ಹಕ್ಕಿಗೆ ಕಳ್ಳೆಪುರಿ ಹಾಕುವೆನು!

 


ಅಕ್ಕಾ ನನಗೂ ಕೊಡೆ, ಕಳ್ಳೆಪುರಿ,

ನಾನೂ ಹಕ್ಕಿಗೆ ಹಾಕುವೆನು!

ಕೊಡಲಿಲ್ಲವೆ ಅಮ್ಮನು ಕಳ್ಳಮರಿ,

ನನ್ನಷ್ಟೇ ನಿನಗೂನೂ?


ಕೊಟ್ಟಳು ಅಕ್ಕಾ! ಎಲ್ಲಿ ಹೋಯಿತೋ,

ಅಲ್ಲಿ, ಇಲ್ಲಿ, ಚೆಲ್ಲಿ!

ನನಗೆ ಗೊತ್ತು ಪುರಿ ಎಲ್ಲಿ ಚೆಲ್ಲಿತು,

ನಿನ್ನ ಹೊಟ್ಟೆಯಲ್ಲಿ!


ಬಾತುಕೋಳಿ ಮರಿ ನೋಡೇ ಅಕ್ಕಾ,

ಹಸಿದು ಕರೆಯುತಿದೆ, ಪಾಪ!

ಇಗೋ ಹಾಕು ನೀನೂ ಕಳ್ಳೆಪುರಿ,

ತಿಂದರೆ ಮಾಡುವೆ ಕೋಪ!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)