ಪೋಸ್ಟ್‌ಗಳು

ಫೆಬ್ರವರಿ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಡವಾಗಿ ಅರಳಿದ್ದು

ಇಮೇಜ್
ಮೂಲ ಕವಿತೆ - ಮಿಷೆಲ್ ವುಲ್ಫ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಸೂರ್ಯೋದಯದ ಬೆಳಕಿನಲ್ಲಿ ಅದು ಪ್ರಜ್ವಲಿಸುತ್ತದೆ ಮುಳ್ಳುಗಿಡದಲ್ಲೊಂದು ಕೆಂಪು ಹವಳ ಬೆಚ್ಚಗೆ. ನಗರಬೀದಿಯ ಕಲ್ಲುಹಾಸಿನ ಪಕ್ಕ ಹಾಸಿಗೆ ಬಿಟ್ಟೆದ್ದ ಒಬ್ಬಂಟಿ ಗುಲಾಬಿ, ಋತುಮಾನದ ಕೊನೆಗೆ. ನಿನ್ನನ್ನು ಆಕರ್ಷಿಸುತ್ತದೆ ಅದರ ಸೌರಭ, ರೇಷ್ಮೆ ಪದರಗಳು, ಅದರ ಅಂತರಾಳ. ತನ್ನ ಒಡಲಲ್ಲಿ ಸೆಳೆದುಕೊಳ್ಳುತ್ತದೆ ನಿನ್ನನ್ನು ನೀನು ಕಳೆದುಕೊಳ್ಳುವ ಹಾಗೆ ಸಮತೋಲನ. ನಿನಗೀಗ ಕಾಣುವುದು ಪಕಳೆಗಳ ಜಾಲ. ಗುಲಾಬಿಗಳ ಅಗಣಿತ ಪುನರಾವರ್ತನ. ನೀನು ಜಾರುತ್ತೀಯೆ ಗಿರಿಗಿರಿ ಸುತ್ತುತ್ತಾ ಸುತ್ತುತ್ತಾ ಗುಲಾಬಿಯ ಒಳಗೆ, ಗುಲಾಬಿಯ ಆಳಕ್ಕೆ. ನಾನು ನಿನ್ನನ್ನು ಆಲಂಗಿಸಿಕೊಳ್ಳುತ್ತೇನೆ. ನನ್ನೊಲವೇ ನನಗೀಗ ನಲವತ್ತ ನಾಲಕ್ಕು ಮತ್ತು ನೀನು ನನ್ನೊಲವೇ, ಓ ನನ್ನ ಒಲವೇ, ನನ್ನನ್ನು ನೆಟ್ಟದ್ದು ನೀನೇ.

ಬೆಳಕಿನ ಕಾವಲುಗಾರ್ತಿ

ಇಮೇಜ್
ಮೂಲ ಕವಿತೆ - ಮಿಷೆಲ್ ವುಲ್ಫ್  (ಅಮೇರಿಕಾ ಸಂಯುಕ್ತರಾಷ್ಟ್ರ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಪುಟ್ಟವಳು ಕೇಳಿಸಿಕೊಂಡರೂ ಎಂದಿಗೂ ಬಿಟ್ಟುಕೊಡುವುದಿಲ್ಲ  ತನಗೆ ಗೊತ್ತಿರುವುದನ್ನು. ಬೆಳಗಿನ ಹೊತ್ತು   ಅವಳು ನಿಯಂತ್ರಿಸುತ್ತಾಳೆ  ಛಾವಣಿಗಳ ಮೂಲಕ ಸೋಸಿ  ಮರಗಳ ಮೂಲಕ ಹಾದು  ನೆರಿಗೆಗಟ್ಟಿದ ಮುಖಗಳ ಮೇಲೆ ಬಿದ್ದ ಬೆಳಕಿನ ಪ್ರಮಾಣ.  ಒಬ್ಬಂಟಿಯಾಗಿ ಎದ್ದವಳು ತೆರೆಯುತ್ತಾಳೆ ಬೆಳಕಿನ ಪೆಟ್ಟಿಗೆಗಳನ್ನು  ಒಂದೊಂದಾಗಿ.  ಇಂಥವರಿಗೆ ಇಷ್ಟೇ ಎಂದು  ಎಚ್ಚರಿಕೆಯಿಂದ ಹಂಚುತ್ತಾಳೆ.   ಗಂಭೀರ ಮುಖದಿಂದ ಆಲಿಸುತ್ತಾಳೆ   ಇನ್ನಷ್ಟು ಬೆಳಕಿಗಾಗಿ  ಜನರು ನೀಡಿದ ಮೊರೆ. ಎಂಥ ಕೆಲಸವಪ್ಪ.  ಎಷ್ಟು ಜಾಗರೂಕತೆ ವಹಿಸಿದರೂ ಸಾಲದು. ಸ್ವಲ್ಪ ದಿನಗಳ ಹಿಂದೆ ಉತ್ಸಾಹದ ಭರದಲ್ಲಿ  ಇದ್ದಬದ್ದ ಬೆಳಕನ್ನೆಲ್ಲಾ ಹಂಚಿಬಿಡುತ್ತಿದ್ದಳು.  ಫೋನ್ ಗಳು ಒಂದೇ ಸಮನೆ ಬಜಾಯಿಸುತ್ತವೆ. ಅಬ್ಬಾ ಸೋಜಿಗವೇ. ಯಾರೋ ಅವಳಿಗೆ  ಬೆಳಕಿಗಾಗಿ ಧನ್ಯವಾದ ತಿಳಿಸುತ್ತಾರೆ. ಅವಳಿಗೆ ಕೂಡಲೇ ಕಟ್ ಮಾಡಬೇಕಾಗುತ್ತದೆ. ಅವಳ ಗಲ್ಲಗಳು ಬಲೂನುಗಳಂತೆ ಉಫ್ ಎಂದು ಊದಿಕೊಳ್ಳುತ್ತಾ, ಫುಸ್ ಎಂದು ಕುಗ್ಗುತ್ತಾ. ಬೆದರಿದ ಮೀನೋ ಎಂಬಂತೆ. ಪೊರಕೆ ಇಡುವ ಮೂಲೆಗೆ ಹೋಗಿ ಫನಲ್ ಜೋಡಿ...

