ಪೋಸ್ಟ್‌ಗಳು

ಅಕ್ಟೋಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹ್ಯಾಲೊವೀನ್ ಸಂಜೆ

ಇಮೇಜ್
ಸಿ. ಪಿ. ರವಿಕುಮಾರ್ ಹ್ಯಾಲೊವೀನ್ ಸಂಜೆ ಯಾವ ವೇಷ ತೊಡಲಿ? ನೋಡಿದವರಿಗೆ ಹೇಗೆ 400V ಶಾಕ್ ಕೊಡಲಿ? ತಲೆಯಲ್ಲಿ ರಕ್ತ! ಬುರುಡೆ  ಸೀಳಿದ ಕೊಡಲಿ! ಫ್ರಾಂಕಿನ್ ಸ್ಟೀನ್ ಐಡಿಯಾ  ಹೇಗಿದೆ ಡೆಡ್ಲೀ! ಇಲ್ಲ ಇವೆಲ್ಲಾ ಈಗ ಶಾಕ್ ಕೊಡುವುದಿಲ್ಲ ಮಿತ್ರ ಪ್ರತಿದಿನ ನೋಡುವರು ಜನ ಹಾರರ್ ಚಿತ್ರ ಗೋರಿಯಿಂದ ಮೇಲೆದ್ದ  ಜಾಂಬೀ ಬಂದರೂ ಹತ್ರ ಯಾರಿಗೂ ಅನ್ನಿಸೋದಿಲ್ಲ ಇದೊಂದು ವಿಚಿತ್ರ ಡೆಂಗೀ ರೋಗಾಣುವಾಗು, ಸ್ಯಾಮ್ ಸಂಗ್ ಫೋನಾಗು! ನೊರೆತುಂಬಿದ ಕೆರೆಯಾಗು ಅಥವಾ ಟ್ರಾಫಿಕ್ ಜಾಮಾಗು! ಉಕ್ಕಿನ ಸೇತುವೆಯಾಗು! ಚುನಾವಣೆ ಭರವಸೆಯಾಗು! ಶಾಸಕ ಮಹೋದಯರ ಮಾತಿನ ವರಸೆಯಾಗು! ಟಿ.ವಿ. ಚರ್ಚೆಯಾಗು, ರಿಯಾಲಿಟಿ ಶೋ ಆಗು, ಸೀಳುನಾಲಗೆ ಸಾಹಿತಿಯ ಲೇಟೆಸ್ಟ್ ಸೋಗಾಗು! ಸುಳ್ಳು ಸುದ್ದಿಯಾಗು, ವಿಷ ಹರಡುವ ಮೀಂ ಆಗು! ಧರ್ಮ ದ್ವೇಷಿಯಾಗು, ಇಂಥದೇನಾದರು ನೀನಾಗು! ಗೋಳುಕರೆ ಲೇಖಕನ ಅಂಕಣ ಬರಹವಾಗು! ಲೈಕೇ ಇಲ್ಲದ ಸೆಲ್ಫೀ ತರಹವಾಗು! ಪ್ರತಿದಿನವೂ ಜನರನ್ನು ಹೊಸದಾಗಿ ಬೆದರಿಸುವ ಮೀಡಿಯಾ ಪುಟದಲ್ಲಿ ಏನಾದರೊಂದಾಗು!

