ಪೇಪರ್ ಗೊಂಬೆ




ಬೊಂಬೆ ಮಾಡಿ ತೋರಿಸೇ ಅಕ್ಕಾ
ಇಗೋ ಕತ್ತರಿ, ಕಾಗದ!
ಬೇರೆ ಕೆಲಸ ಇಲ್ಲವೇ ನನಗೆ 
ನಿನಗೆ ಸುಮ್ಮನೆ ಕೂಡಲು ಆಗದಾ!

ಬೇಸಗೆ ರಜೆ ಅಲ್ಲವೇನಕ್ಕಾ
ಶಾಲೆಗೆ ಬಿಡುವಿದೆಯಲ್ಲ!
ರಜೆಯಲ್ಲೂ ಹೋಮ್  ವರ್ಕ್ ಕೊಟ್ಟಿದ್ದಾರೆ
ಮಿಸ್ ಸರಳಾ ನಮಗೆಲ್ಲ!

ಹೋಮ್ ವರ್ಕ್ ಅಂದರೆ ಏನೇ ಅಕ್ಕಾ
ನನಗಂತೂ ಗೊತ್ತಿಲ್ಲ!
ಏನು ಮಾಡಿದಿರಿ ರಜೆಯಲ್ಲೆಂದು
ಬರೆಯಬೇಕು ನಾವೆಲ್ಲ!

ತಂಗಿಗೆ ಗೊಂಬೆ ಮಾಡಿದ್ದನ್ನೇ
 ಬರೆಯಬಹುದಲ್ಲ ನೀನು!
ಒಳ್ಳೆಯ ಐಡಿಯಾ ಕಣೇ ಜಾಣಮರಿ!
ಬಾ, ಮಾಡಿಕೊಡುವೆ ಪೇಪರ್  ಮೀನು!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)