ನೆರಳು ಚಿತ್ರಗಳು

ಇಮೇಜ್
ಮೂಲ ಕವಿತೆ - ಮೇರಿ ಕಾರ್ನಿಶ್ (ಅಮೆರಿಕಾ ಸಂಯುಕ್ತರಾಷ್ಟ್ರ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಕಂದೀಲಿನ ಬಿಳಿ ಬೆಳಕಿನಲ್ಲಿ ಅಪ್ಪ ಕೈಚಾಚಿದಾಗ ಹಸ್ತಗಳ ಜೋಡಿ ಕುದುರೆಯಾಗಿ ಕಿವಿ ನಿಮಿರಿಸಿ  ಕೆನೆಯುತ್ತಿತ್ತು ಮೇಲಕ್ಕೆ ಮೈ ಕೊಡವಿ;  ಕ್ಯಾನವಾಸ್ ಗೋಡೆಯ ಮೇಲೆ  ನಿದ್ದೆ ನಟಿಸುತ್ತಿದ್ದ ಮೊಸಳೆ  ಒಮ್ಮೆಲೇ ಮೇಲೆದ್ದು ತೆರೆದು ಮುಚ್ಚುತ್ತಿತ್ತು ಬಾಯಿ;  ಹಂಸವೊಂದು ಬಿಂಕದ ಕತ್ತನ್ನು ತಿರುಗಿಸಿ  ವೈಯ್ಯಾರದಿಂದ ಕೆಳಗಿಳಿಸಿ ಬೆರಳುಕೊಕ್ಕನ್ನು  ನಯವಾಗಿ ಬಾಚಿಕೊಳ್ಳತ್ತಿತ್ತು ಅಪ್ಪನ ಕೂದಲಗರಿ.  ನಮ್ಮ ಟೆಂಟ್ ಹೊರಗೆ ಕಾಡಿನಲ್ಲಿ  ಪ್ರತಿದಿನವೂ ಒಂದಿಷ್ಟು ಕ್ಷಯಿಸುವ ತಾರೆಗಳ ಕೆಳಗೆ  ಸರಸರ ಓಡಾಡುತ್ತಿದ್ದವು ಹೆಗ್ಗಣಾದಿ.  ತಾರಾಮಂಡಲದ ಒರಾಯನ್ ಖಡ್ಗದ ಆಳದಲ್ಲಿ    ಹರಡುವ ಬೆಳಕಿನಲ್ಲಿ ಹುಟ್ಟುತ್ತಿದ್ದವು ಲಕ್ಷಾಂತರ ಚುಕ್ಕಿ. ಹಾರುತ್ತಿದ್ದವು ಒಂದರ ಹಿಂದೆ ಇನ್ನೊಂದು  ಅಪ್ಪನ ಕೈ ಹೆಬ್ಬೆರಳು ತೆಕ್ಕೆ ಹಾಕಿಕೊಂಡ ಬಾನಾಡಿ.   ಟಿಪ್ಪಣಿ - ತನ್ನ ಬಾಲ್ಯದ ಘಟನೆಯೊಂದನ್ನು ಆಧರಿಸಿ ಕವಯಿತ್ರಿ ಈ ಕವಿತೆಯನ್ನು ರಚಿಸಿದ್ದಾಳೆ. ಮಕ್ಕಳು ರಜಾದಿನಗಳಲ್ಲಿ ಅಪ್ಪನೊಂದಿಗೆ ಕ್ಯಾಂಪಿಂಗ್ ಹೋಗಿದ್ದಾರೆ. ಕಾಡಿನ ಅಂಚಿನಲ್ಲಿ ಟೆಂಟ್ ನಿರ್ಮಿಸಿ ಅದರಲ್ಲಿ ಇರುವುದೇ ಒಂದು ರೋಮಾಂಚಕ ಅನುಭವ. ...

