ಪೋಸ್ಟ್‌ಗಳು

ಮೇ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅರಳಿವೆ ಮಲ್ಲಿಗೆ

ಇಮೇಜ್
ಮೂಲ: ಸಂತ ಧ್ಯಾನೇಶ್ವರ್  (ಈ ಅಭಂಗ್ ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಅತ್ಯಂತ ಸುಂದರವಾಗಿ ಅರಳಿದೆ. ಮೋಗರಾ ಫೂಲಲಾ ಎಂದು ಪ್ರಾರಂಭವಾಗುವ ಈ ಗೀತೆಯನ್ನು ನೀವೂ ಯೂಟ್ಯೂಬ್ ಮುಂತಾದ ಕಡೆ ಕೇಳಬಹುದು. ಒಬ್ಬ ಸಂತನಿಗೆ ಮಲ್ಲಿಗೆಯ ಮೇಲೆ ಏಕೆ ಮೋಹ? ಎಂದೋ ನೆಟ್ಟ ಮಾಯೆಯ ಬಳ್ಳಿ ಇಂದು ಬೆಳೆದು ಹೂ ಬಿಟ್ಟು ಸೆಳೆಯುತ್ತಿದೆ. ಆದರೆ ಈ ಹೂಗಳನ್ನು ತಾನು ಮಾಲೆ ಮಾಡಿ ದೇವರಿಗೆ ಅರ್ಪಿಸುವೆನೆಂದು ಸಂತನು ನಿರ್ಧಾರ ಪ್ರಕಟಿಸುತ್ತಾನೆ.) ಅರಳಿವೆ ಮಲ್ಲಿಗೆ, ಅರಳಿವೆ ಮಲ್ಲಿಗೆ! ಬಿರಿದಿವೆ ಮೊಗ್ಗು ಕಾಯುತ ನಾಳೆಗೆ! ಎಂದು ನಾನು ನೆಟ್ಟೆನೋ, ಬಳ್ಳಿ ಬೆಳೆ ಬೆಳೆದು ಮುಟ್ಟಿದೆ ಇಂದು ಮುಗಿಲಿನವರೆಗೆ! ಮಾನಸ ಸೂತ್ರದೆ ಮಾಲೆಯ ಮಾಡಿ  ಮುಡಿಸುವೆ ವಿಠಲನ ರಾಣಿಯ ಮುಡಿಗೆ!

ಇರುಳಿಗಿವೆ ಕಣ್ಣುಗಳು ಸಹಸ್ರಾರು

ಇಮೇಜ್
ಇರುಳಿಗಿವೆ ಕಣ್ಣುಗಳು ಸಹಸ್ರಾರು ದಿವಸಕ್ಕೆ ಒಂದೇ ಒಂದು, ಆದರೂ ಕೊನೆಗಾಣುವುದು ಜಗತ್ತಿನ ಬೆಳಕು ಅಸ್ತಂಗತನಾದಾಗ ನೇಸರು. ಮನಸ್ಸಿಗೆ ಕಣ್ಣುಗಳು ಸಹಸ್ರಾರು, ಹೃದಯಕ್ಕೆ ಇರುವುದು ಒಂದೇ ಒಂದು. ಆದರೂ ಕಂತುವುದು ಜೀವನದ ಬೆಳಕು ಬತ್ತಿಹೋದಾಗ ಪ್ರೇಮಸಿಂಧು. ಮೂಲ: ಫ್ರಾನ್ಸಿಸ್ ವಿಲಿಯಂ ಬೋರ್ಡಿಯಾನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಹನಿಗವನ!

