ಅರಳಿವೆ ಮಲ್ಲಿಗೆ

ಮೂಲ: ಸಂತ ಧ್ಯಾನೇಶ್ವರ್ 




(ಈ ಅಭಂಗ್ ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಅತ್ಯಂತ ಸುಂದರವಾಗಿ ಅರಳಿದೆ. ಮೋಗರಾ ಫೂಲಲಾ ಎಂದು ಪ್ರಾರಂಭವಾಗುವ ಈ ಗೀತೆಯನ್ನು ನೀವೂ ಯೂಟ್ಯೂಬ್ ಮುಂತಾದ ಕಡೆ ಕೇಳಬಹುದು. ಒಬ್ಬ ಸಂತನಿಗೆ ಮಲ್ಲಿಗೆಯ ಮೇಲೆ ಏಕೆ ಮೋಹ? ಎಂದೋ ನೆಟ್ಟ ಮಾಯೆಯ ಬಳ್ಳಿ ಇಂದು ಬೆಳೆದು ಹೂ ಬಿಟ್ಟು ಸೆಳೆಯುತ್ತಿದೆ. ಆದರೆ ಈ ಹೂಗಳನ್ನು ತಾನು ಮಾಲೆ ಮಾಡಿ ದೇವರಿಗೆ ಅರ್ಪಿಸುವೆನೆಂದು ಸಂತನು ನಿರ್ಧಾರ ಪ್ರಕಟಿಸುತ್ತಾನೆ.)



ಅರಳಿವೆ ಮಲ್ಲಿಗೆ, ಅರಳಿವೆ ಮಲ್ಲಿಗೆ!
ಬಿರಿದಿವೆ ಮೊಗ್ಗು ಕಾಯುತ ನಾಳೆಗೆ!

ಎಂದು ನಾನು ನೆಟ್ಟೆನೋ, ಬಳ್ಳಿ ಬೆಳೆ ಬೆಳೆದು
ಮುಟ್ಟಿದೆ ಇಂದು ಮುಗಿಲಿನವರೆಗೆ!

ಮಾನಸ ಸೂತ್ರದೆ ಮಾಲೆಯ ಮಾಡಿ 
ಮುಡಿಸುವೆ ವಿಠಲನ ರಾಣಿಯ ಮುಡಿಗೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)