ಗಡಿ

ಇಮೇಜ್
ಮೂಲ ಉರ್ದೂ : ಜಾಹೀದ್ ಇಮ್ರೋಜ್ (ಪಾಕೀಸ್ತಾನಿ ಯುವಕವಿ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಗಡಿಯ ಮೇಲೆ ಬರಿಹೊಟ್ಟೆಯಲ್ಲೇ ನಮಗೆ ಕಟ್ಟಲಾಗದು ಬೇಲಿ. ರಾತ್ರಿಗಳನ್ನು ಒಣಗಿಸಿಬಿಡುತ್ತದೆ ಹಸಿವು. ದಾಹ ತೀರಿಸದು ನಮ್ಮ ಕಣ್ಣೀರು. ಧಾರ್ಮಿಕ ಸಂಗೀತಕ್ಕೆ ರಣಗೀತೆಯ ರಾಗ ದೊರೆತಾಗ ಫಲವಂತಿಕೆಯಲ್ಲೂ ಬೆಳೆಯುತ್ತದೆ ಬರಗಾಲ. ಮಕ್ಕಳು ತಾಯಿಎದೆಯಿಂದ ರಕ್ತ ಹೀರತೊಡಗುತ್ತಾರೆ. ಮುಖಗಳ ಮೇಲೆ ಯಾರೂ ಬಾವುಟಗಳನ್ನು ತೊಡುವುದಿಲ್ಲ, ಸ್ವಾತಂತ್ರ್ಯದಿನದಂದು ಜನ ತಮ್ಮ ಸಂತೋಷವನ್ನು ಸುಡುತ್ತಾರೆ, ನಕ್ಷತ್ರಕಡ್ಡಿಯನ್ನಲ್ಲ. ಸಿಪಾಯಿಗಳು ಹೊಲ ನಾಶಮಾಡುವ ಯಂತ್ರಗಳೆಂಬ ಹಾಡನ್ನು ಸೇನೆಯು ಎಂದೂ ಗುಣುಗುಣಿಸುವುದಿಲ್ಲ. ಹೂವುಗಳು ನವವಧುವಿನ ಹೆರಳಲ್ಲಿ ಮತ್ತು ಮಕ್ಕಳ ಸಮವಸ್ತ್ರಗಳ ಮೇಲೆ ಮಾತ್ರ ಭೂಷಣವಾಗುತ್ತವೆಯೇ? ಗಡಿಗಳ ರೇಖೆಗಳನ್ನು ಗುರುತಿಸಲು ಮುಳ್ಳುತಂತಿಯ ಬದಲು ಹೂಗಿಡಗಳ ಸಾಲನ್ನು ಕಟ್ಟಲಾಗದೆ?

ಚಕ್ಕುಲಿ ಕಡುಬು ಚೂಡಾ ಮೈಸೂರುಪಾಕು

ಇಮೇಜ್
ಸಿ. ಪಿ. ರವಿಕುಮಾರ್  ಚಕ್ಕುಲಿ ಕಡುಬು ಚೂಡಾ ಮೈಸೂರುಪಾಕು ಹೇಳಿ ಗೆಳೆಯರೆ ನಿಮಗೆ ಏನೇನು ಬೇಕು? ದೀಪಾವಳಿ ಬಂದಾಗ ಹೊಸಬಟ್ಟೆ, ಆರತಿ  ಆಕಾಶಬುಟ್ಟಿ ಹೊರತೆಗೆದು ರೀಮೇಕು! ಕೆಲವರಿಗೆ ಭೂಚಕ್ರ, ವಿಷ್ಣು ಚಕ್ರ ಹಲವರಿಗೆ  ನನಗೋ ಚಕ್ಕುಲಿಯ ಹೊಂಬಣ್ಣದ ರೇಕು!  ಜೋಡಿಸಿಟ್ಟು ತಟ್ಟೆಯಲ್ಲಿ ಬಹು ಅಂದವಾಗಿ  ಕ್ಲಿಕ್ ಮಾಡುವೆನು ಒಂದೆರಡು ಎಂಬಿ ಸಾಕು  ಮೇಲೇರಿಸುವೆ ನಿಮ್ಮ ಫೇಸ್-ಬುಕ್  ಗೋಡೆಗೆ  ಕೆಳಗಿಳಿಸುವೆನು ನನ್ನ ಉದರಕ್ಕೆ ನಾಲಕ್ಕೂ  ಕಳಿಸಿಕೊಡುವೆನು ನಿಮಗೆ ಈಗಿಂದ ಈಗಲೇ  ಹಾಕುವಿರಾ ಹೇಳಿ  ಪ್ರತಿಯೊಬ್ಬರೂ ಲೈಕು?  

