ಚಳಿಗಾಲದ ದಿನಗಳು

ರಾಬರ್ಟ್ ಹೇಡೆನ್ (೧೯೧೩-೧೯೮೦) ಒಬ್ಬ ಅಮೆರಿಕನ್ ಕವಿ. ಇವನ ನಿಜವಾದ ತಂದೆ-ತಾಯಿ ರೂತ್ ಮತ್ತು ಆಸಾ ಷೆಫೀ ಎಂಬುವವರು. ಆದರೆ ನೆರೆಯ ಹೇಡೆನ್ ದಂಪತಿಗಳು ಅವನನ್ನು ದತ್ತುಪುತ್ರನಂತೆ ಬೆಳೆಸಿದರು. ಅವನು ಬೆಳೆದಿದ್ದು ಮಿಷಿಗನ್ ರಾಜ್ಯದ ಒಂದು ಘೆಟ್ಟೋದಲ್ಲಿ  (ತೀರಾ ಬಡವರು ವಾಸಿಸುವ ಪ್ರದೇಶ). ಬಡತನದಲ್ಲಿ ಕಳೆದ ಅವನ ಬಾಲ್ಯದ ಕಹಿ ನೆನಪುಗಳು ಅವನನ್ನು ಜೀವನದ ಉದ್ದಕ್ಕೂ ಕಾಡಿದವು. ಹೆತ್ತ ತಾಯಿ ಮತ್ತು ಸಾಕುತಾಯಿಯರು ಇವನ ಪ್ರೀತಿಗಾಗಿ ನಡೆಸುತ್ತಿದ್ದ ಪೈಪೋಟಿ ಮತ್ತು ಸಾಕಿದ ಪೋಷಕರ ನಡುವೆ ಸದಾ ನಡೆಯುತ್ತಿದ್ದ ಜಗಳಗಳು  ಅವನ ಬಾಲ್ಯವನ್ನು ಅಸಹನೀಯವೆನ್ನಿಸಿದವು.  ಪ್ರಸ್ತುತ ಪದ್ಯದಲ್ಲಿ ಹೇಡೆನ್ ತನ್ನ ಬಾಲ್ಯದ ಒಂದು ಸಂದರ್ಭವನ್ನು ಕುರಿತು ಬರೆದಿದ್ದಾನೆ. 
Image result for fireplace wikipedia
ಮೂಲ ಅಮೇರಿಕನ್ ಕವಿತೆ: ರಾಬರ್ಟ್ ಹೇಡೆನ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 


ರವಿವಾರವೂ ಕೂಡಾ ಅಪ್ಪ ಬೇಗನೇ ಎದ್ದು 
ಕೊರೆಯುವ ನೀಲಿಗಪ್ಪು ಚಳಿಯಲ್ಲಿ ಬಟ್ಟೆ ಧರಿಸಿ
ವಾರದ ಕಠಿಣ ದುಡಿಮೆಯಿಂದ ಅಲ್ಲಲ್ಲಿ 
ಸೀಳಿದ ಅಂಗೈಗಳ ನೋವನ್ನು ಲೆಕ್ಕಿಸದೆ 
ಸೌದೆ ಉರಿ ಹಾಕುತ್ತಿದ್ದ. ಯಾರೂ ಹೇಳುತ್ತಿರಲಿಲ್ಲ ಧನ್ಯವಾದ.  
ಚಳಿ ಚಟಪಟ ಉರಿಯತೊಡಗಿದಾಗ ನನಗೆ ಎಚ್ಚರವಾಗುತ್ತಿತ್ತು. 
ಕೋಣೆ ಬೆಚ್ಚಗಾದಾಗ ಅವನು ಕೂಗಿ ಕರೆಯುತ್ತಿದ್ದ. 
ನಾನು ನಿಧಾನವಾಗಿ ಎದ್ದು ಬಟ್ಟೆ ಧರಿಸುವಾಗ ಅಳುಕುತ್ತಾ 
ಎಂದಿನ ಕೋಪತಾಪಗಳನ್ನು  ಎದುರುನೋಡುತ್ತಿದ್ದೆ. 
ಚಳಿ ಓಡಿಸಿ ನನ್ನ ಬೂಟುಗಳನ್ನು ಪಾಲಿಶ್ ಮಾಡಿಟ್ಟವನೊಂದಿಗೆ 
ನನ್ನದೇನಿದ್ದರೂ ತಾತ್ಸಾರದ ಚುಟುಕು ಸಂಭಾಷಣೆ. 
ನನಗೆಲ್ಲಿ ಗೊತ್ತಿತ್ತು, ನನಗೆಲ್ಲಿ ಗೊತ್ತಿತ್ತು, 
ಪ್ರೀತಿಯ ನಿರಾಡಂಬರ, ಏಕಾಕಿತನವನ್ನು ಕುರಿತು?



ಕಾಮೆಂಟ್‌ಗಳು

  1. Those Winter Sundaysby Robert Hayden

    Sundays too my father got up early
    and put his clothes on in the blueblack cold,
    then with cracked hands that ached
    from labor in the weekday weather made
    banked fires blaze. No one ever thanked him.
    I'd wake and hear the cold splintering, breaking.
    When the rooms were warm, he'd call,
    and slowly I would rise and dress,
    fearing the chronic angers of that house,
    Speaking indifferently to him,
    who had driven out the cold
    and polished my good shoes as well.
    What did I know, what did I know
    of love's austere and lonely offices?

    ಪ್ರತ್ಯುತ್ತರಅಳಿಸಿ
  2. ಭಾವನಾತ್ಮಕ ಕವಿತೆ ಸರ್.
    ಕನ್ನಡದಲ್ಲಿ ಓದುವವರಿಗೆ (ನನಗೂ ಇಂಗ್ಲೀಷ್ ಅಷ್ಟಕಷ್ಟೆ) ತುಂಬಾನೆ ಸಹಾಯವಾಗುತ್ತೆ .

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)