ಇಮೇಜ್
ಡ್ರೈ ಹೋಳಿ  ಡ್ರೈ ಹೋಳಿ- ಗೆ ಹೋಗುವಾಗ ಮರೆಯದೇ ಜತೆಗಿರಲಪ್ಪ ಹಾಲು ಪ್ಲಸ್ ತುಪ್ಪ ಸಾವಯವ  ಹೈಸ್ಕೂಲಿನಲ್ಲಿ ಆರ್ಗಾನಿಕ್ ಕೆಮಿಸ್ಟ್ರಿ ಈಥೇನು, ಬ್ಯೂಟೇನು, ಹೆಕ್ಸೇನು ಬದಲಾಗಿ ಆರ್ಗಾನಿಕ್ ಫಾರ್ಮಿಂಗ್ ಹೇಳಿಕೊಟ್ಟಿದ್ರೆ ಏನಾದರೂ ಬೆಳಕೊಂಡು ತಿಂದೇನು ಮೀಡಿಯಾ  ಮೀಡಿಯಾ ಈನಡುವೆ ಹಾಗೇ ಎಲ್ಲೆಲ್ಲೂ ಡುಹಿಡಿಯುತ್ತದೆ ಗುಣ ಚಿಕ್ಕ ಕ್ರಿಮಿ-ನಲ್ಲೂ ಕಣ್ ಮುಚ್ಚಿಕೊಳ್ಳುತ್ತದೆ ಕಂಡಾಗ ದೊಡ್ಡ ಕ್ರಿಮಿನಲ್ಲು ಅಚ್ಚಬಿಳಿ  ಅಚ್ಚ ಬಿಳಿ ಬಟ್ಟೆ ಧರಿಸಿ ಬಂದರೇನು ಸಭೆಗೆ! ಸ್ವಚ್ಛವಾಗಿಬಿಡುವುದೇ ನಿಮ್ಮ ಕೊಳಕು ನಡಿಗೆ? ಕೊಚ್ಚೆ ಬಿದ್ದಿದೆ ಮನದ ಮೇಲೆ! ಒರೆಸಿಕೊಳ್ಳಿ ಬೇಗ ತುಚ್ಛ ಯೋಚನೆ ಮನದಿಂದ ಮಾಡಿಬಿಡಿ ತ್ಯಾಗ ಗ್ಯಾರಂಟಿ  ಏನು ಬೇಕಾದರೂ ಬರೆದುಕೊಳ್ಳಿ ಇತಿಹಾಸ ತುಂಬಿ ಬೆಳೆವ ಎಳೆಯ ಬುದ್ಧಿಯೊಳು ಬೂಸಾ ಇಷ್ಟೆಲ್ಲ ಆದರೂ ಉಳಿಸಿಕೊಂಡಿದ್ದರೆ ಸ್ಯಾನಿಟಿ ಮುಂದೆ ಕಳೆದುಕೊಳ್ಳುತ್ತೀಯ ಕೊಡುವೆ ಗ್ಯಾರಂಟಿ ವಿಪರೀತಮತಿ   ಬುದ್ಧಿಜೀವಿ ಎಂಬ ಪದವು ಸರಿಯಿಲ್ಲ, ನಾವೇನು ಪೆದ್ದು ಜೀವಿಗಳೇ ಎಂದು ಮಿತ್ರರೊಬ್ಬರ ವಾದ | ಇದ್ದ ಬುದ್ಧಿಯನೆಲ್ಲ ಡ್ಯಾಮೇಜಿಗೇ ಬಳಸುವನ ವಿಪರೀತ- ಬುದ್ಧಿಜೀವಿ ಎನಬಹುದೇ ಮಂಕುತಮ್ಮ || ಆರಕ್ಷಣೆ  ದಿನದಿನವೂ ತಿರುತಿರುಗಿ ಹಾಡಿ ದೇವರನಾಮ ಅನುದಿನಕ್ಕೆ ಸಂಗ್ರಹಿಸಿ ಒಪ್ಪೊತ್ತಿನ ಭಿಕ್ಷಾನ್ನ | ಹಣವೆಲ್ಲ ದಾನ ಮಾಡಿದ ದಾಸರು ನಂಬಿದ್ದರು...