ಪ್ರತಿಬಿಂಬದ ಬಂಧನ

ಶಹರಿಯಾರ್ ಅವರ ಒಂದು ಗಜಲ್ ಭಾಷಾಂತರಿಸುವ ಸಾಹಸ ಇಲ್ಲಿದೆ.  ಅವರ ಇನ್ನೂ ಅನೇಕ ರಚನೆಗಳಂತೆ ಇಲ್ಲೂ ನಗರಜೀವನದ ಬಗ್ಗೆ ಒಂದಿಷ್ಟು ನೋಟಗಳಿವೆ. ನಗರದ ಜೀವನ ಒಂದು ಮರೀಚಿಕೆಯಂತೆ. ಮಾತಿನಲ್ಲಿ ಅದನ್ನು ಬಂಧಿಸಿಡುವುದು ಕೂಡಾ ಕಷ್ಟ.  ನಾವು ನಡೆಯುತ್ತಿದ್ದೇವೆಂಬ (ನಂಬಿಕೆಯ) ಹಾದಿ ಗಟ್ಟಿಯಾದದ್ದೆಂಬುದು ಒಂದು ಭ್ರಮೆ!  ಸ್ಮಾರ್ಟ್ ಸಿಟಿ ಎಂಬ ಕಲ್ಪನೆಯನ್ನೇ ತೆಗೆದುಕೊಳ್ಳಿ. ಈ ಅದ್ಭುತ ಕಲ್ಪನಾಲೋಕ ಎಂದಾದರೂ ನಿಜವಾದೀತೇ? ಅದರ ಸಾಧ್ಯತೆ ಕಡಿಮೆಯೇ ಎಂದು ನಮಗೆ ಗೊತ್ತಿದ್ದರೂ ನಾವು ಕನಸು ಕಾಣುವುದನ್ನು ಬಿಡುವುದಿಲ್ಲ!  ಮೂಲ ಉರ್ದೂ : ಶಹರಿಯಾರ್  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಪ್ರತಿಬಿಂಬ ಹಿಡಿದಿಡಲೇ,  ತೊಡಿಸಲೇ ನೆರಳಿಗೆ ಕಡಿವಾಣ? ಹೇಗೆ ಸಾಕ್ಷಾತ್ಕರಿಸಿಕೊಳ್ಳಲಿ ಮರೀಚಿಕೆಯನ್ನ? ಪದತಲದಲ್ಲಿ ಇದೆಯಲ್ಲ ಅದು ಗಟ್ಟಿನೆಲವೆಂದು   ನಡೆ ಇನ್ನೊಂದಿಷ್ಟು ದಿನ ಭ್ರಮೆಯನ್ನು ಹರಡೋಣ  ಭರವಸೆಗಳ ನಗರ ನಿಜವೇ ಆಗುವುದು ಸಾಧ್ಯವಿಲ್ಲ  ಎಂದಾದರೆ ಅದನ್ನು ಕಲ್ಪನೆಯಲ್ಲೇ ಹಿಡಿದಿಡೋಣ  ಹೆಚ್ಚೂ ಕಡಿಮೆ ಈಗ ಕಣ್ಣುಗಳಿಗೆ ಇರುವ ಕೆಲಸ ಒಂದೇ  ಕಂಡ ಕನಸುಗಳಿಗೆಲ್ಲಾ ಹುಡುಕುವುದು ಅರ್ಥವನ್ನ  ನೆನ್ನೆಯೆಷ್ಟಿತ್ತೋ ನನಗೆ ಇಂದೂ ಅಷ್ಟೇ ಇದೆ ಅಧೈರ್ಯ  ಯಾರ ತುಟಿಗಳ ಮೇಲೆ ಬರೆಯಲಿ ದಾಹವನ್ನ? ಸವೆಸೋಣ ಉಳಿದ ಬದುಕಿನ ಹಾದಿ ಈ ನಂಬಿಕೆಯ ಮೇಲೆ: ಬಿಸಿಲನ್ನು ನೆರಳಿನ ಮೂಲಕವೇ ಅರ್ಥೈಸಿಕೊಳ್ಳೋಣ  (c

