ಪೋಸ್ಟ್‌ಗಳು

ಜನವರಿ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಒಂದು ವಿವಾದ

ಇಮೇಜ್
 (ಈ ಕವಿತೆಗೆ ಪ್ರೇರಣೆ ಆಂಟೋನಿಯೊ ರೋಟಾ ಎಂಬ ಕಲಾವಿದನ ಚಿತ್ರ. ಒಬ್ಬ ಚಪ್ಪಲಿ ಹೊಲೆಯುವವನನ್ನು ತನ್ನ ಹಳೆಯ ಚಪ್ಪಲಿ ರಿಪೇರಿ ಮಾಡಿಕೊಡಲು ದುಂಬಾಲು ಬಿದ್ದ ಬಾಲಕಿಯ ಚಿತ್ರ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏ ಐ. ಒಂದು ವಿವಾದ 'ಆಗದಮ್ಮ ಏನೂ ಮಾಡಲು ಆಗದು ಜಾಗವೇ ಇಲ್ಲ ಹಾಕಲು ಹೊಲಿಗೆ ಹೋಗು! ಸುಮ್ಮನೇ ಪೀಡಿಸದಿರು ಮಗೂ!! 'ಹೀಗೇ ಹೇಳಿದ್ದೆಯಲ್ಲ ಹೋದಸಲವೂ!' ರಾಗ ಎಳೆದಳು (ಅವನಲ್ಲಿ ಅಪ್ಪನಷ್ಟೆ ಸಲುಗೆ) 'ಆಗ ಹೇಗಾಯಿತೋ ಹಾಗೇ ಈಗಲೂ.' 'ಮೃದುವಾದ ಪಾದಕ್ಕೆ ಬೇಕು ಹೊಸ ಪಾದುಕೆ ಇದು ಕೂಡಾ ಹೋಗದಲ್ಲ ನಿನ್ನಪ್ಪನ ತಲೆಗೆ! ಕೊಡಿಸು ಹೊಸದೆಂದು ಕೇಳಿಕೋ ಹೋಗು!' 'ಐದು ವರ್ಷದ ಹಿಂದೆ ಕೊಂಡದ್ದು ನಿನ್ನಲ್ಲೇ ಇದರ ಸಾಲ ತೀರಿದ್ದು ವರ್ಷದ ಕೆಳಗೆ! ಪದೇ ಪದೇ ಮನೆಗೆ  ಬರಬೇಕಾಯಿತು ನೀನು!' 'ಆಯಿತು ಹೋಗು, ಏನಾದೀತೋ ! ಕಾಯಬೇಕಾದೀತು ಎರಡು ವಾರದವರೆಗೆ! ಸಾಯದೇ ಇದ್ದರೆ ಮಾಡುವ ಏನಾದರೂ!' 'ಬೇಗ ಮುಗಿಸಿಕೊಡು ಮಾವ, ನಾನು ನಾಳೆ ಬರುವೆ ಆಗದೆಂದರೂ ಕೆಲಸ ನೀನು ದೇವರ ಹಾಗೆ ಹೇಗೋ ಮಾಡುವೆ ಪೂರ್ತಿ  ಹಿಂದೆ ಬಿದ್ದಾಗ ಜನರು!'

