ತಡವಾಗಿ ಅರಳಿದ್ದು
ಮೂಲ ಕವಿತೆ - ಮಿಷೆಲ್ ವುಲ್ಫ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಮುಳ್ಳುಗಿಡದಲ್ಲೊಂದು ಕೆಂಪು ಹವಳ ಬೆಚ್ಚಗೆ.
ನಗರಬೀದಿಯ ಕಲ್ಲುಹಾಸಿನ ಪಕ್ಕ ಹಾಸಿಗೆ ಬಿಟ್ಟೆದ್ದ
ಒಬ್ಬಂಟಿ ಗುಲಾಬಿ, ಋತುಮಾನದ ಕೊನೆಗೆ.
ನಿನ್ನನ್ನು ಆಕರ್ಷಿಸುತ್ತದೆ ಅದರ ಸೌರಭ, ರೇಷ್ಮೆ ಪದರಗಳು,
ಅದರ ಅಂತರಾಳ. ತನ್ನ ಒಡಲಲ್ಲಿ ಸೆಳೆದುಕೊಳ್ಳುತ್ತದೆ ನಿನ್ನನ್ನು
ನೀನು ಕಳೆದುಕೊಳ್ಳುವ ಹಾಗೆ ಸಮತೋಲನ.
ನಿನಗೀಗ ಕಾಣುವುದು ಪಕಳೆಗಳ ಜಾಲ.
ಗುಲಾಬಿಗಳ ಅಗಣಿತ ಪುನರಾವರ್ತನ.
ನೀನು ಜಾರುತ್ತೀಯೆ ಗಿರಿಗಿರಿ ಸುತ್ತುತ್ತಾ ಸುತ್ತುತ್ತಾ
ಗುಲಾಬಿಯ ಒಳಗೆ, ಗುಲಾಬಿಯ ಆಳಕ್ಕೆ.
ನಾನು ನಿನ್ನನ್ನು ಆಲಂಗಿಸಿಕೊಳ್ಳುತ್ತೇನೆ.
ನನ್ನೊಲವೇ ನನಗೀಗ ನಲವತ್ತ ನಾಲಕ್ಕು
ಮತ್ತು ನೀನು ನನ್ನೊಲವೇ, ಓ ನನ್ನ ಒಲವೇ,
ನನ್ನನ್ನು ನೆಟ್ಟದ್ದು ನೀನೇ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