ಮೂರು ಮಿನಿಕಥೆಗಳು

ಸಿ. ಪಿ. ರವಿಕುಮಾರ್  ಮುಕ್ತಾಯ  ಅವರು ಮನೆಯಲ್ಲಿ ಇಂಗ್ಲಿಷ್ ಮಾತಾಡುವುದನ್ನು ರೂಢಿ ಮಾಡಿಕೊಂಡಿದ್ದರು. ಗಂಡ ಮತ್ತು ಹೆಂಡತಿ ಅವತ್ತು ರಜಾ ಆಚರಿಸಲು ಹೊರಗೆ ಹೊರಟಿದ್ದರು. ಗಂಡ ಕಾರಿನಲ್ಲಿ ಕುಳಿತು ಹೆಂಡತಿಗಾಗಿ ಕಾಯುತ್ತಿದ್ದ. ಒಂದೆರಡು ಸಲ ಹಾರ್ನ್ ಮಾಡಿ ಆಕೆಯ ಗಮನ ಸೆಳೆಯಲು ಪ್ರಯತ್ನಿಸಿಯೂ ಆಗಿತ್ತು. ಆಕೆ ತನ್ನ ಶೃಂಗಾರ ಮುಗಿಸಿ ಹೊರಗೆ ಬರುವಾಗ ಗಡಿಬಿಡಿಯಲ್ಲಿ ಮನೆಗೆ ಬೀಗ ಹಾಕುವುದನ್ನೇ ಮರೆತು ಕಾರಿನತ್ತ ಧಾವಿಸುವುದನ್ನು ಕಂಡು ಗಂಡ "ದ ಲಾಕ್" ಎಂದು ಕೂಗಿದ. ಆಕೆ ದಿಗ್ಭ್ರಮೆಯಾದವಳಂತೆ ಏನೂ ತೋರದೆ ಅಲ್ಲೇ ನಿಂತಳು. ಗಿಡಕ್ಕೆ ನೀರು ಹಾಕುತ್ತಿದ್ದ ಪಕ್ಕದ ಮನೆಯವನು ತಲೆಯೆತ್ತಿ ನೋಡಿದ. "ದ ಲಾಕ್! ದಲಾಕ್!" ಎಂದು ಗಂಡ  ಮತ್ತೆರಡು ಬಾರಿ ಕೂಗಿದ. ಕತೆ ಮುಗಿಯಿತು. ಹೆಸರಿನಲ್ಲೇನಿದೆ? "ನಮ್ಮ ಬಾರ್ ಗೆ ಗಿರಾಕಿಗಳೇ ಇಲ್ಲವಲ್ಲ" ಎಂದು ಮಂಜು ಪೇಚಾಡಿದ. "ಯಾಕೆ ಅಂದ್ರೆ ಬೀದಿಗೊಂದು ಮಧುಲೋಕ ಇದೆ," ಎಂದು ಸಂಜು ಸಮಜಾಯಿಷಿ ಹೇಳಿದ. ಗಿರಾಕಿಗಳೇ ಇಲ್ಲದ ಕಾರಣ ಅವರು ತಾವೇ ಕುಡಿಯುತ್ತಾ ಕುಳಿತಿದ್ದರು. "ಏನಾದರೂ ಮಾಡಲೇ ಬೇಕು." "ಹೊಸ ಬಾರ್ ಗಳೆಲ್ಲಾ ನೋಡು, ಹ್ಯಾಗೆ ಚಮಕ್ ಚಮಕ್ ಅಂತ ಹೊಳೆಯುತ್ತಾ ಇವೆ." "ರೀಮಾಡೆಲಿಂಗ್ ಮಾಡಿಸಬೇಕು." "ಒಂದು ಹೊಸಾ ಹೆಸರು ಕೂಡಾ ಇಡಬಹುದು." "ಗ್ರೇಟ್ ಐಡಿಯಾ.