ಕರೆದೊಯ್ಯಿ ಆ ದೇಶಕ್ಕೆ

ಇಮೇಜ್
(ಮೂಲ: ಮೀರಾ ಬಾಯಿ) ನಡೆ ಹೋಗುವ ಆ ದೇಶಕ್ಕೆ ನಡೆ ಹೋಗುವ ಆ ದೇಶಕ್ಕೆ! ಎಲ್ಲಿ ತೊಡಬಹುದೋ ಸಪ್ತ ವರ್ಣಗಳ ಸೀರೆ ಅಷ್ಟೇ ಮೌಲ್ಯ ವಿಧವೆಯ ವೇಷಕ್ಕೆ ಬೇಕೆಂದರೆ ಜಡೆಯಲ್ಲಿ ತೊಡಬಹುದೋ ಮುತ್ತುಗಳ ಮಾಲೆ ಬೇಕೆಂದರೆ ಕತ್ತರಿ ಬಿತ್ತು  ನೀಳಕೇಶಕ್ಕೆ ಮೀರಾಳ ಪ್ರಭು ಗಿರಿಧರನಾಗರ ಕಿವಿಗೊಟ್ಟು ಪೀಡೆಗೆ ಕರೆದೊಯ್ಯು ಆ ದೇಶಕ್ಕೆ

ಪೇಪರ್ ಗೊಂಬೆ

ಇಮೇಜ್
ಬೊಂಬೆ ಮಾಡಿ ತೋರಿಸೇ ಅಕ್ಕಾ ಇಗೋ ಕತ್ತರಿ, ಕಾಗದ! ಬೇರೆ ಕೆಲಸ ಇಲ್ಲವೇ ನನಗೆ  ನಿನಗೆ ಸುಮ್ಮನೆ ಕೂಡಲು ಆಗದಾ! ಬೇಸಗೆ ರಜೆ ಅಲ್ಲವೇನಕ್ಕಾ ಶಾಲೆಗೆ ಬಿಡುವಿದೆಯಲ್ಲ! ರಜೆಯಲ್ಲೂ ಹೋಮ್  ವರ್ಕ್ ಕೊಟ್ಟಿದ್ದಾರೆ ಮಿಸ್ ಸರಳಾ ನಮಗೆಲ್ಲ! ಹೋಮ್ ವರ್ಕ್ ಅಂದರೆ ಏನೇ ಅಕ್ಕಾ ನನಗಂತೂ ಗೊತ್ತಿಲ್ಲ! ಏನು ಮಾಡಿದಿರಿ ರಜೆಯಲ್ಲೆಂದು ಬರೆಯಬೇಕು ನಾವೆಲ್ಲ! ತಂಗಿಗೆ ಗೊಂಬೆ ಮಾಡಿದ್ದನ್ನೇ  ಬರೆಯಬಹುದಲ್ಲ ನೀನು! ಒಳ್ಳೆಯ ಐಡಿಯಾ ಕಣೇ ಜಾಣಮರಿ! ಬಾ, ಮಾಡಿಕೊಡುವೆ ಪೇಪರ್  ಮೀನು!

