ದರ್ಶನ

Image may contain: 1 person
ಹಾಬೋಧಿಯ ಕೆಳಗೆ ಕುಳಿತ ವೃದ್ಧನೊಬ್ಬ
ಯೋಚಿಸುತ್ತಾನೆ ಜಗತ್ತಿನ ಶೋಕಕ್ಕೆ ಕಾರಣಗಳನ್ನು.
ನೀನು ಹೇಳುತ್ತೀಯಾ ಬೋಧಿವೃಕ್ಷವೇ
ಮೌನವಾಗಿ ನೋಡಿರುವೆ ಎಲ್ಲ ಮೊದಲಿಂದಲೂ?

ಪ್ರಾರಂಭವಾಯಿತು ಮಹಾಬೋಧಿಯ ಶೋಧನಾಯಂತ್ರ
ಸುತ್ತುತ್ತಲೇ ಇತ್ತು ಸುತ್ತುತ್ತಲೇ ಇತ್ತು ಬಹಳಹೊತ್ತು
ಕಾಯುತ್ತಲೇ ಇದ್ದ ವೃದ್ಧ ಪ್ರಬುಧ್ಧ ಉತ್ತರಕ್ಕಾಗಿ
ಏಕೆಂದರೆ ಶೋಧನಾಯಂತ್ರಕ್ಕೆ ಎಲ್ಲವೂ ಗೊತ್ತು

ಕಡೆದಾಗ ಕಡಲನ್ನು ಕಕ್ಕಿದಹಾಗೆ ಕಾರ್ಕೋಟಕ
ಉತ್ತರಗಳು ಹತ್ತಾರು ಉಕ್ಕಿದವು ಹೊರಗೆ
ಹಾಲಾಹಲದ ನಂತರ ಸಿಕ್ಕಬಹುದು ಅಮೃತ
ಜೀರ್ಣಿಸಿಕೋ ವಿಷ(ಯ)ವನ್ನೇ ಅಲ್ಲಿವರೆಗೆ

ಶೋಧಿಸುತ್ತಿದ್ದಾನೆ ಬೋಧಿ ನೀಡಿದ್ದನ್ನು
ಎಂದು ಸಿಕ್ಕೀತೋ ನಿಜದ ಜಾಡು
ಅರೆಬೆಂದ ಹಸಿಹಸಿಯಿಂದ ಹಸಿವು ಬಾಯಾರಿಕೆ
ತೀರಿಸಿಕೊಳ್ಳುವುದೇ ಪಾಪ ಇವನ ಪಾಡು

ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)