ರಮಿಸುತ್ತಾಳೆ. ಏಕೆಂದರೆ ಮಗುವಿನ ನೋವನ್ನು ಆವಳು ಅನುಭವಿಸುತ್ತಾಳೆ. ಸಮಾಜದ ಗಾಯ ನೋಡಿದಾಗ ನೀನು ಸಾಧ್ಯವಾದರೆ ತಾಯಿಯಾಗು ಇಲ್ಲವೇ ಔಷಧ ಹಚ್ಚುವ ದಾಯಿಯಾಗು. ಮಾತಾಡುವ ಬಾಯಿ ಮಾತ್ರ ಆದರೆ ಕಳೆದುಕೊಳ್ಳುವೆ ಸ್ನೇಹಿತನ ವಿಶ್ವಾಸ. ನಿನಗೆ ನೀನೇ ಟೊಳ್ಳಾದಂತೆ ಭಾಸ. # ಕವಿತಾಸಮಯ

ಕವಿ

ಕವಿ  ಮೂಲ: ಟಾಮ್ ವೇಮನ್  (ಅಮೆರಿಕಾ ಸಂಸ್ಥಾನ)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಕಾರ್ಯಸೂಚಿಯಲ್ಲಿ ಎಲ್ಲಿದ್ದೆನೆಂದು ಮರೆತುಬಿಡುತ್ತಾನೆ ಪುಸ್ತಕದ ಯಾವ ಪುಟದಲ್ಲಿದ್ದೆ ಮರೆಯುತ್ತಾನೆ ಬಹಳ ಮಾತಾಡುತ್ತಾನೆ, ಆದರೆ ಬಹಳಷ್ಟುಅಸಂಬದ್ಧ ನಿಖರವಾದ ಮೌಖಿಕ ಸೂಚನೆಗಳನ್ನು ಕೊಡಲಾರ. ಓದಿದ್ದು ಅರ್ಥವಾಗುವುದಿಲ್ಲ ಕೇಳಿದ್ದು ಅರ್ಥವಾಗುವುದಿಲ್ಲ "ಹೌದು-ಇಲ್ಲ" ಪ್ರಶ್ನೆಗಳಿಗೆ ಉತ್ತರಿಸಲಾರ. ಗಾದೆಗಳನ್ನು ಅರ್ಥೈಸಲು ಹೆಣಗುತ್ತಾನೆ ಬೆಳಗ್ಗೆ ಏನು ತಿಂದೆ ಎಂಬುದು ನೆನಪಿರುವುದಿಲ್ಲ ಚಿತ್ರ ತೋರಿಸಿದರೆ ಕತೆ ಹೇಳಲಾರ ದೃಶ್ಯದಲ್ಲಿ ಅಸಾಂಗತ್ಯಗಳನ್ನು ಕಂಡುಹಿಡಿಯಲಾರ ವಸ್ತುಗಳನ್ನು ಗುರುತಿಸಿ ವರ್ಗೀಕರಿಸಲು ಒದ್ದಾಡುತ್ತಾನೆ  ಕೂಡುವುದು, ಕಳೆಯುವುದು, ಮಗ್ಗಿ ಎಂದರೆ ತತ್ತರಿಸುತ್ತಾನೆ  ಒಂದು ಪದವನ್ನು ಇವತ್ತು ಗುರುತಿಸಿದರೆ ನಾಳೆ ಮರೆತಿರುತ್ತಾನೆ.  ಕವಿತೆಯ ಸ್ವಾರಸ್ಯ: ಒಬ್ಬ ಮನಃಶಾಸ್ತ್ರಜ್ಞನ ಬಳಿ ಕವಿಯನ್ನು ಕಳಿಸಿದರೆ ಅವನು ಬರೆಯಬಹುದಾದ ರಿಪೋರ್ಟ್ ಹೀಗಿರಬಹುದು! ಕವಿಯು ನೋಡುವ ಜಗತ್ತು ಮತ್ತು ಇತರರು ನೋಡುವ ಜಗತ್ತು ತೀರಾ ಭಿನ್ನ.  ಕಾಗೆಯು ನೀರಿನ ಹೂಜಿಯಲ್ಲಿ ಕಲ್ಲು ಹಾಕುವ ಚಿತ್ರ ತೋರಿಸಿದರೆ ಕವಿಗೆ  ಅದರಲ್ಲಿ ಬೇರೇನೋ ಕಾಣಿಸಬಹುದು! ಮೀನು ಹಾರಾಡುವ ಚಿತ್ರದಲ್ಲೂ ಅವನಿಗೆ ತಪ್ಪು ಕಾಣಿಸಲಾರದು - ಏಕೆಂದರೆ ಅವನ ಜಗತ್ತಿನಲ್ಲಿ ಮೀನಿಗೂ ಹಾರಾಡುವ ಹಕ್ಕಿ...