ಚಾಟ್ ಜಿಪಿಟಿ ಕಾರ್ನರ್

ಇಮೇಜ್
"ಅದೇನೋ ಚಾಟ್ ಜಿಪಿಟಿ ಅಂತೆ ಅದು ಇಲ್ಲಿ ಸಿಕ್ಕಲ್ವಾ?" ಅಂತ ಮರಿಗೌಡ ಕೇಳಿದಾಗ ಚಾಟ್ ಮಾಡಿಕೊಡುವ ಚಾಟ್ ಮೇಕರ್ ಅವರ ಕಡೆಗೆ ಕುತೂಹಲದಿಂದ ನೋಡಿ ಇಲ್ಲ ಎಂಬಂತೆ ತಲೆ ಆಡಿಸಿದ.  ರಾಜಾರಾಂ ನೆತ್ತಿಗೆ ಖಾರ ಹತ್ತಿದವರಂತೆ ಕೆಮ್ಮಿ ನೀರು ಕುಡಿದು ಸುಧಾರಿಸಿಕೊಂಡರು. "ರೀ! ಚಾಟ್ ಜಿಪಿಟಿ ಅಂದ್ರೆ ಚಾಟ್ ಅಂತ ಯಾರು ನಿಮಗೆ ಹೇಳಿದ್ದು?!" "ನಮ್ಮ ಹುಡುಗ ಅದೇನೋ ಚಾಟ್ ಜಿಪಿಟಿ ಅಂತ ಪಿಟಿಪಿಟಿ ಹೇಳ್ತಾ ಇದ್ದ. ಅವನ ಫೆಂಡ್ಸ್ ಎಲ್ಲಾ ಟ್ರೈ ಮಾಡಿದರಂತೆ. ಸಖತ್ ಅಂತ ಅವರಮ್ಮನ ಮುಂದೆ ಏನೋ ತುಂಬಾ ಹೇಳ್ತಾ ಇದ್ದ. ಅವನು ಎಲ್ಲಾ ಹೇಳೋದು ಅಮ್ಮನಿಗೆ. ನಾನು ಜಿಪಿಟಿ ಅಂದ್ರೆ ಎಂಥದ್ದೋ ಚಾಟ್ಏ ಇರಬೇಕು ಅಂತ ಕನ್ಕ್ಲೂಡ್ ಮಾಡಿದೆ. ಅದಕ್ಕೆ ಕಾರಣವೂ ಇದೆ. ನಮ್ಮ ಚಾಟ್ ಕಾರ್ನರ್ನಲ್ಲಿ ಗೋಲ್ ಗಪ್ಪಾ ಚಾಟ್ಗೆ ಚಾಟ್ ಜಿ, ಪಾಪಡಿ ಚಾಟ್ಗೆ ಚಾಟ್ ಪಿ ಅಂತ, ಟೊಮೆಟೊ ಚಾಟ್ಗೆ ಚಾಟ್ ಟಿ ಅಂತ ಬರೆದಿರೋದು ನೀವೂ ನೋಡಿದ್ದೀರಲ್ಲ." "ಓಹೋ. ಅದೆಲ್ಲ ಸೇರಿಸಿದರೆ ಚಾಟ್ ಜಿಪಿಟಿ ಅಂತ ನಿಮ್ಮ ಕಲ್ಪನೇನೋ!" "ಹೆಹೆ..." "ಸಾರಿ, ನಿಮ್ಮ ಉತ್ತರ ತಪ್ಪಾಗಿದೆ. ನಿಮಗೆ ಮೈನಸ್ ಎರಡು ಅಂಕಗಳು." "ಏನು ಮತ್ತೆ ಚಾಟ್ ಜಿಪಿಟಿ ಅಂದ್ರೆ!?" "ಅಯ್ಯೋ ಅದೊಂದು ಚಾಟಿಂಗ್ ಆಪ್ ಕಣ್ರೀ. ಎಐ ಬೇಸ್ಡ್  ಉ."  ರಾಜಾರಾಂ ಚಾಟಿ ಹೊಡೆದ ಹಾಗೆ ಹೇಳಿ ಚಮಚದಿಂದ ಚಾಟ್ ತಿನ್ನುತ್ತಾ ಚಾ ಕುಡಿದರು. "ಏಐ...

