ತೆಗೆದೆಸೆಯಿರಿ ಅಲಾರಂ ಗಡಿಯಾರ
ತೆಗೆದೆಸೆಯಿರಿ ಅಲಾರಂ ಗಡಿಯಾರ
ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ
ಅನುವಾದ: ಸಿ ಪಿ ರವಿಕುಮಾರ್
ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ
ಅನುವಾದ: ಸಿ ಪಿ ರವಿಕುಮಾರ್
ನನ್ನ ಅಪ್ಪನದು ಯಾವಾಗಲೂ ಒಂದೇ ಹಾಡು
"ಯಾರು ಬೇಗ ಮಲಗಿ ಬೇಗ ಏಳುವರೋ ಅವರು
ಆರೋಗ್ಯ ಹೊಂದುವರು, ಸಂಪತ್ತು ಗಳಿಸುವರು, ಜಾಣರಾಗುವರು."
ರಾತ್ರಿ ಎಂಟಕ್ಕೆಲ್ಲ ದೀಪ ನಂದಿಸಿಬಿಡುತ್ತಿದ್ದರು
ನಮ್ಮ ಮನೆಯಲ್ಲಿ ಯಾವತ್ತೂ
ಬೆಳಗ್ಗೆ ಎದ್ದಾಗ ಕಾಫಿ-ಉಪಾಹಾರದ
ಘಮಘಮ ಹರಡಿರುತ್ತಿತ್ತು.
ಈ ನಿಯಮವನ್ನು ಉದ್ದಕ್ಕೂ ಪಾಲಿಸುತ್ತಿದ್ದ ಅಪ್ಪ ಸತ್ತಾಗ
ಅವನಿಗಿನ್ನೂ ಚಿಕ್ಕ ವಯಸ್ಸು, ಹಣ ಆಸ್ತಿ ಏನಿಲ್ಲ,ತುಸ್ಸು,
ಮತ್ತು ಜಾಣ್ಮೆಯ ಲೆಕ್ಕಾಚಾರದಲ್ಲೂ ಕಮ್ಮಿ ಮಾರ್ಕ್ಸು.
ಹೀಗಾಗಿ
ನಾನು ಅವನ ಸಲಹೆಯನ್ನು ನಿರ್ಲಕ್ಷಿಸಿದ್ದೇನೆ.
ತಡವಾಗಿ ಮಲಗಿ ತಡವಾಗಿ ಏಳುತ್ತೇನೆ.
ಹಾಗೆಂದು
ನಾನೇನೂ ಜಗತ್ತನ್ನೇ ಗೆದ್ದುಬಿಟ್ಟಿಲ್ಲ, ಆದರೆ ಪಾರಾಗಿರುವೆ
ಅದೆಷ್ಟೋ ಟ್ರಾಫಿಕ್ ದಟ್ಟಣೆಗಳಿಂದ
ಮತ್ತು ಸಾಧಾರಣವಾಗಿ ಜನರು ಜಾರಿ ಬೀಳುವ ಸಂದರ್ಭಗಳಿಂದ.
ಹಾಗೂ ಪರಿಚಯ ಮಾಡಿಕೊಂಡಿದ್ದೇನೆ ಎಷ್ಟೋ ಜನ
ವಿಚಿತ್ರ ಮತ್ತು ವಿಸ್ಮಯಕಾರಿ ವ್ಯಕ್ತಿಗಳನ್ನು.
ಅವರಲ್ಲಿ ಒಬ್ಬ
ನಾನು.
ನನ್ನ ಅಪ್ಪ ಎಂದೂ ಭೇಟಿಯಾಗದವನು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