ಇರುಳಿಗಿವೆ ಕಣ್ಣುಗಳು ಸಹಸ್ರಾರು




ಇರುಳಿಗಿವೆ ಕಣ್ಣುಗಳು ಸಹಸ್ರಾರು

ದಿವಸಕ್ಕೆ ಒಂದೇ ಒಂದು, ಆದರೂ

ಕೊನೆಗಾಣುವುದು ಜಗತ್ತಿನ ಬೆಳಕು

ಅಸ್ತಂಗತನಾದಾಗ ನೇಸರು.


ಮನಸ್ಸಿಗೆ ಕಣ್ಣುಗಳು ಸಹಸ್ರಾರು,

ಹೃದಯಕ್ಕೆ ಇರುವುದು ಒಂದೇ ಒಂದು.

ಆದರೂ ಕಂತುವುದು ಜೀವನದ ಬೆಳಕು

ಬತ್ತಿಹೋದಾಗ ಪ್ರೇಮಸಿಂಧು.


ಮೂಲ: ಫ್ರಾನ್ಸಿಸ್ ವಿಲಿಯಂ ಬೋರ್ಡಿಯಾನ್

ಕನ್ನಡಕ್ಕೆ: ಸಿ. ಪಿ. ರವಿಕುಮಾರ್



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)