ಎತ್ತರ

 (ಇನಾರಿ ಕ್ರೋಹ್ನ್ ಅವರ ಚಿತ್ರ ನೋಡಿ ಪ್ರೇರಿತನಾಗಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ.)


ಎತ್ತರ


ಎತ್ತರದ ಮರದ ಬುಡದಲ್ಲಿ ನಿಂತು

ಹತ್ತಲು ಉತ್ಸುಕನಾದ ಹುಡುಗ.

ಪಟ್ಟು ಸಾಹಸ ಪ್ರಯತ್ನಿಸಿ ಸೋತು 

ಮತ್ತೊಮ್ಮೆ ಯತ್ನವ ಮಾಡಿ ದಿನವೂ

ಹತ್ತನೇ ದಿವಸ ಏರಿಯೇ ಬಿಟ್ಟ ಮರದ

ತುತ್ತ ತುದಿಗೆ. ಎದೆಯುಬ್ಬಿಸಿ ನೋಡಿದ

ಸುತ್ತಲೂ. ಕಾಣಿಸಿತು ದೂರದಲ್ಲಿ

ಹತ್ತಿರದ ಬೆಟ್ಟ. ಬಾ ಎಂದು ಕೈ ಬೀಸಿತು ಇವ

ನತ್ತ. ಕಟ್ಟಿಕೊಂಡು ಬುತ್ತಿ ಹೊರಟೇ ಬಿಟ್ಟ

ಕಷ್ಟ ಎನ್ನಿಸಿತು, ಆದರೂ ಬಿಡದೆ ಪ್ರಯತ್ನ

ಕೊಟ್ಟಕೊನೆಯನ್ನು ಏರಿಯೇ ಬಿಟ್ಟವನು

ದಿಟ್ಟಿಸಿದ, ಎಷ್ಟು ಪುಟ್ಟದು ನೆನ್ನೆ ಹತ್ತಿದ ಮರ!

ಮತ್ತೊಂದು ದಿಕ್ಕಿಗೆ ತಿರುಗಿದಾಗ ಕಂಡದ್ದೇನು ಅವನು -

ಉತ್ತುಂಗ ಗಿರಿಶಿಖರ, ದೇವದಾರುಗಳ ಕಾನು.


#ಚಿತ್ರಕವಿತೆ ಸಿ. ಪಿ. ರವಿಕುಮಾರ್


(ಕಾನು - ಕಾನನ, ಕಾಡು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)