ಹ್ಯಾಲೊವೀನ್ ಸಂಜೆ

ಸಿ. ಪಿ. ರವಿಕುಮಾರ್

Image result for halloween head -pixabay

ಹ್ಯಾಲೊವೀನ್ ಸಂಜೆ ಯಾವ ವೇಷ ತೊಡಲಿ?
ನೋಡಿದವರಿಗೆ ಹೇಗೆ 400V ಶಾಕ್ ಕೊಡಲಿ?
ತಲೆಯಲ್ಲಿ ರಕ್ತ! ಬುರುಡೆ  ಸೀಳಿದ ಕೊಡಲಿ!
ಫ್ರಾಂಕಿನ್ ಸ್ಟೀನ್ ಐಡಿಯಾ  ಹೇಗಿದೆ ಡೆಡ್ಲೀ!

ಇಲ್ಲ ಇವೆಲ್ಲಾ ಈಗ ಶಾಕ್ ಕೊಡುವುದಿಲ್ಲ ಮಿತ್ರ
ಪ್ರತಿದಿನ ನೋಡುವರು ಜನ ಹಾರರ್ ಚಿತ್ರ
ಗೋರಿಯಿಂದ ಮೇಲೆದ್ದ  ಜಾಂಬೀ ಬಂದರೂ ಹತ್ರ
ಯಾರಿಗೂ ಅನ್ನಿಸೋದಿಲ್ಲ ಇದೊಂದು ವಿಚಿತ್ರ

ಡೆಂಗೀ ರೋಗಾಣುವಾಗು, ಸ್ಯಾಮ್ ಸಂಗ್ ಫೋನಾಗು!
ನೊರೆತುಂಬಿದ ಕೆರೆಯಾಗು ಅಥವಾ ಟ್ರಾಫಿಕ್ ಜಾಮಾಗು!
ಉಕ್ಕಿನ ಸೇತುವೆಯಾಗು! ಚುನಾವಣೆ ಭರವಸೆಯಾಗು!
ಶಾಸಕ ಮಹೋದಯರ ಮಾತಿನ ವರಸೆಯಾಗು!

ಟಿ.ವಿ. ಚರ್ಚೆಯಾಗು, ರಿಯಾಲಿಟಿ ಶೋ ಆಗು,
ಸೀಳುನಾಲಗೆ ಸಾಹಿತಿಯ ಲೇಟೆಸ್ಟ್ ಸೋಗಾಗು!
ಸುಳ್ಳು ಸುದ್ದಿಯಾಗು, ವಿಷ ಹರಡುವ ಮೀಂ ಆಗು!
ಧರ್ಮ ದ್ವೇಷಿಯಾಗು, ಇಂಥದೇನಾದರು ನೀನಾಗು!

ಗೋಳುಕರೆ ಲೇಖಕನ ಅಂಕಣ ಬರಹವಾಗು!
ಲೈಕೇ ಇಲ್ಲದ ಸೆಲ್ಫೀ ತರಹವಾಗು!
ಪ್ರತಿದಿನವೂ ಜನರನ್ನು ಹೊಸದಾಗಿ ಬೆದರಿಸುವ
ಮೀಡಿಯಾ ಪುಟದಲ್ಲಿ ಏನಾದರೊಂದಾಗು!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