ಹುಲ್ಲುಗಾವಲು

ಇಮೇಜ್
ಹುಲ್ಲುಗಾವಲು  ಮೂಲ - ಕೇಟ್ ನ್ಯಾಪ್ ಜಾನ್ಸನ್    (ಕವಿತೆಯನ್ನು ಒಂದೆರಡು ಸಲ ಓದಿ ಅನಂತರ ಕೆಳಗಿನ ಟಿಪ್ಪಣಿಯನ್ನು ಓದಿ.) ಅರ್ಧದಿನವೇ ಕಳೆದುಹೋಯಿತು  ಕಿಟಕಿಯಿಂದ ಹೊರಗಿಣುಕುತ್ತಾ. ನಾನು ತಿಳಿಯಬಯಸಿದ್ದು  ಒಂದೇ ಒಂದು ಸತ್ಯ ಆತ್ಮವನ್ನು ಕುರಿತು,  ಆದರೆ  ಆಲೋಚನಾ ಪಥದ ನಡುವೆಯೇ  ನಾನು ತ್ಯಜಿಸಿ ಆಲೋಚನೆ  ಈಗ ಎರಡು ಅಂಗುಲ ಹಿಮಪಾತವಾಗಿದೆ ಹುಲ್ಲುಗಾವಲಿನ ಮೇಲೆ. ಎಲ್ಲಿ ಹೋಗಿದ್ದೆ ನಾನು  ಎಷ್ಟು ಹೊತ್ತು ಹುಡುಕುತ್ತಿದ್ದೆ ಹೊರಗೆ ನಿನಗಾಗಿ? ನನ್ನನ್ನು ಎಂದೂ ಬಿಡದ ನನ್ನ ಇಹವೇ, ನನ್ನ ಇರವೇ? ಟಿಪ್ಪಣಿ: ಬಹಳ ಸರಳವಾದ ಪದಗಳಲ್ಲಿ ಕಟ್ಟಲಾದ ಕವಿತೆಯಲ್ಲಿ ಒಂದು ಅನುಭವದ ಕಥನವಿದೆ. ಹೊರಗೆ ಹಿಮಪಾತವಾಗಲು ಪ್ರಾರಂಭವಾಗಿದೆ.   ಕಿಟಕಿಯ ಹತ್ತಿರ ಬಂದು ನಿಂತ ಕವಯಿತ್ರಿ ಹೊರಗೆ ನೋಡುತ್ತಾ ಆಲೋಚನೆಯಲ್ಲಿ ಮುಳುಗಿದ್ದಾಳೆ. ಶರತ್ಕಾಲದಲ್ಲಿ ಮಂಜು ಸುರಿಯುವುದನ್ನು ನೋಡುವುದೇ ಒಂದು ಸುಂದರ ಅನುಭವ. ನೋಡುತ್ತಾ ನೋಡುತ್ತಾ ಅರ್ಧ ದಿನವೇ ಕಳೆದುಹೋಗಿದೆ ಎಂಬುದರ ಅರಿವು ಲೇಖಕಿಗೆ ಒಮ್ಮೆಲೇ ಆಗುತ್ತದೆ.  ಅವಳು ಕಿಟಕಿಯ ಬಳಿ ನಿಂತಾಗ ಅವಳ ಮನಸ್ಸಿನಲ್ಲಿದ್ದ ಆಲೋಚನೆ ಆತ್ಮವನ್ನು ಕುರಿತದ್ದಾಗಿತ್ತು. ಆತ್ಮವೆಂಬುದು ಇದೆಯೇ? ಅದನ್ನು ಹುಡುಕುವುದು ಹೇಗೆ? ಆದರೆ ಹೊರಗಿನ ಹಿಮಪಾತ ನೋಡುತ್ತಾ ಮೂಲ ಪ್ರಶ್ನೆಯ ಮೇಲೂ ಹಿಮಪ...

ಕರುಣೆ

ಇಮೇಜ್
ಮೂಲ - ಶೇಕ್ಸ್‌ಪಿಯರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  (ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿ ನ್ಯಾಯಾಧೀಶನ ವೇಷದಲ್ಲಿ ಪೋರ್ಷಿಯಾ ಮಾಡುವ ಭಾಷಣ) ಕರುಣೆಯು ಲುಪ್ತವಾಗಿಹೋಗಿಲ್ಲ.   ಅದು ಮೆಲ್ಲಮೆಲ್ಲನೆ ಉದುರುತ್ತದೆ ನೆಲಕ್ಕೆ  ಮೇಲಿನ ಸ್ವರ್ಗದಿಂದ.   ಅದರ ಲಾಭ ದ್ವಿಗುಣ.  ಪಡೆದುಕೊಂಡವನಿಗೆ ಲಾಭ ಸಿಕ್ಕುವುದು ಸಹಜ, ಕರುಣೆ ತೋರಿದವನಿಗೂ ಲಭಿಸುತ್ತದೆ ಅದರ ಆಶೀರ್ವಾದ.  ಬಲಗಳಲ್ಲಿ ಅತಿದೊಡ್ಡ ಬಲವೇ ಕರುಣೆ.  ಸಿಂಹಾಸನದ ಮೇಲೆ ಕುಳಿತ ರಾಜನಿಗೆ  ಕರುಣೆಯೇ ಕಿರೀಟಕ್ಕಿಂತಲೂ ಹೆಚ್ಚು ಶೋಭಿಸುವ ಸಿಂಗಾರ.  ಅವನ ಖಡ್ಗ  ತತ್ಕಾಲದ ಅಧಿಕಾರದ ಸಂಕೇತ, ಜನರಲ್ಲಿ ಬೆರಗು ಹುಟ್ಟಿಸುವುದಷ್ಟೇ ಅದರ ಗುಣ, ಖಡ್ಗವನ್ನು ಕಂಡು ಹೆದರಿ ನಡುಗುತ್ತಾರೆ ಜನ.    ಕರುಣೆಯ ಸ್ಥಾನ ಖಡ್ಗಕ್ಕಿಂತ ಎಷ್ಟೋ ಮೇಲು, ಅದು ನೆಲೆಸುವುದು ರಾಜನ ಹೃದಯಸಿಂಹಾಸನದಲ್ಲಿ. ಸ್ವಯಂ ದೇವತೆಗಳ ಬಳಿ ಇರುವ ಆಭರಣ. ಭೂಮಿಯ ಮೇಲೆ ನಡೆದ ಕರುಣಾಪೂರ್ಣ ನ್ಯಾಯದಾನಕ್ಕೆ  ಸಿಕ್ಕುತ್ತದೆ ದೈವತ್ವದ ಮೆರುಗು.  ಹೀಗಾಗಿ, ಓ ವರ್ತಕ! ನ್ಯಾಯ ನಿನ್ನ ಪರವಾಗಿದ್ದರೂ  ಯೋಚಿಸಿ ನೋಡು. ಈ ನ್ಯಾಯದಿಂದ ಯಾರದೂ ಉದ್ಧಾರವಿಲ್ಲ. ನಾವು ನಿನ್ನಲ್ಲಿ ಬೇಡುವುದು ಕರುಣೆ. ನಾನು ಇಷ್ಟು ಮಾತಾಡಿದ್ದು  ನೀನು ಕೋರಿದ ಶಿಕ್ಷೆಯನ್ನು ಒಂದಷ್ಟು ಮೆತ್ತಗಾಗಿಸಲು, ನೀನು ಕೋರಿದ್ದನ್ನು ಅಕ...