ಶರತ್ಕಾಲದ ಸಂವಾದ

ಇಮೇಜ್
 ಈ ಕವಿತೆಗೆ ಪ್ರೇರಣೆ ನೀಡಿದ್ದು  ರೀನ್ಹೋಲ್ಡ್ ಲಜೆಂಗ್ರೆನ್ ಎಂಬ ಕಲಾವಿದ ಬರೆದ ಚಿತ್ರ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏಐ #ಚಿತ್ರಕವಿತೆ: ಸಿ. ಪಿ. ರವಿಕುಮಾರ್  ಶರತ್ಕಾಲದ ಬೆಳಗು ನಡೆದು ಹೊರಟಾಗ ನೋಡಿದೆನು ತರಗೆಲೆ ಉದುರಿಸಿ ನಿಂತ ಹೆಮ್ಮರಗಳ ಸಾಲು - ಹೀಗೇಕೆ ಎಲ್ಲ ಬರಿದಾಗಿ ನಿಂತಿರುವಿರಿ ತಪೋನಿರತ ಸಾಧುಗಳ ಹಾಗೆ ನೀವು? ಉತ್ತರಿಸಿತು ಒಂದು ಮರ ಗಂಭೀರ ದನಿಯಲ್ಲಿ: ಶಿಶಿರದಲ್ಲೂ ನಾವು ಹಸಿರೆಲೆ ಛತ್ರಿಯ ಹೊತ್ತು ನಿಂತಿದ್ದರೆ ಓ ಮಗೂ ಯೋಚಿಸಿ ನೋಡು ಸೂರ್ಯನ ಮಂದಾಗ್ನಿ ಹೇಗೆ ಬರುತ್ತಿತ್ತು? ಮರಳಿ ಬರುವಾಗ ಅದೇ ದಾರಿಯಲ್ಲಿ ನೋಡಿದೆನು ಮರಗಳು ಅಲ್ಲೇ ನಿಂತಿದ್ದವು ಇನ್ನೂ. ಎಲ್ಲರೂ ಕೈ ಎತ್ತಿ ಪ್ರಾರ್ಥಿಸುವ ಹಾಗಿದೆಯಲ್ಲ ಹೇಳಿ ದೇವನಲ್ಲಿ ಸಲ್ಲಿಸುವ ಕೋರಿಕೆ ಏನು? ಉತ್ತರಿಸಿತು ಒಂದು ಮರ ಗಂಭೀರ ದನಿಯಲ್ಲಿ: ಪ್ರಾರ್ಥಿಸುತ್ತಿದ್ದೇವೆ ಹೊಸಚಿಗುರು ಬರಲಿ ನಮಗೆ! ಮುಂಬರುವ ಗ್ರೀಷ್ಮ ನೀನು ನಡೆದು ಬರುವಾಗ ಈ ದಾರಿ ತಂಪಾಗಿಸಲು ಮರಳಿ ಕೊಡು ಹಸಿರೆಲೆಯ ಕಾಣ್ಕೆ.

ನಾಟ್ಉ ನಾಟ್ಉ ನಾಟ್ಉ

ಇಮೇಜ್
"ನಾಟ್ಉ ನಾಟ್ಉ ನಾಟ್ಉ!" ಎಂದು ರಾಜಾರಾಂ ಹಮ್ ಮಾಡಿಕೊಂಡರು. ನಾವು ಚಾಟ್ ಸೆಂಟರ್ ಕಡೆಗೆ ಹೊರಟಿದ್ದೆವು. "ಏನ್ರೀ ಅದು ನಾಟ್ ನಾಟ್ ನಾಟ್ ಅಂತ?" ಎಂದು ಮರಿಗೌಡ ಕೇಳಿದರು. "ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದೆ ಹಾಡಿಗೆ. ಏನು ಅಂತ ಕೇಳ್ತಾ ಇದೀರಲ್ಲ!" "ಗೋಲ್ಡನ್ ಗ್ಲೋಬ್ ಅಂದ್ರೆ ಯಾವ ಅವಾರ್ಡ್ ಅದು?" "ಹಾಲಿವುಡ್ ಕೊಡೋ ಅವಾರ್ಡ್ ಕಣ್ರೀ.  ಈ ಸಲ ತೆಲುಗು ಹಾಡಿಗೆ ಕೊಟ್ಟಿದಾರೆ. ನಾಟ್ಉ ನಾಟ್ಉ ನಾಟ್ಉ..." "ಯಾವ ಸಿನಿಮಾ ರೀ? ತೆಲುಗಿನಲ್ಲಿ ಒಳ್ಳೊಳ್ಳೆ ಭಕ್ತಿ ಪ್ರಧಾನ ಚಿತ್ರಗಳು ಮಾಡ್ತಾ ಇದ್ರು. ಮಾಯಾಬಜಾರ್ ನೋಡಿದೀರಾ ತಾನೇ?" "ಇದು ಆರ್ ಆರ್ ಆರ್ ಅಂತ ಕಣ್ರೀ. ನಾನು ನೆಟ್ ಫ್ಲಿಕ್ಸ್ನಲ್ಲಿ ನೋಡಿದೆ. ನಾಟ್ಉ ನಾಟ್ಉ ನಾಟ್ಉ ಅಂತ ಅದೇನು ಡ್ಯಾನ್ಸ್ ಮಾಡಿದಾರೆ ಗೊತ್ತಾ! ನನಗೇ ಡ್ಯಾನ್ಸ್ ಮಾಡೋಣ ಅಂತ ಹುರುಪು ಬಂದು ನನ್ನ ಮಿಸೆಸ್ ಅವರಿಗೆ ಹೇಳಿದೆ. ಅವರು ನಾಟ್ ನಾಟ್ ನಾಟ್ ಅಂದು ಬಿಟ್ರು." "ಏನು ನಾಟ್ ನಾಟ್ ನಾಟ್ ಅಂದ್ರೆ?" "ಯಾರಿಗೆ ಗೊತ್ತು! ಈಗೆಲ್ಲಾ ಸಿನಿಮಾದಲ್ಲಿ ಬರೋ ಹಾಡುಗಳಿಗೆ ಮೀನಿಂಗ್ ಎಲ್ಲಾ ಇರಲ್ಲ. ಹಿಂದೆ ಕೂಡಾ ಇರಲಿಲ್ವಾ, ರಂಪಂಪೋಚ್ ರಂಪಂಪೋಚ್ ಅಂತ. ಅದಕ್ಕೆ ಏನಿದೆ ಅರ್ಥ! ಏನೋ ಮ್ಯೂಸಿಕ್ ಡೈರೆಕ್ಟರಿಗೆ ಟ್ಯೂನ್ ಹೊಳೀತು. ಅದಕ್ಕೆ ಸರಿಯಾಗಿ ಏನೋ ಸಾಹಿತ್ಯ ಗೀಚಿ ಎಸೆದರಾಯ್ತು. ಸಾಹಿತ್ಯ ಎಲ್ಲಾ ಯಾರು ನೋಡ್ತಾರೆ ಈ...

