ಮತ್ತೆ ಮಾತಾಡುತಿರುವೆ ಹೂಗಳದು
ಕನ್ನಡಕ್ಕೆ - ಸಿ ಪಿ ರವಿಕುಮಾರ್

ಮತ್ತೆ ಮಾತಾಡುತಿರುವೆ ಹೂಗಳದು
ರಾತ್ರಿಯೋ ಜಾತ್ರೆ ಇದೋ ಹೂಗಳದು
ಹೂವಿನದೇ ಹಾರ, ದಂಡೆ ಹೂಗಳದು
ಸಂಜೆಯೂ ಹೂವು ರಾತ್ರಿ ಹೂಗಳದು
ನಿನ್ನ ಒಡನಾಟ ಹೂವಿನೊಡನಾಟ
ನಿನ್ನ ಮಾತೂನೂ ಮಾತು ಹೂಗಳದು
ಸೇರುವುವು ಕಣ್ಣು, ಮದಿರೆ ಸೇರುವುದು,
ಸೇರುತಿವೆ ಜೀವನಾಡಿ ಹೂಗಳದು
ಯಾರು ಬಿಡುತಾರೆ ಪ್ರಾಣ ಹೂಗಳಿಗೆ
ರಾತ್ರಿಯೋ ಜಾತ್ರೆ ಇದೋ ಹೂಗಳದು
ಹೂವಿನದೇ ಹಾರ, ದಂಡೆ ಹೂಗಳದು
ಸಂಜೆಯೂ ಹೂವು ರಾತ್ರಿ ಹೂಗಳದು
ನಿನ್ನ ಒಡನಾಟ ಹೂವಿನೊಡನಾಟ
ನಿನ್ನ ಮಾತೂನೂ ಮಾತು ಹೂಗಳದು
ಸೇರುವುವು ಕಣ್ಣು, ಮದಿರೆ ಸೇರುವುದು,
ಸೇರುತಿವೆ ಜೀವನಾಡಿ ಹೂಗಳದು
ಯಾರು ಬಿಡುತಾರೆ ಪ್ರಾಣ ಹೂಗಳಿಗೆ
ಯಾರು ಮಾತಾಡುತಾರೆ ಹೂಗಳದು
ಸಹೃದಯವೆಲ್ಲಿ ಎಲ್ಲಿ ಸಜ್ಜನಿಕೆ
ನಷ್ಟವಾಯ್ತು ಜಗತ್ತು ಹೂಗಳದು
ಸಹಿಸುವರಾರು ಪ್ರೀತಿಯಾರೋಪ
ಸಹಿಸುವರಾರು ಪ್ರೀತಿಯಾರೋಪ
ಕೇಳುವವರಾರು ಮಾತು ಹೂಗಳದು
ನಸುಕಿನ ಮಾಟ ನನ್ನ ಕಣ್ಣಲ್ಲಿ
ನಿನ್ನ ಕಣ್ಣಲ್ಲಿ ಇರುಳು ಹೂಗಳದು
ಮುಂದೆಯೂ ಹೂವು ನಗುವುವು ಬಿರಿದು
ನಿತ್ಯ ಉಲ್ಲೇಖ, ಮಾತು ಹೂಗಳದು
ಸೌರಭವ ಬೀರುತಿರುವ ಈ ಹಾಡು
ಸೌರಭವ ಬೀರುತಿರುವ ಈ ಹಾಡು
ಪಾಳುಬೀಡಲ್ಲಿ ರಾತ್ರಿ ಹೂಗಳದು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