ಸೇತುವೆ

ಸಿ. ಪಿ. ರವಿಕುಮಾರ್ 

Image result for bridge

ಕಟ್ಟಲು ಹೊರಟಿದ್ದೇವೆ ಸಿಕ್ಕಸಿಕ್ಕಲ್ಲಿ ಉಕ್ಕಿನ ಸೇತುವೆ
ಸತ್ತ ನಗರದ ಮೇಲೆ ಇನ್ನೊಂದು ಸೊಕ್ಕಿನ ಸೇತುವೆ

ಎಷ್ಟು ದೂರ ಬಂದಿದ್ದೇವೆ, ಕಳೆದುಹೋಗಿದೆ ದಾರಿ,
ಮುಟ್ಟಿಸುವುದೇ ಮತ್ತೆ ಯಾವುದಾದರೂ ಸೇತುವೆ?

ನಗರದ ಮುಖಕ್ಕೆ ಬರೆಗಳಂತೆ ಫ್ಲೈಓವರ್ ಬೀದಿಗಳು
ನಿಗಮಬಾಹಿರ ಸಂಖ್ಯೆಗೆ ಸೇರುವ ಇನ್ನೊಂದು ಸೇತುವೆ

ಉಕ್ಕಿನ ಸೆಲ್ ಟವರಿಗೆ ಬೆದರಿ ಹಾರಿಹೋದವು ಗುಬ್ಬಿ
ದಿಕ್ಕೆಡಿಸುವುದು ಯಾರನ್ನು ಹೊಸ ಉಕ್ಕಿನ ಸೇತುವೆ?

ಸುಳ್ಳು ಹೇಳುತ್ತ ಹೇಳುತ್ತ ನಾವೇ ನಂಬತೊಡಗಿದ್ದೇವೆ
ಎಲ್ಲಿಗೆ ಕರೆದೊಯ್ಯುವುದೋ ನಮ್ಮನ್ನು ಸುಳ್ಳುಗಳ ಸೇತುವೆ?

 ಸಂಭಾಷಣೆಗೆ ಫೋನು, ಸಂದೇಶಕ್ಕೆ ಅಂತರ್ಜಾಲ,
 ಗಾಂಭೀರ್ಯ ಮಾತಿಗೆ ತಂದು ಕೊಡಲು ಯಾವ ಸೇತುವೆ?

ತುದಿನಾಲಗೆ ಮಾತುಗಳ ಸೇತುವೆಗಳಿವೆ ಸಾಕಷ್ಟು
ಎದೆಯಿಂದ ಎದೆಗೆ ಕಟ್ಟಬೇಕಾಗಿದೆ ಸೇತುವೆ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)