ಅಡಿಗರ "ಮಹಾಪೂರ"

ಇಮೇಜ್
ಅಡಿಗರಿಗೆ ನೂರರ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅವರ ಕವಿತೆ "ಮಹಾಪೂರ" ಕುರಿತು ಬರೆಯುವ ಮೂಲಕ ಅವರಿಗೆ ನನ್ನ ಗೌರವ ಅರ್ಪಿಸುತ್ತಿದ್ದೇನೆ. "ಮಹಾಪೂರ" ಎಂದರೆ ನೆರೆ. "ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು ಈ ಬಾಳಿಗಾ ಮಹಾಪೂರ!" ಎಂದು ಕವಿತೆ ಕೊನೆಗೊಳ್ಳುತ್ತದೆ. ಕವಿ ಯಾವ ಮಹಾಪೂರಕ್ಕಾಗಿ ಕಾಯುತ್ತಿದ್ದಾರೆ? ಕವಿತೆಯ ಪ್ರಾರಂಭದಲ್ಲೇ ಅದಕ್ಕೆ ಸುಳಿವಿದೆ. " ಅಮೃತವಾಹಿನಿಯೊಂದು ಹರಿಯುತಿದೆ ಮಾನವನ  ಎದೆಯಿಂದಲೆದೆಗೆ ಸತತ; " ಮನುಷ್ಯನ ಎದೆಯಿಂದ ಎದೆಗೆ ಒಂದು "ಅಮೃತವಾಹಿನಿ" ಹರಿಯುತ್ತಿದೆ.  ಶೇಕ್ಸ್‌ಪಿಯರ್ ಕವಿಯ ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿ  ಬರುವ ಸಾಲುಗಳು ಹೀಗಿವೆ. The quality of mercy is not strained, It droppeth as the gentle rain from heaven Upon the place beneath: ಅಡಿಗರು ಕೂಡಾ ಇದೇ ಅಮೃತವಾಹಿನಿಯನ್ನು ಕುರಿತೇ ಮಾತಾಡುತ್ತಿರುವುದು. ಮನುಷ್ಯತ್ವದ, ಕರುಣೆ-ಕಕ್ಕುಲಾತಿಗಳ ಅಮೃತವಾಹಿನಿ. ಯುದ್ಧಗಳ ಬಗ್ಗೆ ಓದಿದಾಗ, ಜಗತ್ತಿನಲ್ಲಿ ನಡೆಯುತ್ತಿರುವ ಕ್ರೌರ್ಯದ ಬಗ್ಗೆ ಓದಿದಾಗ ಇಂಥ ಅಮೃತವಾಹಿನಿಯು  ಬತ್ತಿಹೋಗುತ್ತಿದೆಯೇ ಎಂದು ನಮಗೆ ಅನುಮಾನ ಬರುತ್ತದೆ.  ಆದರೆ ಅಡಿಗರು ನಮಗೆ ಭರವಸೆ ನೀಡುತ್ತಾರೆ - " ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು; ಸುತ್ತುಮುತ್ತಲು ಮರಳು, ಮೇಲೆ ಪಾಚಿ ಮುತ್ತಿಕೊಂಡ...

ಬಿರುಸು ಮಳೆಯಲ್ಲಿ ಬಸ್

ಇಮೇಜ್
ಮೂಲ ಚೈನೀಸ್ ಕವಿತೆ - ಲಿ ಹೆಂಗ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಬರಿದಾದ ನಿಲ್ದಾಣದಲ್ಲಿ  ಶುರುವಾದ ಮಳೆಯಿಂದ ಪಾರಾಗಲು  ನಾನು ಓಡಿಹೋಗಿ ಹತ್ತಿಕೊಳ್ಳುತ್ತೇನೆ  ಯಾವುದೋ ಬಸ್  ಅದು ಎಲ್ಲಿಗೆ ಹೊರಟಿದೆಯೋ ನನಗೆ ಗೊತ್ತಿಲ್ಲ.  ವೇಗ ವರ್ಧಿಸಿಕೊಂಡು  ಸೇತುವೆಯ ತಿರುವಿನಲ್ಲಿ ತಿರುಗುತ್ತದೆ ತನಗೂ ಮಳೆಗೂ ಸಂಬಂಧವಿಲ್ಲ  ಎಂದು ಸಾಬೀತು ಪಡಿಸುವ ಧಾವಂತದಲ್ಲಿ. ಆದರೆ  ಜೋರುಮಳೆಯ ನೆರಳು  ಕುರುಡನ ರೂಪದಲ್ಲಿ  ನುಡಿಸುತ್ತಿದೆ ನೀರಿನಲ್ಲಿ ಚಲಿಸುವ ಬಸ್ ಪಿಯಾನೋ. ಪ್ರಯಾಣಿಕರು ಅದರ ವಿವಿಧಾಕಾರದ  ಕಪ್ಪು-ಬಿಳಿ ಮನೆಗಳು. ಯದ್ವಾ ತದ್ವಾ ಕುಟ್ಟುತ್ತಿದೆ ಅವರನ್ನು ಪಟಪಟ.  ಬಸ್ ನಿಂತಾಗ ಅವುಗಳ (ಅಂದರೆ ನಮ್ಮ) ಶ್ರುತಿ ಮತ್ತು ತಾಳ ಕೆಟ್ಟುಹೋಗಿರುತ್ತದೆ ಖಂಡಿತ.  ಟಿಪ್ಪಣಿ - ಯಾರಿಗಾದರೂ ಇಂಥ ಅನುಭವ ಆಗಿರಬಹುದು. ಸೂರಿಲ್ಲದ ಬಸ್ ನಿಲ್ದಾಣದಲ್ಲಿ ಮಳೆ ಪ್ರಾರಂಭವಾಗಿದೆ. ಮಳೆಯಿಂದ ಪಾರಾಗಲು ಹತ್ತಿರದಲ್ಲಿ ಕಂಡ ಬಸ್ ಒಂದನ್ನು ಕವಿ ಏರಿ ಕುಳಿತಿದ್ದಾನೆ.  ಅದು ಮಳೆಯಿಂದ ಅಪ್ರತಿಭವಾಗದೆ ಮುಂದೆ ಚಲಿಸುತ್ತಿದೆ, ನಿಜ. ಆದರೆ ಒಳಗೆ ಕುಳಿತವರ ಮೇಲೆ ಮಳೆಯ ಪ್ರಭಾವ ಖಂಡಿತಾ ಆಗುತ್ತಿದೆ. ಕೊನೆಗೂ ಬಸ್ ನಿಂತಾಗ ಇವರು ಶ್ರುತಿ ಕೆಟ್ಟ ಪಿಯಾನೋ ಮಣೆಗಳ  (ಮನೆಗಳ) ಹಾಗೆ ಹೊರಬರುವುದು ಖಚಿತ. ಎಷ್...