ಜರೆ

ಇಮೇಜ್
 (ಚಾರ್ಲ್ಸ್ ಸ್ಪೆನ್ಸ್ಲೇ ಅವರ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ.) ಚಿತ್ರಕವಿತೆ: ಸಿ. ಪಿ. ರವಿಕುಮಾರ್ ಜರೆ  ಮರೆತ ರಾಗಗಳನ್ನು ಮತ್ತೆ ನೆನೆಸಿಕೊಳ್ಳುತ್ತಾ ನೆರೆತ ಕೂದಲಿನವನು ಕೂತಿರುವನು ಸುಮ್ಮನೆ ಬರುವವರಿದ್ದರಲ್ಲ ಇಂದು ಯಾರೋ? ಅಥವಾ ಕರೆದಿದ್ದರೋ ಅವರು ತನ್ನನ್ನೇ ಮನೆಗೆ? ಯಾರವರು? ಓರಗೆಯವರು ಒಬ್ಬರೂ ಇಲ್ಲವಲ್ಲ. ಹೊರದೇಶದಲ್ಲಿದ್ದಾರಲ್ಲವೆ ವರ್ಷಗಳಿಂದ ಮಕ್ಕಳು?  ಕರೆದು ಕೇಳೋಣ ಎಂದು ಕೂಗಿದ ಅವಳನ್ನು; ಮರುಕ್ಷಣವೇ ಅವಳು ಮನದಲ್ಲಿ ನಕ್ಕಳು: ತೆರೆತೆರೆಯಾಗಿ ನಗಬಲ್ಲವಳು ಅವಳೊಬ್ಬಳೇ ಪೊರೆಗಣ್ಣಿಗೂ ಕಾಣುತ್ತದೆ ಅವಳ ನಗುಮುಖ. ಅರಳು ಮರಳಾಗಿದೆ ಎಂದು ರೇಗಿಸಿ ನಕ್ಕರೂ ಬರಲಿಲ್ಲ ಏಕೆಂದು ಯೋಚಿಸಿದ ಮುದುಕ. ಬರಿದಾದ ರಂಗ, ವಾದ್ಯ ನುಡಿಸುತ್ತಿದ್ದಾಗ ತಾನೊಬ್ಬನೇ ತೆರೆ ಯಾಕೆ ಎಳೆಯುತ್ತಿದೆ? ಕಾರ್ಯಕ್ರಮ ಮುಗಿಯಿತೇ?