ಬೊಂಬೆಯ ಸ್ನಾನ

ಇಮೇಜ್
ತಮ್ಮಾ ತಾರೋ ನೀರು, ಒಂದು ಕೊಡಪಾನ, ಸುಮ್ಮನೆ ನಿಲ್ಲಬೇಡ ನೋಡುತ್ತಾ! ಈವತ್ತು ವಿಶೇಷ ಏನೆಂದು ಗೊತ್ತಾ? ನನ್ನ ಗೊಂಬೆಗೆ ನಾನು ಮಾಡಿಸುವೆ ಸ್ನಾನ! ತೊಗೊಂಡು ಬಾ ಹಾಗೇ ಸ್ಯಾಂಡಲ್ ಸೋಪು, ಹಾಗೂ ಬಿಳಿಯ ಟರ್ಕಿ ಟವಲ್ಲು! ಓಡಿಬಿಡವೋ, ಕೇಳಿಸಿಕೋ, ನಿಲ್ಲು! ಹಾಗೇ ತೊಗೊಂಡು ಬಾ ಕೂದಲಿಗೆ ಶಾಂಪೂ! ಹಾಗೆಲ್ಲ ಸ್ನಾನಕ್ಕೆ ಅಳಬಾರದು ಕಣೇ  ಕಣ್ಣಲ್ಲಿ ಹೋಗಿಬಿಡುತ್ತೆ ಸೋಪು  ನೀನಲ್ಲವೇ ನನ್ನ ಮುದ್ದು ಪಾಪು ಅಳುವುದೇ ಇಲ್ಲ, ತುಂಬಾ ಜಾಣೆ  ತಲೆ ಒರೆಸುತ್ತೇನೆ ತಾಳು  ಶೀತಗೀತ ಆದೀತು ಎಲ್ಲಾದರೂ ಹಾಕುತ್ತೇನೆ ಹಿಡಿ ಘಮಘಮ ಪೌಡರು ಬಾಚುವುದೇ ಕಷ್ಟ, ಗುಂಗುರು ಕೂದಲು! ತಮ್ಮಾ ನೋಡೋ ಹೇಗೆ ಕಾಣುತ್ತಿದೆ ಮಗು! ಇಡುತ್ತೇನೆ ಗಲ್ಲಕ್ಕೆ ದೃಷ್ಟಿ ಬೊಟ್ಟು, ತಾಳು! ಓಡಿ ಹೋಗಬೇಡವೋ, ನಿಲ್ಲು ನಿಲ್ಲು! ಸ್ನಾನ ಮಾಡಿಸುತ್ತೇನೆ ಬಾ ಇಲ್ಲಿ ನಿನಗೂ!