ಸೇತುವೆ

ಇಮೇಜ್
ಸಿ. ಪಿ. ರವಿಕುಮಾರ್  ಕಟ್ಟಲು ಹೊರಟಿದ್ದೇವೆ ಸಿಕ್ಕಸಿಕ್ಕಲ್ಲಿ ಉಕ್ಕಿನ ಸೇತುವೆ ಸತ್ತ ನಗರದ ಮೇಲೆ ಇನ್ನೊಂದು ಸೊಕ್ಕಿನ ಸೇತುವೆ ಎಷ್ಟು ದೂರ ಬಂದಿದ್ದೇವೆ, ಕಳೆದುಹೋಗಿದೆ ದಾರಿ, ಮುಟ್ಟಿಸುವುದೇ ಮತ್ತೆ ಯಾವುದಾದರೂ ಸೇತುವೆ? ನಗರದ ಮುಖಕ್ಕೆ ಬರೆಗಳಂತೆ ಫ್ಲೈಓವರ್ ಬೀದಿಗಳು ನಿಗಮಬಾಹಿರ ಸಂಖ್ಯೆಗೆ ಸೇರುವ ಇನ್ನೊಂದು ಸೇತುವೆ ಉಕ್ಕಿನ ಸೆಲ್ ಟವರಿಗೆ ಬೆದರಿ ಹಾರಿಹೋದವು ಗುಬ್ಬಿ ದಿಕ್ಕೆಡಿಸುವುದು ಯಾರನ್ನು ಹೊಸ ಉಕ್ಕಿನ ಸೇತುವೆ? ಸುಳ್ಳು ಹೇಳುತ್ತ ಹೇಳುತ್ತ ನಾವೇ ನಂಬತೊಡಗಿದ್ದೇವೆ ಎಲ್ಲಿಗೆ ಕರೆದೊಯ್ಯುವುದೋ ನಮ್ಮನ್ನು ಸುಳ್ಳುಗಳ ಸೇತುವೆ?  ಸಂಭಾಷಣೆಗೆ ಫೋನು, ಸಂದೇಶಕ್ಕೆ ಅಂತರ್ಜಾಲ,  ಗಾಂಭೀರ್ಯ ಮಾತಿಗೆ ತಂದು ಕೊಡಲು ಯಾವ ಸೇತುವೆ? ತುದಿನಾಲಗೆ ಮಾತುಗಳ ಸೇತುವೆಗಳಿವೆ ಸಾಕಷ್ಟು ಎದೆಯಿಂದ ಎದೆಗೆ ಕಟ್ಟಬೇಕಾಗಿದೆ ಸೇತುವೆ

ಎಲ್ಲಿ ಹುಡುಕುತ್ತಿರುವೆ ಪ್ರಶ್ನೆಗಳಿಗೆ ಉತ್ತರ?

