ಅದಾದ ನಂತರ ಏನಾಗುವುದು?
ಮೂಲ ಹಿಂದಿ - ಬಾಲಕೃಷ್ಣ ರಾವ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್

ಅದಾದ ನಂತರ ಏನಾಗುವುದು?
ಮಗು ಕೇಳಿತು ಸಡಿಲಿಸದೇ ಪಟ್ಟು
ಅಮ್ಮನ ಮುಖದಲಿ ದೃಷ್ಟಿಯ ನೆಟ್ಟು
ಗಲ್ಲದ ಮೇಲೆ ಬೆರಳನ್ನಿಟ್ಟು.
ನಿನ್ನ ವಿವಾಹವು ಮುಗಿದ ನಂತರ
ಪಡಿ ಎಡವುತ ಬರುವಳು ಮಗು, ಚೆಲುವೆ!
ನೀನೋ ಅವಳನು ನೋಡುತ ನಿಲುವೆ!
ನಾನೀ ಮನೆಯನು ತುಂಬಿಸಿಕೊಳುವೆ!
ಮಗುಮೊಗದಲಿ ಉಗಮಿಸಿ ನಗೆಕಿರಣ
ಮರುಕ್ಷಣ ಆಯಿತು ಅಂತರ್ಧಾನ!
ಮತ್ತೆ ಕೇಳಿತು - ಅಮ್ಮಾ, ಸರಿ, ಹೌದು,
ಅದಾದ ನಂತರ ಏನಾಗುವುದು?
ಇನ್ನೇನಪ್ಪಾ, ತೂಗುವುದು ತೊಟ್ಟಿಲು!
ಗದ್ದಲ ಹಾಕುವ ಮಕ್ಕಳ ಸಾಲು!
ಒಂದು ಏರಿದರೆ ನಿನ್ನ ಕಂಕಳು
ಒಂದು ಸೇರುವುದು ಅಮ್ಮನ ಮಡಿಲು!
ನನ್ನ ಆಟಿಕೆಗಳ ಕದಿಯುವರೇ ಮಕ್ಕಳು!
ಎಂದು ಒಂದು ಕ್ಷಣ ಕಾಡಿದರೂ ಪುಕ್ಕಲು
ಸಾವರಿಸಿಕೊಂಡು ಕೇಳಿತು ಮಗು "ಹೌದು,
ಅದಾದ ನಂತರ ಏನಾಗುವುದು?"
ಅಮ್ಮನಿಗೀಗ ಸಾಕಾಗಿತ್ತು!
ಪ್ರಶ್ನೆಗೆ ಉತ್ತರ ಹೇಳುತ ಸುಸ್ತು!
ಇನ್ನೇನಪ್ಪಾ ಆಗುತ್ತದೆ ಮುಂದೆ!
ಮುದುಕಿಯಾಗಿ ನಾ ಸಾಯುವುದೊಂದೇ!
ಕಣ್ಣು ತುಂಬಿಬಂದಿತು ಮಗುವಿನದು
ಪ್ರಶ್ನೆಯ ಪಾಶವು ಆದರೂ ಬಿಡದು!
ಕೇಳಿತು ಒರೆಸಿ ಕಣ್ಣಾಲಿಯ ಬಿಂದು,
"ಅದಾದ ನಂತರ ಏನಾಗುವುದು?"
ಕವಿಗೆ ಮಗುವು ಕಲಿಸಿತು ಈ ಪಾಠ
ಜೀವನ ಸುಖ ದುಃಖಗಳ ಆಟ!
ಅನಂತ ಪ್ರಶ್ನೆಯು ಉಳಿದು ಬಿಡುವುದು -
ಅದಾದ ನಂತರ ಏನಾಗುವುದು?
ಕನ್ನಡಕ್ಕೆ - ಸಿ. ಪಿ. ರವಿಕುಮಾರ್

ಅದಾದ ನಂತರ ಏನಾಗುವುದು?
ಮಗು ಕೇಳಿತು ಸಡಿಲಿಸದೇ ಪಟ್ಟು
ಅಮ್ಮನ ಮುಖದಲಿ ದೃಷ್ಟಿಯ ನೆಟ್ಟು
ಗಲ್ಲದ ಮೇಲೆ ಬೆರಳನ್ನಿಟ್ಟು.
ನಿನ್ನ ವಿವಾಹವು ಮುಗಿದ ನಂತರ
ಪಡಿ ಎಡವುತ ಬರುವಳು ಮಗು, ಚೆಲುವೆ!
ನೀನೋ ಅವಳನು ನೋಡುತ ನಿಲುವೆ!
ನಾನೀ ಮನೆಯನು ತುಂಬಿಸಿಕೊಳುವೆ!
ಮಗುಮೊಗದಲಿ ಉಗಮಿಸಿ ನಗೆಕಿರಣ
ಮರುಕ್ಷಣ ಆಯಿತು ಅಂತರ್ಧಾನ!
ಮತ್ತೆ ಕೇಳಿತು - ಅಮ್ಮಾ, ಸರಿ, ಹೌದು,
ಅದಾದ ನಂತರ ಏನಾಗುವುದು?
ಇನ್ನೇನಪ್ಪಾ, ತೂಗುವುದು ತೊಟ್ಟಿಲು!
ಗದ್ದಲ ಹಾಕುವ ಮಕ್ಕಳ ಸಾಲು!
ಒಂದು ಏರಿದರೆ ನಿನ್ನ ಕಂಕಳು
ಒಂದು ಸೇರುವುದು ಅಮ್ಮನ ಮಡಿಲು!
ನನ್ನ ಆಟಿಕೆಗಳ ಕದಿಯುವರೇ ಮಕ್ಕಳು!
ಎಂದು ಒಂದು ಕ್ಷಣ ಕಾಡಿದರೂ ಪುಕ್ಕಲು
ಸಾವರಿಸಿಕೊಂಡು ಕೇಳಿತು ಮಗು "ಹೌದು,
ಅದಾದ ನಂತರ ಏನಾಗುವುದು?"
ಅಮ್ಮನಿಗೀಗ ಸಾಕಾಗಿತ್ತು!
ಪ್ರಶ್ನೆಗೆ ಉತ್ತರ ಹೇಳುತ ಸುಸ್ತು!
ಇನ್ನೇನಪ್ಪಾ ಆಗುತ್ತದೆ ಮುಂದೆ!
ಮುದುಕಿಯಾಗಿ ನಾ ಸಾಯುವುದೊಂದೇ!
ಕಣ್ಣು ತುಂಬಿಬಂದಿತು ಮಗುವಿನದು
ಪ್ರಶ್ನೆಯ ಪಾಶವು ಆದರೂ ಬಿಡದು!
ಕೇಳಿತು ಒರೆಸಿ ಕಣ್ಣಾಲಿಯ ಬಿಂದು,
"ಅದಾದ ನಂತರ ಏನಾಗುವುದು?"
ಕವಿಗೆ ಮಗುವು ಕಲಿಸಿತು ಈ ಪಾಠ
ಜೀವನ ಸುಖ ದುಃಖಗಳ ಆಟ!
ಅನಂತ ಪ್ರಶ್ನೆಯು ಉಳಿದು ಬಿಡುವುದು -
ಅದಾದ ನಂತರ ಏನಾಗುವುದು?
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