ಒಂದು ಬಿನ್ ಅಹ! ಹುಲಿಯೇ ಕೇಳು

ಇಮೇಜ್
  "ನನ್ನ ಫ್ರೆಂಡ್ ಒಬ್ಬರು ಯೂರೋಪಿಗೆ ಹೋಗಿ ಅಲ್ಲಿರೋ ಡಸ್ಟ್  ಬಿನ್ ಪಿಕ್ಚರ್ ಕಳಿಸಿದ್ದಾರೆ. ಅಬ್ಬಬ್ಬ ಏನ್ರೀ ಅವರು ಬಹಳ ನೋವೇಶನ್ ಕಣ್ರೀ" ಎಂದು ಮರಿಗೌಡ ತಮ್ಮ ಸ್ಟ್ರಾಂಗ್ ಕಾಫಿ ಹೀರಿ ಆನಂದದಿಂದ ಕಣ್ಣು ಮುಚ್ಚಿದರು. "ನೋವೇ ಅಲ್ರೀ. ಇನ್ನೋವೇಶನ್!" ಎಂದು ರಾಜಾರಾಂ ಗ್ರೀನ್ ಟೀ ಕುಡಿಯುವುದನ್ನು ನಿಲ್ಲಿಸಿ ಹೇಳಿದಾಗ 859838 ಧ್ವನಿಯಲ್ಲಿ ನೋವೇ ಹೆಚ್ಚು ಕೇಳಿಸಿತು. "ಓಹೋ ಹೌದಾ! ನಮ್ಮ ಪಕ್ಕದ ಮನೆಯಲ್ಲಿ ಒಬ್ಬ ನಾರ್ತ್ ಇಂಡಿಯನ್ ಇದಾನೆ. ರಜತ್ ಕುಮಾರ್ ಅಗ್ಗರ್ವಾಲ್. ಅವನು ಇಸ್ಕೂಲ್, ಇಸ್ತ್ರೀ, ಇಸ್ಟ್ರೀಟ್ ಅಂತ ಎಲ್ಲಾದಕ್ಕೂ ಈ ಹಾಕೋದು ಜಾಸ್ತಿ. ಅವನು ಮೊನ್ನೆ  ಇನ್ನೋವೇಶನ್ ಅಂತ ಏನೋ ಹೇಳಿದಾಗ ಅದು ನೋವೇಶನ್ ಇರಬಹುದು ಅಂತ ಡಿಸೈಡ್ ಮಾಡಿದೆ." "ನೋ ವೇ!" ಎಂದು ರಾಜಾರಾಂ ಇಂಗ್ಲೀಷಿನಲ್ಲಿ ಹೇಳಿದರು.  “ಏನ್ರೀ ಈಗ ತಾನೇ ನೀವು ಇನ್ನೋವೇಶನ್ ಅಂತ ಹೇಳಿದಿರಿ?” ಎಂದು ಮರಿಗೌಡ  ಗೊಂದಲಕ್ಕೆ ಒಳಗಾದರು. “ನೀವು ಅವರನ್ನು ಬಿಡಿ. ಏನೋ ಡಸ್ಟ್ ಬಿನ್ ಅಂದಿರಿ? ಏನದು ವಿಶೇಷ?” ಎಂದು ನಾನು ಮಧ್ಯೆ ಪ್ರವೇಶಿಸಿದೆ. “ಓಹ್, ಏನು ಅದ್ಭುತ ಕಣ್ರೀ! ಡಸ್ಟ್ ಬಿನ್ನಲ್ಲಿ ಏಐ ಹಾಕಿದ್ದಾರೆ!” “ಅಯ್ಯೋ, ಏಐನ ಯಾಕ್ರೀ ಡಸ್ಟ್ ಬಿನ್ನಿಗೆ ಹಾಕಿದರು? ಎಲ್ಲರೂ ಏಐ ಹಾಗೆ ಏಐ ಹೀಗೆ ಅಂತ ತುಂಬಾ ಅಟ್ಟಕ್ಕೆ ಏರಿಸಿದರೆ ಇವರು ಅದನ್ನು ಡಸ್ಟ್ ಬಿನ್ನಿಗೆ ಹಾಕೋದೇ!” ಎಂದು ನಾನು ಪೇಚಾಡಿದೆ. “ಅಯ್ಯೋ ನೀವೊಬ್ಬರು! ಏ...

ಹಕ್ಕಿಗೆ ಕಳ್ಳೆಪುರಿ ಹಾಕುವೆನು!

ಇಮೇಜ್
  ಅಕ್ಕಾ ನನಗೂ ಕೊಡೆ, ಕಳ್ಳೆಪುರಿ, ನಾನೂ ಹಕ್ಕಿಗೆ ಹಾಕುವೆನು! ಕೊಡಲಿಲ್ಲವೆ ಅಮ್ಮನು ಕಳ್ಳಮರಿ, ನನ್ನಷ್ಟೇ ನಿನಗೂನೂ? ಕೊಟ್ಟಳು ಅಕ್ಕಾ! ಎಲ್ಲಿ ಹೋಯಿತೋ, ಅಲ್ಲಿ, ಇಲ್ಲಿ, ಚೆಲ್ಲಿ! ನನಗೆ ಗೊತ್ತು ಪುರಿ ಎಲ್ಲಿ ಚೆಲ್ಲಿತು, ನಿನ್ನ ಹೊಟ್ಟೆಯಲ್ಲಿ! ಬಾತುಕೋಳಿ ಮರಿ ನೋಡೇ ಅಕ್ಕಾ, ಹಸಿದು ಕರೆಯುತಿದೆ, ಪಾಪ! ಇಗೋ ಹಾಕು ನೀನೂ ಕಳ್ಳೆಪುರಿ, ತಿಂದರೆ ಮಾಡುವೆ ಕೋಪ!