ಅದಾದ ನಂತರ ಏನಾಗುವುದು?

ಇಮೇಜ್
ಮೂಲ ಹಿಂದಿ - ಬಾಲಕೃಷ್ಣ ರಾವ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಅದಾದ ನಂತರ ಏನಾಗುವುದು? ಮಗು ಕೇಳಿತು ಸಡಿಲಿಸದೇ ಪಟ್ಟು  ಅಮ್ಮನ ಮುಖದಲಿ ದೃಷ್ಟಿಯ ನೆಟ್ಟು ಗಲ್ಲದ ಮೇಲೆ ಬೆರಳನ್ನಿಟ್ಟು.  ನಿನ್ನ ವಿವಾಹವು ಮುಗಿದ ನಂತರ  ಪಡಿ ಎಡವುತ ಬರುವಳು ಮಗು, ಚೆಲುವೆ! ನೀನೋ ಅವಳನು ನೋಡುತ ನಿಲುವೆ! ನಾನೀ ಮನೆಯನು ತುಂಬಿಸಿಕೊಳುವೆ! ಮಗುಮೊಗದಲಿ ಉಗಮಿಸಿ ನಗೆಕಿರಣ  ಮರುಕ್ಷಣ ಆಯಿತು ಅಂತರ್ಧಾನ! ಮತ್ತೆ ಕೇಳಿತು - ಅಮ್ಮಾ, ಸರಿ, ಹೌದು, ಅದಾದ ನಂತರ ಏನಾಗುವುದು? ಇನ್ನೇನಪ್ಪಾ, ತೂಗುವುದು ತೊಟ್ಟಿಲು! ಗದ್ದಲ ಹಾಕುವ ಮಕ್ಕಳ ಸಾಲು! ಒಂದು ಏರಿದರೆ ನಿನ್ನ ಕಂಕಳು  ಒಂದು ಸೇರುವುದು ಅಮ್ಮನ ಮಡಿಲು! ನನ್ನ ಆಟಿಕೆಗಳ ಕದಿಯುವರೇ ಮಕ್ಕಳು! ಎಂದು ಒಂದು ಕ್ಷಣ ಕಾಡಿದರೂ ಪುಕ್ಕಲು  ಸಾವರಿಸಿಕೊಂಡು ಕೇಳಿತು ಮಗು "ಹೌದು, ಅದಾದ ನಂತರ ಏನಾಗುವುದು?" ಅಮ್ಮನಿಗೀಗ ಸಾಕಾಗಿತ್ತು! ಪ್ರಶ್ನೆಗೆ ಉತ್ತರ ಹೇಳುತ ಸುಸ್ತು! ಇನ್ನೇನಪ್ಪಾ ಆಗುತ್ತದೆ ಮುಂದೆ! ಮುದುಕಿಯಾಗಿ ನಾ ಸಾಯುವುದೊಂದೇ! ಕಣ್ಣು ತುಂಬಿಬಂದಿತು ಮಗುವಿನದು  ಪ್ರಶ್ನೆಯ ಪಾಶವು ಆದರೂ ಬಿಡದು! ಕೇಳಿತು ಒರೆಸಿ ಕಣ್ಣಾಲಿಯ ಬಿಂದು, "ಅದಾದ ನಂತರ ಏನಾಗುವುದು?" ಕವಿಗೆ ಮಗುವು ಕಲಿಸಿತು ಈ ಪಾಠ  ಜೀವನ ಸುಖ ದುಃಖಗಳ ಆಟ! ಅನಂತ ಪ್ರಶ್ನೆಯು ಉಳಿದು ಬಿಡುವುದು - ಅದಾದ ನಂತರ ಏನಾಗುವುದು? ...

