ಚಕ್ಕುಲಿ ಕಡುಬು ಚೂಡಾ ಮೈಸೂರುಪಾಕು
ಸಿ. ಪಿ. ರವಿಕುಮಾರ್
ಚಕ್ಕುಲಿ ಕಡುಬು ಚೂಡಾ ಮೈಸೂರುಪಾಕು
ಹೇಳಿ ಗೆಳೆಯರೆ ನಿಮಗೆ ಏನೇನು ಬೇಕು?
ದೀಪಾವಳಿ ಬಂದಾಗ ಹೊಸಬಟ್ಟೆ, ಆರತಿ
ಆಕಾಶಬುಟ್ಟಿ ಹೊರತೆಗೆದು ರೀಮೇಕು!
ಕೆಲವರಿಗೆ ಭೂಚಕ್ರ, ವಿಷ್ಣು ಚಕ್ರ ಹಲವರಿಗೆ
ನನಗೋ ಚಕ್ಕುಲಿಯ ಹೊಂಬಣ್ಣದ ರೇಕು!
ಕ್ಲಿಕ್ ಮಾಡುವೆನು ಒಂದೆರಡು ಎಂಬಿ ಸಾಕು
ಮೇಲೇರಿಸುವೆ ನಿಮ್ಮ ಫೇಸ್-ಬುಕ್ ಗೋಡೆಗೆ
ಕೆಳಗಿಳಿಸುವೆನು ನನ್ನ ಉದರಕ್ಕೆ ನಾಲಕ್ಕೂ
ಕಳಿಸಿಕೊಡುವೆನು ನಿಮಗೆ ಈಗಿಂದ ಈಗಲೇ
ಹಾಕುವಿರಾ ಹೇಳಿ ಪ್ರತಿಯೊಬ್ಬರೂ ಲೈಕು?
ದೀಪಾವಳಿಯ ಸಮಯ
ಪ್ರತ್ಯುತ್ತರಅಳಿಸಿಚಕ್ಕುಲಿ ಕಡುಬು ಮೈಸೂರು ಪಾಕಿನ ಸಂಬ್ರಮ
ಹೊಸ ಬಟ್ಟೆ ಆರತಿಯ ಸಿಂಚನ
ಕೊಟ್ಟರೇನೇ ಲೈಕ್ ಉು
ಸಿಗುವುದು ಸ್ವೀಟ್ ಉ ಉ ಉ....
ಈಗ ಎಲ್ಲಾ ಬರೀ ವರ್ಚುವಲ್ ರಿಯಾಲಿಟಿ ಕಣ್ರೀ!!
ಅಳಿಸಿ