ಎತ್ತರ

ಇಮೇಜ್
 (ಇನಾರಿ ಕ್ರೋಹ್ನ್ ಅವರ ಚಿತ್ರ ನೋಡಿ ಪ್ರೇರಿತನಾಗಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ.) ಎತ್ತರ ಎತ್ತರದ ಮರದ ಬುಡದಲ್ಲಿ ನಿಂತು ಹತ್ತಲು ಉತ್ಸುಕನಾದ ಹುಡುಗ. ಪಟ್ಟು ಸಾಹಸ ಪ್ರಯತ್ನಿಸಿ ಸೋತು  ಮತ್ತೊಮ್ಮೆ ಯತ್ನವ ಮಾಡಿ ದಿನವೂ ಹತ್ತನೇ ದಿವಸ ಏರಿಯೇ ಬಿಟ್ಟ ಮರದ ತುತ್ತ ತುದಿಗೆ. ಎದೆಯುಬ್ಬಿಸಿ ನೋಡಿದ ಸುತ್ತಲೂ. ಕಾಣಿಸಿತು ದೂರದಲ್ಲಿ ಹತ್ತಿರದ ಬೆಟ್ಟ. ಬಾ ಎಂದು ಕೈ ಬೀಸಿತು ಇವ ನತ್ತ. ಕಟ್ಟಿಕೊಂಡು ಬುತ್ತಿ ಹೊರಟೇ ಬಿಟ್ಟ ಕಷ್ಟ ಎನ್ನಿಸಿತು, ಆದರೂ ಬಿಡದೆ ಪ್ರಯತ್ನ ಕೊಟ್ಟಕೊನೆಯನ್ನು ಏರಿಯೇ ಬಿಟ್ಟವನು ದಿಟ್ಟಿಸಿದ, ಎಷ್ಟು ಪುಟ್ಟದು ನೆನ್ನೆ ಹತ್ತಿದ ಮರ! ಮತ್ತೊಂದು ದಿಕ್ಕಿಗೆ ತಿರುಗಿದಾಗ ಕಂಡದ್ದೇನು ಅವನು - ಉತ್ತುಂಗ ಗಿರಿಶಿಖರ, ದೇವದಾರುಗಳ ಕಾನು. #ಚಿತ್ರಕವಿತೆ ಸಿ. ಪಿ. ರವಿಕುಮಾರ್ (ಕಾನು - ಕಾನನ, ಕಾಡು)

ಹೋಮಿಯೋಪತಿ ಔಷಧ (ನೆನಪು)

