ಹೆಣ್ಣು ಜಾತಿ (ಅನುವಾದಿತ ಕವಿತೆ)
ಕೆಲವೊಮ್ಮೆ ನಿನಗೆ ಮಾತಾಡಬೇಕು ಎನ್ನಿಸುವುದು
ಪ್ರೀತಿಯ ಕುರಿತು ಮತ್ತು ಹತಾಶೆಯ ಬಗ್ಗೆ
ಹಾಗೂ ಮಕ್ಕಳ ಕೃತಘ್ನತೆಯ ವಿಷಯ.
ಆಗ ಗಂಡಸರು ಏನೂ ಪ್ರಯೋಜನವಿಲ್ಲ.
ನಿಮಗೆ ಬೇಕಾದದ್ದು ನಿಮ್ಮ ತಾಯಿ
ಅಥವಾ ಸೋದರಿ
ಅಥವಾ ಸ್ಕೂಲಿನಲ್ಲಿ ನಿಮ್ಮೊಂದಿಗೆ ಓದಿದ ಹುಡುಗಿ
ನೀವು ಮೊದಲಸಲ ನಿಮ್ಮ ಹೃದಯವನ್ನು ಕೊಟ್ಟವಳು
ಮತ್ತು ಅವಳ ಮೊದಲ ಮಗು - ಹೆಣ್ಣು -
ಹಾಗೂ ನಿಮ್ಮ ಎರಡನೆಯದು.
ಅವರೊಂದಿಗೆ ಕುಳಿತು ಮಾತಾಡುವಾಗ
ಅವಳು ಹೊಲಿಗೆ ಹಾಕುವಾಗ ನೀವು ಕುಳಿತು ಗುಟುಕರಿಸುತ್ತಾ
ಕೆದಕುವಿರಿ ಅಕ್ಕಿಯ ಧಾರಣೆ ಬಗ್ಗೆ
ಚಹಾ ಬೆಲೆ ಕುರಿತು
ಮತ್ತು ಗಿಣ್ಣು ಎಷ್ಟು ದುರ್ಲಭವೆಂಬ ವಿಷಯ.
ನಿಮ್ಮಿಬ್ಬರಿಗೂ ಗೊತ್ತು ನಿಮ್ಮಿಬ್ಬರ ಈ ಮಾತುಕತೆ
ಪ್ರೇಮ ಮತ್ತು ಹತಾಶೆ ಕುರಿತು ಹಾಗೂ ಮಕ್ಕಳ ಕೃತಘ್ನತೆ.
ಪ್ರೀತಿಯ ಕುರಿತು ಮತ್ತು ಹತಾಶೆಯ ಬಗ್ಗೆ
ಹಾಗೂ ಮಕ್ಕಳ ಕೃತಘ್ನತೆಯ ವಿಷಯ.
ಆಗ ಗಂಡಸರು ಏನೂ ಪ್ರಯೋಜನವಿಲ್ಲ.
ನಿಮಗೆ ಬೇಕಾದದ್ದು ನಿಮ್ಮ ತಾಯಿ
ಅಥವಾ ಸೋದರಿ
ಅಥವಾ ಸ್ಕೂಲಿನಲ್ಲಿ ನಿಮ್ಮೊಂದಿಗೆ ಓದಿದ ಹುಡುಗಿ
ನೀವು ಮೊದಲಸಲ ನಿಮ್ಮ ಹೃದಯವನ್ನು ಕೊಟ್ಟವಳು
ಮತ್ತು ಅವಳ ಮೊದಲ ಮಗು - ಹೆಣ್ಣು -
ಹಾಗೂ ನಿಮ್ಮ ಎರಡನೆಯದು.
ಅವರೊಂದಿಗೆ ಕುಳಿತು ಮಾತಾಡುವಾಗ
ಅವಳು ಹೊಲಿಗೆ ಹಾಕುವಾಗ ನೀವು ಕುಳಿತು ಗುಟುಕರಿಸುತ್ತಾ
ಕೆದಕುವಿರಿ ಅಕ್ಕಿಯ ಧಾರಣೆ ಬಗ್ಗೆ
ಚಹಾ ಬೆಲೆ ಕುರಿತು
ಮತ್ತು ಗಿಣ್ಣು ಎಷ್ಟು ದುರ್ಲಭವೆಂಬ ವಿಷಯ.
ನಿಮ್ಮಿಬ್ಬರಿಗೂ ಗೊತ್ತು ನಿಮ್ಮಿಬ್ಬರ ಈ ಮಾತುಕತೆ
ಪ್ರೇಮ ಮತ್ತು ಹತಾಶೆ ಕುರಿತು ಹಾಗೂ ಮಕ್ಕಳ ಕೃತಘ್ನತೆ.
ಮೂಲ: ಗೌರಿ ದೇಶಪಾಂಡೆ
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