ಇಮೇಜ್
ಮೂಲ: ಬಾಬ್ ಡಿಲನ್ (2016 ನೊಬೆಲ್ ಪ್ರಶಸ್ತಿ ವಿಜೇತ) ಕನ್ನಡ ಅನುವಾದ : ಸಿ. ಪಿ. ರವಿಕುಮಾರ್ ಈ ವರ್ಷದ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದುಕೊಂಡ ಬಾಬ್ ಡಿಲನ್ ಪ್ರಸಿದ್ಧ ಅಮೆರಿಕನ್ ಗೀತಕಾರ ಮತ್ತು ಹಾಡುಗಾರ.  ಅರವತ್ತನೆಯ ಶತಮಾನದಲ್ಲಿ ಅವನು ಬರೆದು ಹಾಡಿದ ಶಾಂತಿಪರ ಗೀತೆಗಳಿಂದ ಅವನಿಗೆ ಖ್ಯಾತಿ ದೊರೆಯಿತು. "ದ ಆನ್ಸರ್ ಈಸ್ ಬ್ಲೋಯಿಂಗ್ ಇನ್ ದ ವಿಂಡ್" ಅವನ ಪ್ರಸಿದ್ಧ ಗೀತೆ. ಜಗತ್ತಿನಲ್ಲಿ ಕೆಲವು ಜನಾಂಗಗಳ ಶೋಷಣೆಗೆಅಡೆತಡೆಯೇ ಇಲ್ಲದಂತೆ ಇತಿಹಾಸದ ಉದ್ದಕ್ಕೂ ನಡೆದು ಬಂದಿದೆ. ಯುದ್ಧಗಳು ಇತಿಹಾಸದ ಉದ್ದಕ್ಕೂ ನಡೆಯುತ್ತಲೇ ಇವೆ. ಇವುಗಳಿಗೆಲ್ಲ ಯಾವಾಗ ಕೊನೆ? ಈ ಪ್ರಶ್ನೆಗೆ ಉತ್ತರವನ್ನು ಹುಡುಕಬೇಕಾದದ್ದು ಬೇರೆಲ್ಲೂ ಅಲ್ಲ, ನಮ್ಮಲ್ಲೇ. "ಇದು ತಪ್ಪು, ಇದನ್ನು ನಿಲ್ಲಿಸಬೇಕು" ಎಂಬ ನಿರ್ಧಾರ ತೆಗೆದುಕೊಳ್ಳಲು ತಡವೇಕೆ ಎಂಬುದು ಕವಿಯ ಪ್ರಶ್ನೆ.  ಇನ್ನೆಷ್ಟು ಅಗ್ನಿಗಳನ್ನು ಹಾದು ಬರಬೇಕು ಮಾನವ ಮನುಷ್ಯನೆಂದು ನೀನವನನ್ನು ಗುರುತಿಸುವ ಮುನ್ನ? ಇನ್ನೆಷ್ಟು ಸಾಗರಗಳನ್ನು ಈಜಿ ಬರಬೇಕು ಬೆಳ್ಳಕ್ಕಿ ಮರಳಿನಲ್ಲಿ ಹಾಯಾಗಿ ನಿದ್ರಿಸುವ ಮುನ್ನ? ಇನ್ನೆಷ್ಟು ತೋಪುಗುಂಡುಗಳು ಹಾರಬೇಕಾಗಿದೆ ಸಂಪೂರ್ಣ ಅವನ್ನು ನಿಷೇಧಿಸುವ ಮುನ್ನ? ಎಲ್ಲಿ ಹುಡುಕುತ್ತಿರುವೆ ಗೆಳೆಯಾ ಈ ಪ್ರಶ್ನೆಗಳಿಗೆ ಉತ್ತರ?  ಗಾಳಿಯಲ್ಲಿ ಅಲ್ಲೇ ಹಾರುತ್ತಿದೆ ಹತ್ತಿರ. ಎಷ್ಟು ಸಾವಿರ ವರ್ಷ ಬಾಳುವುದು ಪರ್ವತ ಸಾಗರದಲ್ಲಿ ಕರಗಿ ನೀರಾ