ಪುಸ್ತಕ ಬಿಡುಗಡೆಯ ದಿವಸ

ಇಮೇಜ್
ಮೊದಲ ಓದಿಗೆ ದಕ್ಕದ ಈ ಕವಿತೆಯನ್ನು ಒಂದೆರಡು ಸಲ ಓದಿ ಅನಂತರ ಕೆಳಗಿರುವ ಟಿಪ್ಪಣಿಯನ್ನು ಓದಿ. ಮೂಲ ಅಮೆರಿಕನ್ ಕವಿತೆ - ಫ್ರಾನ್ಜ್ ರೈಟ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ತನ್ನ ಪುಸ್ತಕವನ್ನು ಎಲ್ಲೋ ಒಂದೆಡೆ ಒಬ್ಬ  ಹೃದಯದಲ್ಲಿ ದಯೆಯಿರುವ ಬುದ್ದಿವಂತ ಓದುಗ  ಓದುತ್ತಿರಬಹುದೆಂಬ  ಕಲ್ಪನೆ  ಬರೆಯುವುದರ ಕೆಲವೇ ಸಂತಸಗಳಲ್ಲಿ ಒಂದು. ಉಳಿದವು ಯಾವುದೂ ಸದ್ಯಕ್ಕೆ ನೆನಪಿಗೆ ಬರುತ್ತಿಲ್ಲ. ಅಂದಹಾಗೆ ಈಗ ನಾನು ಗಮನಿಸಿದ್ದು  ಇವತ್ತು ನನ್ನದೇ ಆದ  ಒಂದು ಆಚರಣೆಯಿದೆ:  "ನನ್ನಕಂಡರೆ ನನಗೇ ಆಗದು, ನಾನು ಸತ್ತು ಹೋದರೆ ವಾಸಿ"   ರಾಷ್ಟ್ರೀಯ ದಿನಾಚರಣೆ.  (ನಾಳೆ ಬದುಕನ್ನು ಅತೀವ  ಪ್ರೀತಿಸುತ್ತಾ  ಅಮರನಾಗಬೇಕೆಂದು ಬಯಸುವೆನೆಂದೇ ಇದರರ್ಥ.) ಈ ರಾತ್ರಿಯು ಹಗಲಿಡೀ ಚಳಿಯಿಂದ ಕೂಡಿರುತ್ತದೆ ಮತ್ತು ಇಡೀ ಮಧ್ಯಾಹ್ನ ಕೂಡಾ   ಎನ್ನುತ್ತದೆ ಬಾಸ್ಟನ್  ಹವಾಮಾನ ಮುನ್ನೋಟ. ಇಂದಿನಂತೆಯೇ ಇರುತ್ತದಂತೆ ನಾಳೆ, ಇಂದಿಗಿಂತ ವಿಭಿನ್ನವಷ್ಟೇ.   ನಗರದ ಅಂಚಿನಲ್ಲಿರುವ  ಸ್ಮಶಾನದಲ್ಲಿದ್ದೇನೆ ನಾನೀಗ.  ಹೇಗೆ ಬಂದೆನೋ ಇಲ್ಲಿಗೆ? ಅಲ್ಲೊಂದು ಗುಬ್ಬಚ್ಚಿ ಕುಂಟುತ್ತಾ  ತನ್ನ ಮೂಳೆಗಳ ಪುಟ್ಟ ಊರುಗೋಲುಗಳನ್ನು ಹಿಡಿದು   ಹಾದುಹೋಗುವಾಗ ಹೇಳಿದ್ದು ಹೀಗೆ: ನಾನು ಫ್ರೆಡೆರಿಕೋ...

ನಡೆದು ಮನೆಗೆ ಹೋಗುವಾಗ

ಇಮೇಜ್
ಈ ಕವಿತೆಯನ್ನು ಒಂದೆರಡು ಸಲ ಓದಿದ ನಂತರ ಕೆಳಗಿನ ಟಿಪ್ಪಣಿ ಓದಿ. ನಿಮಗೆ ಈ ಕವಿತೆಯಲ್ಲಿ ಬೇರೇನಾದರೂ ಸ್ವಾರಸ್ಯ ಕಂಡರೆ ತಿಳಿಸಿ. ನಡೆದು ಮನೆಗೆ ಹೋಗುವಾಗ   ಮೂಲ ಅಮೆರಿಕನ್ ಕವಿತೆ - ಮರೀ ಹೋವಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಎಲ್ಲವೂ ಸಾಯುತ್ತದಲ್ಲ ಎಂದೆ ನಾನು.  ಅದು ಯಾವಾಗ ಪ್ರಾರಂಭವಾಯಿತೋ? ಒಂದು ಮರದಿಂದಲೋ? ಶರತ್ಕಾಲದಿಂದಲೋ? ನನ್ನಿಂದಲಂತೂ ಅಲ್ಲ ಎಂದಳು ಅವಳು. ಓ ಹಾಗೋ ಸಮಾಚಾರ ಎಂದೆ ನಾನು. ಅದಕ್ಕವಳು ನಾನು ಪುನರ್ಜನ್ಮ ಪಡೆಯುತ್ತೇನೆ ಎಂದಳು. ಇನ್ನೊಂದು ಕೆಲವು ಸಾವಿರ ವರ್ಷದಲ್ಲಿ ಸಂಧಿಸೋಣ! ಎಂದು ನಕ್ಕಳು.   ವರ್ಷಗಳು ಯಾಕೆ? ನಿಮಿಷಗಳಲ್ಲಿ ಆಗೋಲ್ಲವೇ? ಹೋಗಲಿ ದಿನಗಳಲ್ಲಿ? ಈ ಮಾತಿಗೆ  ಹೊಟ್ಟೆ ಹುಣ್ಣಾಗುವಷ್ಟು ನಕ್ಕಳು.  ವರ್ಷಗಳು ಬೇಕು, ಎಂದಳು ನಿರ್ಧಾರದ ಧ್ವನಿಯಲ್ಲಿ.  ನಮ್ಮಿಬ್ಬರದೂ ಹಲವು ಜನ್ಮಗಳ ನಂಟಿರಬಹುದೇನೋ ಅಂದೆ. ನಾನು ಈ ಭೂಮಿಯ ಮೇಲೆ ಒಮ್ಮೆಯೂ ಆತ್ಮ ಪಡೆದಿಲ್ಲ ಎಂದಳು.  (ತುಂಬಾ ಚಳಿಯಿತ್ತು. ನಾವು ಹಸಿದಿದ್ದೆವು.) ಮುಂದಿನ ಸಲ ನೀನು ಅಮ್ಮ ಆಗು, ನಾನೆಂದೆ. ಸಾಧ್ಯವೇ ಇಲ್ಲ ಜೋಸೇ ಎಂದವಳು ಅನ್ನುವುದಕ್ಕೂ    ನಾವು ಚಳಿಗಾಳಿಯ ಕೊನೆಯ ತಿರುವಿಗೆ ಬರುವುದಕ್ಕೂ ತಾಳೆಯಾಯಿತು. ಟಿಪ್ಪಣಿ:  ಕುತೂಹಲಕರವಾದ ಈ ಕವಿತೆಯನ್ನು ಹೇಗೆ ಅರ್ಥೈಸಿಕೊಳ್ಳುವುದು? ಈ ಸಂಭಾ...

