ಲಿಮರಿಕ್ ಅಥವಾ ಸಿಲ್ಲಿಪದ್ಯಗಳು - ೧

(೧)
ಮಿಸ್ಟರ್ ಅಂಡ್ ಮಿಸೆಸ್ ಗುಪ್ತ 
ವೇಕೇಷನ್ ಸ್ಪಾಟ್ ಐಗುಪ್ತ 
ನೋಡ್ತಾ ನೋಡ್ತಾ ಪಿರಮಿಡ್ಡು 
ಮಗನಿಗೆ ಹೇಳಿದ್ಲು "ಗುಡ್ಡು!
ಇನ್ಮೇಲೆ ಕರೀಬೇಡ ಮಮ್ಮಿ ಅಂತ!"
(ಐಗುಪ್ತ = ಈಜಿಪ್ಟ್)

(೨)
ಕಲಿಯಕ್ ಆಗ್ದೇ Excel
ಮಂಜು ಮಾಡ್ದ ಎಗ್ ಸೆಲ್
ಲೆಕ್ದಲ್ ಸಿಕ್ರೂ ಮೊಟ್ಟೆ
ಭಾರೀ ಬಿಸಿನೆಸ್ ಕೊಟ್ಟೆ
ಅಂತ ಅದ್ರಲ್ಲೇ ಎಕ್ಸೆಲ್

(೩)
ಕದ್ಗೊಂಡ್ ಮುದ್ದೆ ಬೆಣ್ಣೆ
ತಿಂತಿದ್ದಾಗ ಒಬ್ನೇ 
ಯಾರೋ ಬಂದ್ ಹಾಗ್ ಸದ್ದು!
ಗಾಬ್ರೀಗ್ ಮುದ್ದೆ ಬಿದ್ದು 
ಎತ್ಕೊಂಡ್ ತಿಂತಿದ್ನತೆ ಮಣ್ಣೆ!

(೪)
ಮುಂಚೆ ಆಗಿದ್ನಲ್ಲ ಸಂತ 
ಯಾಕ್ ಆಗ್ ಹೋದ ಸಂತಾ?
"ಏ" - ಸಹವಾಸ ದೋಷ ಅಂತ 
ನಕ್ ಬಿಟ್ನಂತೆ ಬಂತಾ 
ನಿಮಗೂ ನಗು ಬಂತಾ?

(೫)
ಬ್ರೂಸ್ ಲೀ ತಮ್ಮ ಚಕ್ ಲೀ 
ತಿಂತಿದ್ನಂತೆ ಚಕ್ಲೀ 
ಆಡ್ತಾ ಇದ್ದಾಗ್ ಕುಸ್ತಿ 
ಹಲ್ಲುದುರಿಸ್ ಬಿಡ್ತು ಮುಷ್ಟಿ 
ಪಾಪ! ಹಾಕ್ಕೋತಾನೆ ನಕ್ಲಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)