ನಗುಬಂತಾ - ಕೆಲವು ಹನಿಗವನಗಳು

ಪಾನೀಯ  

ಸೇವಿಸಿದರೆ ಈ ಪಾನೀಯ ಮಲಗುವ ಮುನ್ನ 
ಫೇಸ್ ಬುಕ್ನಲ್ಲಿ ಯಾರೋ ಹಾಕಿದ್ದಾರೆ ಚಿನ್ನ
ಕರಗಿ ಹೋಗುತ್ತಂತೆ ಕೊಬ್ಬು
ಎಂದು ಹಲ್ಕಿರಿದಾಗ ಸುಬ್ಬು
ಹೌದಾ! ಮತ್ತೆ ಐಸ್ ಕ್ಯೂಬ್ ಯಾತಕ್ ಬೇಕು
ಅಂತ ಸುಬ್ಬಿ ಹಾಕಿದ್ಲು ಬ್ರೇಕು
ಗಂಟ್ ಹಾಕ್ಕೊಂಡು ಹುಬ್ಬು




ಯಾವುದು ಚೆಂದ? 

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚಂದ ನಿನಗಾವುದೆಂದು
ನನ್ನ ರೂ ಚೆಂದವೋ ನಿನ್ನ ರೂ ಚಂದವೋ
ಚಂದ ನಿನಗಾವುದೆಂದು

ನನ್ನ ರೂ ಚಂದವೋ ನಿಮ್ಮ ರೂ ಚೆಂದವೋ
ಎಂದೆನ್ನ ಕೇಳಲೇಕೆ
ಎರಡೂ ಡೀಮಾನಿಟೈಸ್ಡ್
ಎಂದಳಾಕೆ!

ಡಬ್ 
ಡಬ್ ಡಬ್ ಎನ್ನುತ್ತಿದೆ
ನಿನ್ನನ್ನು ನೋಡಿ
ನನ್ನ ಹೃದಯ
ಎಂದು ಹುಡುಗ ಹೇಳಿದಾಗ ಡಯಲಾಗು
ಯಾಕೆ ನಾನೇನು
ಹಿಂದಿ ಚಿತ್ರಾನಾ
ಅಥವಾ ಇಂಗ್ಲಿಷ್ ಮೂವೀನಾ
ಅಂದಳು
ಹುಬ್ಬು ಗಂಟುಹಾಕಿ ನಾಗು
.

ಆಸ್ತಿ 

ಅಪಾರ ಅಕ್ರಮ ಆಸ್ತಿ ಗಳಿಸಿದರೂ ಪಾಪ
ಇನ್ನೂ ಹಳೆಯ ಮುರುಕಲ್ಮನೆಯಲ್ಲೇ ವಾಸ
ಸುಣ್ಣ ಮಾಡಿಸಲು ಕೂಡಾ ಹೆದರುತ್ತಾರೆ ತುಂಬಾ
ಭಯದಲ್ಲಿರುತ್ತಾರೆ ಬಣ್ಣ ಬಯಲಾದೀತೆಂಬ

ಬಾಕ್ಸ್ ಮತ್ತು ಡಬ್ಬಾ 

"ಬಾಕ್ಸ್" ಆಫೀಸ್ ಗುರಿಯಲ್ಲಿ ಇಟ್ಟುಕೊಂಡು
ಮಾಡಿದರು ನಿರ್ದೇಶಕರು ಚಲನಚಿತ್ರ
ಸಿಕ್ಕಾಗ ಫಲಿತಾಂಶ ಅವರಲ್ಲಿ ಇರಲಿಲ್ಲ ಉತ್ರ,
"ಡಬ್ಬಾ" ಎನ್ನಿಸಿಕೊಂಡಾಗ ಎಲ್ಲಾರ್ ಹತ್ರ

ಮಡ್ಡಿವಾಲಾ 
ಮಣ್ಣು ತುಂಬಿದ ಕೆರೆಯೇ 
ಮಡ್ಡೀವಾಲಾ ಲೇಕ್?
ಪಂಜಾಬೀವಾಲಾ ಪ್ರಶ್ನೆಗೆ
ಉತ್ರ ಹೇಳ್ಲೇ ಬೇಕ್

- ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)