ಎಷ್ಟೊಂದು ನೀಡುವಳು ಭೂಮಿತಾಯಿ!

ಇಮೇಜ್
ಮೂಲ ಹಿಂದಿ ಕವಿತೆ - ಸುಮಿತ್ರಾನಂದನ್ ಪಂತ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಚಿಕ್ಕಂದಿನಲ್ಲಿ ನಾನು ಮಾಡಿದ ಸಾಹಸ ಹೀಗಿತ್ತು: ನೆಲದಲ್ಲಿ ಒಂದೆರಡು ನಾಣ್ಯಗಳ ಬಿತ್ತು ಪ್ರತಿದಿನವೂ ನೀರೆರೆದು ಮಾಡಿದ್ದೆ ಪ್ರಾರ್ಥನೆ ನಾಣ್ಯಗಳ ಫಸಲನ್ನು ಕಂಡಿತ್ತು ಕಲ್ಪನೆ! ಹೂವಿನಲಿ ಕಾಯಲ್ಲಿ ಹಣ್ಣಲ್ಲಿ ನಾಣ್ಯ! ಝಣಝಣತ್ಕಾರದ ಸದ್ದು ಅಸಾಮಾನ್ಯ! ಆದರೆ ಬಂಜರು ಭೂಮಿ ಏನೂ ಕೊಡಲಿಲ್ಲ! ಕೊಡ ನೀರು ಸುರಿದರೂ ಕುಡಿ ಚಿಗುರಲಿಲ್ಲ! ಮುರಿದುಬಿದ್ದಿತ್ತು ನನ್ನ ಶ್ರೀಮಂತಿಕೆಯ ಕನಸು! ಒಂದೆರಡು ದಿನ ಹತಾಶೆಯಲ್ಲಿ ಬೆಂದಿತ್ತು ಮನಸು! ಸರಿ ಇರಲಿಲ್ಲ ನಾನು ಬಿತ್ತ ಬೀಜಗಳು ಅಷ್ಟೇ! ಮೋಹವನ್ನು ಬಿತ್ತಿದ್ದೆ , ನೀರೆರೆದಿದ್ದೆ ದಾಹಕ್ಕೆ! ಇದಾಗಿ ಕಳೆದುಹೋಯಿತು ಅರ್ಧ ಶತಮಾನ ಕಳೆದುಹೋದವು ಸಿಹಿಕಹಿ ಋತುಮಾನ ಗ್ರೀಷ್ಮಗಳು ಕುದ್ದವು , ವರ್ಷಋತುಗಳು ತೂಗಿದವು , ಶರದೃತುಗಳು ಮುಗುಳ್ನಕ್ಕವು ಗಡಗಡ ನಡುಗಿದವು ಹೇಮಂತಗಳು , ವನಗಳಲ್ಲಿ ಅರಳಿದವು ವಸಂತಗಳು! ಮತ್ತೊಮ್ಮೆ ಗಾಢ ಲಾಲಸೆ ಹೊತ್ತು ಕಡುಗಪ್ಪು ಮೋಡಗಳು ಸುರಿಸಿದಾಗ ಮುತ್ತು ಅಂಗಳದ ಒದ್ದೆ ಭೂಮಿಯಲ್ಲಿ ಹಾಗೇ ಸುಮ್ಮನೇ ಬೆರಳಾಡಿಸಿ ಒಂದಷ್ಟು ಹುರುಳಿಯ ಬೀಜಗಳನ್ನು ಔಕಿದೆನು ಮೆಲ್ಲನೆ. ಮರೆತುಬಿಟ್ಟೆ ಅನಂತರ ಈ ಮಾತನ್ನು ಪೂರಾ ವಿಶೇಷವೇನಿದೆ ನೆನಪಿಟ್ಟುಕೊಳ್ಳಲೂ ಕೂಡಾ! ಆದರೆ ಮುಂದೊಂದು ದಿನ ಅಂಗಳದಲ್ಲಿ ನಾನು ಓಡಾಡುತ್ತಿರುವಾಗ ಕಂಡುದಾದರೂ ಏನು! ಹ...