ಇಮೇಜ್
  ಆಗ ನನಗೆ ಹನ್ನೊಂದೋ ಹನ್ನೆರಡೋ ವಯಸ್ಸು. ನಾವು ಆಗ ದೆಹಲಿಯಲ್ಲಿದ್ದೆವು.  ಆಗ ಅಷ್ಟೊಂದು ಕ್ಲಿನಿಕ್ ಗಳು ಇರಲಿಲ್ಲ. ಜನ ಚಿಕಿತ್ಸೆಗಾಗಿ ಸರಕಾರೀ ಡಿಸ್ಪೆನ್ಸರಿಗೆ ಹೋಗುತ್ತಿದ್ದರು.  ನಾವಿದ್ದ ಮನೆಯ ಬೀದಿಯಲ್ಲೇ ಒಬ್ಬ ಪ್ರಸಿದ್ಧ ವೈದ್ಯರು ಮನೆಯಲ್ಲೇ ಕ್ಲಿನಿಕ್ ಹಾಕಿಕೊಂಡಿದ್ದರು. ಡಾ| ಘೋಷಾಲ್ ಎಂಬುದು ಅವರ ಹೆಸರು. ಅವರನ್ನು ಕಾಣಲು ದೂರದೂರದಿಂದ ಜನ ಬರುತ್ತಿದ್ದರು. ದಿನಬೆಳಗಾದರೆ ಅವರ ಮನೆಯ ಮುಂದೆ ದೊಡ್ಡ ಕ್ಯೂ  ನಿಲ್ಲುತ್ತಿತ್ತು. ಕೆಲವು ಸಲ ಸರಿರಾತ್ರಿಯ ಹೊತ್ತು ಯಾರಾದರೂ ಅವರನ್ನು ಕಾಣಲು ಬಂದರೆ ಗೇಟಿನ ಒಳಗೆ ಪ್ರವೇಶವಿರಲಿಲ್ಲ. "ಡಾಕ್ಟರ್ ಸಾಬ್! ಡಾಕ್ಟರ್ ಸಾಬ್!" ಎಂದು ಅವರು ಕೂಗಿಕೊಳ್ಳುತ್ತಿದ್ದುದು ನಮ್ಮ ಮನೆಗೂ ಕೇಳುತ್ತಿತ್ತು.  ಡಾಕ್ಟರ್ ಸಾಹೇಬರು ಇದನ್ನು ಕಿವಿಗೇ ಹಾಕಿಕೊಳ್ಳದೆ ಇದ್ದುಬಿಡುತ್ತಿದ್ದರು. ಕೆಲವೊಮ್ಮೆ ಅವರು ಬೈದು "ನಾಳೆ ಬೆಳಗ್ಗೆ ಬನ್ನಿ" ಎಂದು ಹೇಳುವುದು ಕೇಳುತ್ತಿತ್ತು.  ಒಂದು ಸಲ ಯಾರದೋ ಮನೆಗೆ ಹೋದಾಗ ಅಲ್ಲಿ ಅವಲಕ್ಕಿ ತಿಂದದ್ದಕ್ಕೋ ಏನೋ ನನಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಈ ಹೊಟ್ಟೆ ನೋವು ಬಂದಾಗ ಒಂದು ಅರ್ಧ ಗಂಟೆ ತುಂಬಾ ಕಷ್ಟವಾಗುತ್ತಿತ್ತು. ಕ್ರಮೇಣ ಹೊಟ್ಟೆ ನೋವು ಕಡಿಮೆಯಾಗುತ್ತಿತ್ತು.  ದಿನಕ್ಕೆ ಹೀಗೆ ಒಂದೆರಡು ಸಲ ಆಗತೊಡಗಿತು. ಮೊದಲು ಮನೆವೈದ್ಯ ಮಾಡಿದರು. ಗುಣವಾಗಲಿಲ್ಲ. ನಾನು ಒದ್ದಾಡುವುದು ನೋಡಿ ಅಷ್ಟು ಹತ್ತಿರದಲ್ಲಿದ್ದ ಡಾ. ಘೋಷಾಲ್...

ಶಾಂತಿ ನಿಕೇತನ

ಇಮೇಜ್
ನೇರಳೆ ಬಣ್ಣದ ಹೂವಿನ ಹೊದರು ನೀಲಾಕಾಶವು ಹಿನ್ನೆಲೆಯಲ್ಲಿ ಹಸಿರುಹುಲ್ಲು, ಮಣ್ಣಿನ ಕಿರುದಾರಿ ಹಳದಿ ಹೂವುಗಳ ರತ್ನಗಂಬಳಿ ಕೇಳಿಸಿತೇ ಮರಗಳ ಮರೆಯಲ್ಲಿ ಯಾವುದೋ ಹಕ್ಕಿಯ ಪ್ರೇಮಾರ್ತ ಕರೆ? ಎಸೆದ ಕಲ್ಲಿಗೆ  ನಗೆತರಂಗ ತರಂಗ ಚಿಮ್ಮಿಸಿ ಮತ್ತೆ ಶಾಂತವಾದಂತೆ ಕೆರೆ ಮತ್ತೆ ನೆಲೆಸುವುದೆಂತೋ ಶಾಂತಿ ಹಾಗೇ ಮರಳಿ ಬರಲಿ ನೆಮ್ಮದಿ ನಮ್ಮ ಬಾಳ್ಗೆ. ಕೊನೆಗೊಳ್ಳಲಿ  ಕೊರೋನಾ ರೋಗರುಜಿನ, ಮತ್ತು ಮಾನವ-ಮಾನವ ದ್ವೇಷ, ರಕ್ತಪಾತ, ಕದನ.