ಟವರ್ ಆಫ್ ಪೀಟ್ಜಾ

ಇಮೇಜ್
"ಪೀಜಾ ಅಲ್ಲ ಕಣ್ರೀ ಪೀಟ್ಜಾ ಅನ್ನಬೇಕು" ಎಂದು ರಾಜಾರಾಂ ತಿದ್ದಿದರು. ಮರಿಗೌಡ ಅಂದು ಪೀಜಾ ತಿನ್ನಲು ಉತ್ಸುಕರಾಗಿದ್ದರು.  "ಕೆಲವರು ಪಿಜ್ಜಾ ಅಂತಾರೆ. ಕೆಲವರು ಪೀಜಾ ಅಂತಾರೆ. ಅಲ್ಲಿ ಟೀ ಇಲ್ಲವೇ ಇಲ್ಲ. ಪೀಟ್ಜಾ ಹೇಗ್ರೀ ಆಗತ್ತೆ?" ಎಂದು ಮರಿಗೌಡ ವಾದಿಸಿದರು. "ನೋಡಿ, ಪದದಲ್ಲಿ ಎರಡು ಜೆಡ್ ಪಕ್ಕಪಕ್ಕದಲ್ಲಿದ್ದಾಗ ಇಟಾಲಿಯನ್ ಜನ ಮೊದಲನೇ ಜೆಡ್ ಇದೆಯಲ್ಲ ಅದನ್ನ ಸ್ವಲ್ಪ ಟೀ ಥರಾ ಉಚ್ಚಾರಣೆ ಮಾಡ್ತಾರೆ. ಲವಾಟ್ಜಾ, ಪೀಟ್ಜಾ, ಮೋಟ್ಜರೆಲ್ಲಾ, ... ಗೊತ್ತಾಯ್ತಾ?" "ಹೀಗೆ ಎರಡು ಜೆಡ್ ಇಡೋದು ಯಾಕೆ ... ಅದರಲ್ಲಿ ಒಂದನ್ನು ಟೀ ಥರಾ ಉಚ್ಚಾರಣೆ ಮಾಡೋದು ಯಾಕೆ ... ಮೂರು ಜೆಡ್ ಇದ್ದರೆ ಏನು ಮಾಡ್ತಿದ್ರು?" *ಮೂರು ಜೆಡ್ ಇರೋ ಯಾವ ಪದವೂ ಇಲ್ಲ." "ಇದೆ ಕಣ್ರೀ. ಜೆಡ್ ಜೆಡ್ ಜೆಡ್ ಅಂತ ಹಾಕಿರ್ತಾರೆ ಕೆಲವು ಕಡೆ. ಅದನ್ನು ಹೇಗೆ ಉಚ್ಚಾರಣೆ ಮಾಡ್ತಾರೋ ಪುಣ್ಯಾತ್ಮರು!" "ರೀ! ಅದು ನಿದ್ದೆ ಹೋಗಿ ಗೊರಕೆ ಹೊಡೆಯೋ ಸದ್ದು ಕಣ್ರೀ. ಕಾಮಿಕ್ ಓದೋವಾಗ ಈ ಜೆಡ್ ಜೆಡ್ ಜೆಡ್ ಎಲ್ಲಾ ಓದಿರುತ್ತೀರಿ." "ಹೂಂ. ನನಗೆ ಅದು ಗೊರಕೆ ಸದ್ದು ಅಂತ ಗೊತ್ತಾಗಲಿಲ್ಲ ನೋಡಿ. ನಾನು ಗೊರಕೆ ಹಾಕುವಾಗ ಗೊರ್ ಗೊರ್ ಅಂತ ಹಾಕ್ತೀನಿ ಅಂತ ನಮ್ಮ ಮಿಸೆಸ್ ಹೇಳ್ತಾರೆ." "ಗೊರ್ ಇಂದಲೇ ಗೊರಕೆ ಬಂದಿರೋದು!" ಎಂದು ನಾನು ಮಧ್ಯ ಸೇರಿಸಿದೆ. "ಕನ್ನಡದ ಜನ ಗೊರ್ ಅಂತಲೇ ಗೊ...