ಕೆಲಸವಿಲ್ಲದ ಸೂರ್ಯ ಅದೃಷ್ಟವಂತ

ಇಮೇಜ್
ಮೂಲ ಅಮೆರಿಕನ್ ಹಾಡು: ಹೇವನ್ ಗಿಲೆಸ್ಪಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಬೆಳಗಾಗೆದ್ದು ಹೊರಟು ನಿಂತೆನೆಂದರೆ ನೋಡು ದೆವ್ವ ಬಂದವರಂತೆ ದಿನವಿಡೀ ದುಡಿತ ದಿನವಿಡೀ ಮೇಲೆ ಸ್ವರ್ಗದಲ್ಲುರುಳಾಡುವನು ಕೆಲಸವಿಲ್ಲದ ಸೂರ್ಯ, ಅದೃಷ್ಟವಂತ ರೇಗುವ ಹೆಂಡತಿಯ ಜೊತೆ ಏಗುತ್ತಾ ಮಕ್ಕಳಿಗಾಗಿ ಸುಕ್ಕಾಗಿದೆ ತೊಗಲು, ನೆರೆಬಂದು ಕೂದಲಿಗೆ ಬಾಗುತ್ತಿದೆ ಸೊಂಟ ದಿನವಿಡೀ ಮೇಲೆ ಸ್ವರ್ಗದಲ್ಲುರುಳಾಡುವನು ಕೆಲಸವಿಲ್ಲದ ಸೂರ್ಯ, ಅದೃಷ್ಟವಂತ ಮೇಲಿರುವ ದೇವರೇ ಕಣ್ಣಿಲ್ಲವೇ ನಿನಗೆ ಕಾಣುವುದಿಲ್ಲವೇ ನನ್ನ ಕಣ್ಣಲ್ಲಿನ ನೀರು? ಕರೆಸಿಕೋ ನನ್ನನ್ನೂ ಮೇಲಿರುವ ಸ್ವರ್ಗಕ್ಕೆ ಕಳಿಸಿಕೊಡು ಹಾರಾಡುವ ಬೆಳ್ಳಿತೇರು ಹಾರಿಸು ನನ್ನನ್ನೂ ವೈತರಿಣಿಯ ಮೇಲೆ ಕಳೆದುಹೋಗಲಿ ನನ್ನ ದುಃಖ ನೂರೆಂಟು ಕೊಡಬೇಡ ನನಗೆ ಬೇರಾವುದೂ ಕೆಲಸ ಸೂರ್ಯನಂತೆ ಸುಮ್ಮನೇ ಹೊರಳಾಡುವ ಹೊರತು ಮೇಲಿರುವ ದೇವರೇ ಕಣ್ಣಿಲ್ಲವೇ ನಿನಗೆ ಕಾಣುವುದಿಲ್ಲವೇ ನನ್ನ ಕಣ್ಣಲ್ಲಿ ನೀರು? ಕರೆಸಿಕೋ ನನ್ನನ್ನೂ ಮೇಲಿರುವ ಸ್ವರ್ಗಕ್ಕೆ ಕಳಿಸಿಕೊಡು ಹಾರಾಡುವ ಬೆಳ್ಳಿತೇರು ಹಾರಿಸು ನನ್ನನ್ನೂ ವೈತರಿಣಿಯ ಮೇಲೆ ಕಳೆದುಹೋಗಲಿ ನನ್ನ ದುಃಖ ನೂರೆಂಟು ಕೊಡಬೇಡ ನನಗೆ ಬೇರಾವುದೂ ಕೆಲಸ ಸೂರ್ಯನಂತೆ ಸುಮ್ಮನೇ ಹೊರಳಾಡುವ ಹೊರತು "ಕೆಲಸವಿಲ್ಲದ ಸೂರ್ಯ ಅದೃಷ್ಟವಂತ" ಎಂಬ ಹಾಡನ್ನು ರಚಿಸಿದವನು ಅಮೆರಿಕನ್ ಬರಹಗಾರ ಹೇವನ್ ಗಿಲೆಸ್ಪಿ. ತಂದೆ ವಿಲಿಯಮ್ ಗಿಲೆಸ್ಪಿ ಮತ್ತು ತಾಯಿ ಆನಾ ರೇಲಿಗೆ ಇ