ಮತ್ತೆ ಮಾತಾಡುತಿರುವೆ ಹೂಗಳದು

ಇಮೇಜ್
ಮೂಲ ಉರ್ದೂ - ಮಖ್ಡೂಮ್ ಮಹಿಉದ್ದೀನ್  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಮತ್ತೆ ಮಾತಾಡುತಿರುವೆ ಹೂಗಳದು ರಾತ್ರಿಯೋ ಜಾತ್ರೆ ಇದೋ ಹೂಗಳದು ಹೂವಿನದೇ ಹಾರ, ದಂಡೆ ಹೂಗಳದು ಸಂಜೆಯೂ ಹೂವು ರಾತ್ರಿ ಹೂಗಳದು ನಿನ್ನ ಒಡನಾಟ ಹೂವಿನೊಡನಾಟ ನಿನ್ನ ಮಾತೂನೂ ಮಾತು ಹೂಗಳದು ಸೇರುವುವು ಕಣ್ಣು, ಮದಿರೆ ಸೇರುವುದು, ಸೇರುತಿವೆ  ಜೀವನಾಡಿ  ಹೂಗಳದು  ಯಾರು ಬಿಡುತಾರೆ ಪ್ರಾಣ ಹೂಗಳಿಗೆ  ಯಾರು ಮಾತಾಡುತಾರೆ ಹೂಗಳದು  ಸಹೃದಯವೆಲ್ಲಿ ಎಲ್ಲಿ  ಸಜ್ಜನಿಕೆ  ನಷ್ಟವಾಯ್ತು ಜಗತ್ತು  ಹೂಗಳದು ಸಹಿಸುವರಾರು ಪ್ರೀತಿಯಾರೋಪ  ಕೇಳುವವರಾರು ಮಾತು ಹೂಗಳದು ನಸುಕಿನ ಮಾಟ ನನ್ನ ಕಣ್ಣಲ್ಲಿ  ನಿನ್ನ ಕಣ್ಣಲ್ಲಿ ಇರುಳು ಹೂಗಳದು   ಮುಂದೆಯೂ ಹೂವು ನಗುವುವು ಬಿರಿದು  ನಿತ್ಯ ಉಲ್ಲೇಖ, ಮಾತು  ಹೂಗಳದು ಸೌರಭವ ಬೀರುತಿರುವ ಈ ಹಾಡು  ಪಾಳುಬೀಡಲ್ಲಿ ರಾತ್ರಿ ಹೂಗಳದು

ಒಂದು ಬೆಳಗ್ಗೆ

ಇಮೇಜ್
ಒಂದು ಬೆಳಗ್ಗೆ  ಮೂಲ ಅಮೆರಿಕನ್ ಕವಿತೆ - ಈಮನ್ ಗ್ರೆನನ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್    ವಿಚಿತ್ರ ಆಕಾರದ ಕಲ್ಲುಗಳಿಗಾಗಿ ಕಡಲ ತೀರದಲ್ಲಿ ಹುಡುಕಾಡುತ್ತ ಕಣ್ಣಿಗೆ ಬಿತ್ತು ನೀರುನಾಯಿಯ ಕೊಳೆಯುವ ಶವ. ಇಡೀ ದಿವಸ ಸಹಿಸಿಕೊಂಡಿದ್ದೆ  ಈ ಬರ್ಬರ ಬೀಳ್ಕೊಡುಗೆಯ ನಾತ.   ಸಿಂಪಿಹಿಡುಕ ಹಕ್ಕಿಯೊಂದು ಕರ್ಕಶ ಧ್ವನಿಯಲ್ಲಿ ಕೂಗಿದ್ದು  ಪ್ರತಿಧ್ವನಿಸಿತು ಬಂಡೆ ಕೊರಕಲುಗಳ ನಡುವೆ -  ಎಲ್ಲಿ  ನೀರುಕಾಗೆಯೊಂದು ಉಣ್ಣುತ್ತಾ  ಕೊಲ್ಲಿಯ ನೀರಲ್ಲಿ  ಸಬ್ ಮರೀನ್ ರೀತಿಯಲ್ಲಿ ಮುಳುಗೇಳುತ್ತಿತ್ತೋ ಅಲ್ಲಿ.  ಎಲ್ಲೋ ಬಂಡೆಯೊಂದರ ಮೇಲೆ  ಅಗೋಚರವಾಗಿದ್ದ  ಸಾರಸ ಪಕ್ಷಿಯೊಂದು ಮೇಲೆದ್ದು  ಅತ್ತಿತ್ತ ಸರಿದಾಡಿ ಮತ್ತೆ ತಟಸ್ಥವಾಯಿತು ಚಿತ್ರಬರಹದ ಹಾಗೆ  ಅಥವಾ ದೀರ್ಘಾಯುಷ್ಯವು ತನ್ನನ್ನೇ ಕುರಿತು ಧೇನಿಸುತ್ತಾ ನಿಂತ ಹಾಗೆ, ಮೇಲೆ ಮೋಡ ಗಿಡಿದ ಆಕಾಶ ಮತ್ತು  ಕೆಳಗೆ ತುಸು ಕದಡಿದ ನೀರಿನ ನಡುವೆ.      ಇದು ನಡೆದದ್ದು ಯಾವಾಗ, ನನ್ನದೇ ಮರಣದ ಸ್ವಪ್ನ ಕಂಡು ಬೆಚ್ಚಿದಾಗ ತಬ್ಬಿಕೊಂಡು  ಏನೂ ಆಗಿಲ್ಲವೆಂದು ಸಾಂತ್ವನ ಪಡೆದ ಮರುದಿನ. ಚಿಟ್ಟೆಯೊಂದು ಕುಲುಕಾಡುತ್ತಾ  ಹಾರಿಹೋಗುತ್ತದೆ   ಅಲೆ-ನುಣುಪು ಕಲ್ಲುಗಳ ಮೇಲೆ.  ಹಿಂದಿರುಗಲು ...