ರೆಸಿಪಿ ರಮಣಿ

ಇಮೇಜ್
"ಇವತ್ತು ಬರೀ ಒಂದು ಸಿಂಗಲ್ ಪ್ಲೈನ್ ಇಡ್ಲಿ ಕಣಪ್ಪ" ಎಂದು ಮರಿಗೌಡ ಉಪ್ಪಿಲ್ಲದ ಸಪ್ಪೆ ಇಡ್ಲಿಯ ಮಾದರಿಯಲ್ಲಿ ಹೇಳಿದಾಗ ನಾವು ಇದೇನು ಹಾರರ್  ಎಂದು ಹೆದರಿ "ಹೌ ಕಮ್ ?" ಎಂದು ಹೌಹಾರಿದೆವು. ನಾನು ವಡಾ ಸೂಪ್ ಆರ್ಡರ್ ಮಾಡೋಣ ಎಂದುಕೊಂಡಿದ್ದೆ. ರಾಜಾರಾಂ ಮೆನುವಿನಲ್ಲಿ ದೋಸೆಗಳ ಲಿಸ್ಟ್ ಕಡೆಗೆ ನೋಡುತ್ತಿದ್ದರು. ಒಮ್ಮೆಲೇ ಸಿಂಗಲ್ ಇಡ್ಲಿಗೆ ಇಳಿದ ಮರಿಗೌಡರ ಉತ್ಸಾಹದ ಅಧಃಪತನವನ್ನು ಕಂಡು ನಮಗೆ ದಿಗಿಲಾಯಿತು. "ಗೌಡರೆ ಎಲ್ಲಾ ಆರೋಗ್ಯ ತಾನೇ?" ಎಂದು ನಾನು ಅವರ ಕಡೆಗೆ ನೋಡಿದೆ.  "ನೀವು ದೊಡ್ಡ ಗೌಡರ ಕುಟುಂಬದ ಅಭಿಮಾನಿ ಅಂತ ಗೊತ್ತು. ಅವರಿಗೆ ಬಂದಿರುವ ಕಷ್ಟ ನೋಡಿ ನಿಮಗೆ ತುಂಬಾ ಶಾಕ್ ಆದಹಾಗಿದೆ" ಎಂದು ರಾಜಾರಾಂ ಒಂದು ಗ್ಲಾಸ್ ನೀರನ್ನು ಮರಿಗೌಡರಿಗೆ ಕೊಟ್ಟು *ಕುಡಿದು ಸುಧಾರಿಸಿಕೊಳ್ಳಿ* ಎಂದರು. "ನ್ಯಾಯವಾಗಿ ನೋಡಿದರೆ ನಾನು ಇಡ್ಲಿ ಕೂಡಾ ತಿನ್ನಬಾರದು" ಎಂದು ಮರಿಗೌಡರು ನಮ್ಮನ್ನು ಇನ್ನಷ್ಟು ಸಸ್ಪೆನ್ಸಿಗೆ ನೂಕಿದರು. *ಅಯ್ಯೋ, ಈ ಬಿಸಿಲಿಗೆ ಒಂದೊಂದು ಸಲ ಹೊಟ್ಟೆ ಅಪ್ಸೆಟ್ ಆಗಬಹುದು. ಅದಕ್ಕೆ ಯಾಕೆ ಯೋಚನೆ ಮಾಡ್ತೀರಿ?" "ಅಯ್ಯೋ ನನಗೆ ಏನೂ ಆಗಿಲ್ಲ ಕಣ್ರೀ. ನಮ್ಮ ಮನೆಯವರು ಇವತ್ತು  ಅದೇನೋ ಹೊಸಾ ರೆಸಿಪಿ ಅಂತೆ ಅದನ್ನು ನನ್ನ ಮೇಲೆ ಪ್ರಯೋಗ ಮಾಡಿದರು." "ಯಾವುದು? ರೆಸಿಪಿ ರಮಣಿ ಅವರ ರವಾ ದೋಸಾ ತಾನೇ? ನಮ್ಮ ಮಿಸೆಸ್ ಕೂಡಾ ನೆನ್ನೆ ಮಾಡಿದ್ದರು....

