ಶತಪದಿ
ಮೂಲ: ಜೂಲಿ ಹೋಲ್ಡರ್
ಕನ್ನಡಕ್ಕೆ: ಸಿ ಪಿ ರವಿಕುಮಾರ್
ಬಹಳ ಜೋರಾಗಿ ಓಡಬಲ್ಲದು ಜರಿಹುಳು
ಏಕೆಂದರೆ ಅದಕ್ಕಿವೆ ಇನ್ನೂರು ಕಾಲು
ಆದರೂ, ಇನ್ನೂರು ಕ್ಲಿಪ್ ಹೊಂದಿಸಿಕೊಂಡು
ಸಾಕ್ಸ್ ಒಣಗಿ ಹಾಕುವುದು ದೊಡ್ದ ಸವಾಲು
ಉಡುಗೊರೆ ಕೊಟ್ಟರು ಯಾರೋ ಅದಕ್ಕೆ
ವೆಲ್ಲಿಂಗ್ ಟನ್ ಬೂಟು ಐವತ್ತು ಜೊತೆ
ಎಡಬಲ ಸಮ ಮಾಡುವ ತನಕ ಪುಟ್ಟ ಮಿದುಳು
ಪಾಪ ಮಳೆಗಾಲ ಮುಗಿದೇ ಹೋಗಿರುತ್ತೆ
ನೂರು ಕಾಲಿದೆ ಜರಿಗೆ, ನನಗೆ ಎರಡೇ ಎರಡು
ಹಾಗಂತ ನನಗೇನೂ ಹೊಟ್ಟೆಕಿಚ್ಚಿಲ್ಲಪ್ಪ, ಸದ್ಯಕ್ಕೆ.
ಎಲ್ಲಿಗೆ ಹೋಗುತ್ತಿದ್ದೇನೆಂದು ಗೊತ್ತಾದಾಗ ಮುಂದಿನ ಕಾಲಿಗೆ
ಹಿಂದಿನ ಕಾಲು ಇನ್ನೂ ಅದೇ ಸ್ಥಳದಲ್ಲಿರುತ್ತೆ.

सर, आप अच्छा लिखते हैं. क्या आप मेरे छात्रों को कन्नड कविता के बारे मे बतायेंगे. मुझसे 99352 88271 पर संपर्क करें.
ಪ್ರತ್ಯುತ್ತರಅಳಿಸಿ