ಗ್ಯಾಸ್ ಲೈಟಿಂಗ್

ಇಮೇಜ್
ಸಿ ಪಿ ರವಿಕುಮಾರ್ "ಒಲೆಯ ಮೇಲೆ ಕುಕ್ಕರು ಬಡಿ" ಎಂದು ನಿಮಗೆ ಯಾರಾದರೂ ಹೇಳಿದರೆ ಅದರ ಅರ್ಥ ಒಲೆಯ ಮೇಲೆ ಕೂತುಬಿಡಿ ಅಂತ ಖಂಡಿತಾ ಅಲ್ಲ.  ಕುಕ್ಕರುಗಾಲಲ್ಲಿ ಕೂಡು ಎಂದರೆ ಕುಕ್ಕುಟ ಅಥವಾ ಕೋಳಿಯ ಹಾಗೆ ಕೂಡುವುದು ಎಂದು ಕೂಡಾ ಈಗ ಮಕ್ಕಳಿಗೆ ಗೊತ್ತಿಲ್ಲ. ಏಕೆಂದರೆ ಈಗ ಮೇಷ್ಟ್ರು ಮಕ್ಕಳಿಗೆ ಇಂಥ ಶಿಕ್ಷೆಗಳನ್ನು ಕೊಡುವಂತಿಲ್ಲ.   "ಶಿಕ್ಷಕ" ಎನ್ನುವುದು ಇಂದು ಕೇವಲ ಆಲಂಕಾರಿಕ ಪದವಾಗಿ ಉಳಿದಿದೆ. ನಾನು ಓದುತ್ತಿದ್ದಾಗ ಅನೇಕ ಬಗೆಯ ಶಿಕ್ಷೆಗಳನ್ನು ಶಿಕ್ಷಕರು ಮುಂಚೆಯೇ ಯೋಚಿಸಿಕೊಂಡು ಕ್ಲಾಸಿಗೆ ಬರುತ್ತಿದ್ದರು.  ಬೆಂಚಿನ ಮೇಲೆ ನಿಲ್ಲಿಸುವುದು ಅತ್ಯಂತ ಸರಳ ಶಿಕ್ಷೆ.  ಇದು ಎಷ್ಟು ಪ್ರಸಿದ್ಧವಾಯಿತು ಎಂದರೆ ಮುಂದೆ ಐಟಿ ಇಂಜಿನಿಯರ್ ಆದಮೆಲೂ ಇದನ್ನು ಮರೆಯದಷ್ಟು. ಕೆಲಸಕ್ಕೆ ಸೇರಿದ ಇಂಜಿನಿಯರಿಗೆ ಯಾವ ಪ್ರಾಜೆಕ್ಟ್ ಕೊಡಬೇಕು ಎಂಬ ನಿರ್ಧಾರ ಆಗುವವರೆಗೆ ಅವನು (ಅವಳು) ಬೆಂಚಿನ ಮೇಲೆ ನಿಂತಿರಬೇಕು.  ಹಾಗಂತ ಐಟಿ ಕಂಪನಿಗಳಲ್ಲಿ ಬೆಂಚುಗಳು ಇರುತ್ತವೆ ಎಂದು ಖಂಡಿತಾ ಕಲ್ಪಿಸಿಕೊಳ್ಳಬೇಡಿ. ಬೆಂಚ್ ಇಲ್ಲದ ಕೆಲವು ಕಂಪನಿಗಳಲ್ಲಿ ನೆಲದ ಮೇಲೆ ನಿಲ್ಲಿಸುತ್ತಾರೆ.  ಪಾರ್ಕಿನಲ್ಲಿ ಬೆಂಚ್ ಕಂಡಾಗ ಕೆಲವರಿಗೆ ನಿದ್ದೆ ಬಂದು ಮಲಗಿ ಬಿಡುತ್ತಾರೆ. ಆದರೆ ಐಟಿ ಬೆಂಚ್ ಹಾಗೆ ಮಲಗುವ ಸ್ಥಳವಲ್ಲ. ಎಚ್ಚರವಾಗಿ ಕಾಯುತ್ತಾ ನಿಂತಿರಬೇಕು. ನಿಂತಲ್ಲೇ ಏನಾದರೂ ವ್ಯಾಯಾಮ ಮಾಡುತ್ತಿದ್ದರೆ ಇನ್ನೂ ಒಳ್ಳೆಯದು.   ...