ಮೃತ್ಯುಶಯ್ಯೆಯಲ್ಲಿ

ಇಮೇಜ್
ಇದನ್ನು ಕ್ಸು ಲಿಷೀ ಬರೆದದ್ದು ಸೆಪ್ಟೆಂಬರ್ ೩೦, ೨೦೧೪.  ಅದೇ ಅವನ ಕೊನೆಯ ಕವಿತೆ. ಅದೇ ದಿವಸ ಅವನು ಫ್ಯಾಕ್ಟರಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ.  ಮೃತ್ಯುಶಯ್ಯೆಯಲ್ಲಿ  ಮತ್ತೊಮ್ಮೆ  ಕಡಲನ್ನು   ನೋಡಬೇಕೆನ್ನಿಸುತ್ತಿದೆ.   ಅರ್ಧ ಜೀವಮಾನದ ಕಂಬನಿ ತುಂಬಿದ ಅಗಾಧತೆಯನ್ನು  ತುಂಬಿಕೊಳ್ಳಲು ಕಣ್ಣೊಳಗೆ. ಹತ್ತಬೇಕೆನ್ನಿಸುತ್ತಿದೆ ಬೇರಾವುದಾದರೂ  ಬೆಟ್ಟ,  ಕೂಗಿ ಕರೆಯಬೇಕೆನ್ನಿಸುತ್ತಿದೆ ನಾನು ಕಳೆದುಕೊಂಡ ಆತ್ಮ.  ಆಗಸವನ್ನು ಮುಟ್ಟಿ  ಅನುಭವಿಸಬೇಕೆನ್ನಿಸುತ್ತಿದೆ   ಅದರ ಹಗುರ ನೀಲಿಯನ್ನು.  ಮಾಡಲಾರೆ ಇದಾವುದನ್ನೂ  ಎಂಬ ಕಾರಣಕ್ಕೇ ಜಗತ್ತನ್ನು ಬಿಟ್ಟು ಹೊರಟಿರುವೆ.  ನನ್ನನ್ನು ಬಲ್ಲವರಿಗೆ ನನ್ನ ನಿರ್ಗಮನ  ಆಶ್ಚರ್ಯ ತರಕೂಡದು.  ಯಾರ ಎದೆಗೂ ತರಕೂಡದು ದುಃಖ, ಕಣ್ಣಿನಲ್ಲಿ ತರಬಾರದು ನೀರು. ಬರುವಾಗ   ನಾನು  ಭೇಷಾಗಿದ್ದೆ, ಹೋಗುವಾಗಲೂ ಚೆನ್ನಾಗೇ ಹೋಗುತ್ತಿರುವೆ.  ಸಂಘರ್ಷ   ಇವನು ಹೆಚ್ಚು ಮಾತಾಡುವುದಿಲ್ಲ ಎನ್ನುತ್ತಾರೆ ಎಲ್ಲರೂ ನನ್ನನ್ನು ಕುರಿತು. ನಾನು ಅಲ್ಲಗಳೆಯುವುದಿಲ್ಲ. ಮಾತನಾಡುವೆನೋ ಇಲ್ಲವೋ ಸಮಾಜದೊಂದಿಗೆ ಖಂಡಿತಾ ಹೂಡುತ್ತೇನೆ ಸಂಘರ್ಷ  ಅದರೊಂದಿಗೆ. ಇನ್ನೂ ಮುಗಿದಿಲ್ಲ ನನ್ನ ಬಾಳ ಪಯಣ  ...