ಹತ್ತು ಉರ್ದು ಶೇರ್

ಇಮೇಜ್
೧  ಮುಳ್ಳಿಂದಲೇ ತೆಗೆದೆ ಕಾಲಿಗೆ ಚುಚ್ಚಿದ ಮುಳ್ಳು ಏಕೆಂದರೆ ನೋಡಿ ಹೂವಿಗೆ ಬರಗಾಲ ಎಲ್ಲೆಲ್ಲೂ (ಆಕೀಲ್ ಶಾದಾಬ್) ೨ ಹೇಗೆ ಬದುಕಿದ್ದೇನೆ ಭೂಮಿಯ ಮೇಲೆ ಗೊತ್ತೇ? ಶತ್ರುವಿನ ಮನೆಯಲ್ಲಿ ಅತಿಥಿ ರಾತ್ರಿ ಕಳೆದಂತೆ (ಭಗವಾನ್ ದಾಸ್ ಏಜಾಜ್) ೩ ಮನೆಯಲ್ಲೇ ಆಗುಬಹುದು ಭಗವಂತನ ದರ್ಶನ ಮಕ್ಕಳೊಂದಿಗೆ ಮಗುವಾಗಿ ಆಡಿದರೆ ಎರಡು ಕ್ಷಣ (ಬಿಸ್ಮಿಲ್ ನವಶ್ ಬಂದಿ ) ೪ ಎಲ್ಲರ ಮನೆಗೆ ಹೋಗಿ ಕೊಚ್ಚುತ್ತಾರಲ್ಲ ಅವರಿವರ ಬಗ್ಗೆ ಹರಟೆ ಗಮ್ಮತ್ತು ತಮ್ಮ ಮನೆಯಲ್ಲೇ ಅವರಿಗೆ ಸಿಕ್ಕುವುದಿಲ್ಲ ಸವಕಲು ಕಾಸಿನ ಕಿಮ್ಮತ್ತು (ಅಸಿಮ್ ಶಹನಾಜ್ ಶಿಬ್ಲಿ) ೫ ಪ್ರತಿಯೊಂದು ವಿಷಯಕ್ಕೂ ಹಿಂದೂ ಮುಸ್ಲಿಂ ಎನ್ನುವೆಯಲ್ಲ ಕರ್ಮ! ಗೊತ್ತಿಲ್ಲವೇ ನಿನಗೆ ಸುಂದರಿ, ಪ್ರೇಮವೆಂಬುದೇ ಬೇರೆ ಧರ್ಮ (ಜಮಾಲುದ್ದೀನ್ ಆಲಿ) ೬ ಹೇಗೆ ಕೂಡಿಬಂದೀತು ಮಾತು? ಪ್ರತಿಯೊಂದೂ ಇಜ್ಜೋಡು ಕಣ್ಣಿಗಿಂತಲೂ ದೊಡ್ಡದು ಕನಸು, ನಿದ್ದೆಗಿಂತ ರಾತ್ರಿಯೇ ದೊಡ್ಡದು (ಶಾಹಿದ್ ಮೀರ್) ೭ ತೆರಳುವ ಮುನ್ನ ಕಾಲ ಉಳಿಸುವುದು ನೆನಪು ಮಾತ್ರ ಹಲವಾರು ಹಾರಿಹೋದರೂ ಹಕ್ಕಿ ಉಳಿದಂತೆ ಪಂಜರದಲ್ಲದರ ನೆರಳು (ನರೇಶ್) ೮ ಕಿಸೆ ಖಾಲಿಯಾದಾಗ ಹೇಗೆ ತೆಪ್ಪಗಾಗುತ್ತಾನೆ ಮನುಷ್ಯ ನೀರಿಲ್ಲದೇ ಹೋದಾಗ ಹೇಗೆ ತೆಪ್ಪಗಾಗುತ್ತದೋ ಮತ್ಸ್ಯ (ಜಹೀರ್ ಆತಿಶ್) ೯ ಬದುಕಿನುದ್ದಕ್ಕೂ ದೊಡ್ಡ ಮರಗಳನ್ನೇ ಹುಡುಕುತ್ತ ಹಾರಾಡಿದ ಹಕ್ಕಿ ಯಾವುದೋ ಬಳ್ಳಿಯ ತೊಡರಿನಲ್ಲಿ ನೆನ್ನೆ ಅದರ ಮೃತದೇಹ ಸಿಕ್ಕಿ (ಅ

ಪುಸ್ತಕ

ಇಮೇಜ್
ಮೂಲ ಕವಿತೆ: ಎಮಿಲಿ ಡಿಕಿನ್ಸನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಕೊಂಡೊಯ್ಯಲು ಕಾಣದ ಕಡಲಾಚೆಯ ನಾಡಿಗೆ ಬೇರಾವ ಹಡಗೂ ಇಲ್ಲ ಹೊತ್ತಿಗೆಯನ್ನು ಮೀರಿ  ಜಿಗಿಯುತ್ತ ಸಾಗುವ ಕವಿತೆಯ ಸಾಲಿಗೂ ಮೀರಿ  ಮತ್ತೊಂದಿಲ್ಲ ಕುದುರೆ ಸವಾರಿ  ಕಡುಬಡವರಿಗೂ ಕೈಗೆಟಕುವ ಪ್ರಯಾಣ! ಯಾವುದೇ ಸುಂಕವನ್ನೂ ಬೇಡದ ಪಥ! ನಿದರ್ಶನದಂತಿದೆ  ಮಿತವ್ಯಯವೆಂಬುದಕ್ಕೆ  ಆತ್ಮವನ್ನು ಹೊತ್ತು ಮುನ್ನುಗ್ಗುವ ರಥ! There is no frigate like a book To take us lands away, Nor any coursers like a page Of prancing poetry. This traverse may the poorest take Without oppress of toll; How frugal is the chariot That bears a human soul!  Emily Dickinson