ರಾಗಿ ನೂಡಲ್ಸ್

ಇಮೇಜ್
 ರಾಗಿ ನೂಡಲ್ - ಒಂದು ಹರಟೆ  ಸಿ. ಪಿ. ರವಿಕುಮಾರ್ ಈಚೆಗಿನ ಅತ್ಯದ್ಭುತ ಇನ್ನೋವೇಶನ್ ಏನೆಂದು ಯಾರಾದರೂ ಕೇಳಿದರೆ ನನ್ನ ಉತ್ತರ ಸಿದ್ಧವಾಗಿದೆ. ರಾಗಿ ಶ್ಯಾವಿಗೆ! ಇದುವರೆಗೂ ನೀವು ಟ್ರೈ ಮಾಡದೇ ಇದ್ದರೆ ಹೊಸವರ್ಷದಲ್ಲಿ ಮಾಡುವವರಾಗಿ ಮತ್ತು ತಿನ್ನುವವರಾಗಿ.  ಎಲ್ಲಾ ಜನಾನೂ ರಾಗಿ ತಿಂದರೆ ರಾಗಿ ಜನಾನುರಾಗಿಯಾಗದೇ ಇರುವುದೇ? ರಾಗ-ದ್ವೇಷ ಬೇಡ ಎಂದು ಮಕ್ಕಳಿಗೆ ಪಾಠ ಹೇಳಿಕೊಡುವರಲ್ಲಾ, ಅವರು ರಾಗಿ-ದ್ವೇಷವನ್ನೇಕೆ ಖಂಡಿಸುವುದಿಲ್ಲ? ರಾಗವೆಂದರೆ ಬಣ್ಣ. ರಾಗಿಗೆ ನಿಜವಾದ ಹೆಸರು ಕರಿ-ರಾಗಿ ಅಥವಾ ಕಪ್ಪು ಬಣ್ಣದ್ದು ಎಂದೇ ಎಂಬುದು ನನ್ನ ಊಹೆ. ಆದರೆ ರಾಗಿಗೆ ಕರಿಯ ಸಂಗಾತಿ ತಪ್ಪಿ ಸಾರಿನ ಸಾಂಗತ್ಯವೇ ಪ್ರಿಯವಾದಾಗ "ಕರಿ" ಬಿಟ್ಟುಹೋಗಿ ಬರೀ ರಾಗಿ ಉಳಿದಿರಬಹುದು. ರಾಗಿಯ ರಾಗವನ್ನು  ನೋಡಿಯೇ ಅದಕ್ಕೆ "ಬೈಬೈ" ರಾಗ ಹಾಡುವ ಬೈರಾಗಿಗಳು ಎಂದಾದರೂ ರಾಗಿ ಶ್ಯಾವಿಗೆಯ ರುಚಿಯನ್ನು ಸವಿದರೆ - ಅದರಲ್ಲೂ ನನ್ನ ಹೆಂಡತಿ ಕೆಂಪು-ಹಳದಿ-ಹಸಿರು ಕ್ಯಾಪ್ಸಿಕಮ್ ಇತ್ಯಾದಿ ಬೆರೆಸಿ ಮಾಡುವ ಶ್ಯಾವಿಗೆಯ ರುಚಿಯನ್ನು ಸವಿದರೆ - ಮ್ಯಾಗಿಯನ್ನು ಮರೆತು ರಾಗಿಯನ್ನೇ ಧ್ಯಾನಿಸಿಯಾರು.  ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಈ ಕೆಂಪು-ಹಸಿರು-ಹಳದಿಗಳ ವೈಭವ ನೋಡಿದವರಿಗೇ  ಗೊತ್ತು. ಮುದ್ದಣನು ಕರಿಮಣಿಯ ಸರದಲ್ಲಿ ಕೆಂಪು ಹವಳವನ್ನು ಕೋದರೆ ಚೆನ್ನವೆಂದು ಮನೋರಮೆಗೆ ತಿಳಿಹೇಳಲಿಲ್ಲವೇ? ಆಗ ಅವನು ತನ್ನ ಹೆಂಡತಿ ಮನೋರಮೆಗೆ ರಾಗಿ-ಶ್ಯಾವಿಗೆಯಲ...