ಗಣಪ ಮತ್ತು ಬಳಪ












ಅಮ್ಮ, ಕೊಡು ಬಳಪ
ಎಂದು ಬೇಡಿದನು ಗಣಪ

ಏನು ಬರೆವೆ ಮಗು?
ಎಂದ ಅಮ್ಮನಿಗೆ ನಗು!

ಲ್ಯಾಪ್ ಟಾಪ್, ಮೌಸ್, ಟಚ್ ಪ್ಯಾಡು
ಇಂಥದನ್ನು ಬೇಡು

ಚಾಕ್, ಹಲಗೆ, ಬಳಪ
ಹಳೆಯದಾಯ್ತು ಕಣಪ್ಪ

ಲ್ಯಾಪ್ ಟಾಪ್ ನನಗೆ ಯಾಕಮ್ಮ
ನಿನ್ನ ತೊಡೆಯೇ ಸಾಕಮ್ಮ

ಇನ್ನೊಂದು ಮೌಸ್ ಯಾಕೆ?
ಇದೆಯಲ್ಲ ನನ್ನ ನೌಕೆ!

ಇನ್ನೊಂದು ಬಂದ್ರೆ ತೊಂದ್ರೆ -
ನನ್ನ ಮೋದಕ ಅದೇ ತಿಂದ್ರೆ!

ಸಾಕು ಬಳಪ ಹಲಗೆ
ಸರಳ, ಮೊದಲ ಕಲಿಕೆ

ಅಮ್ಮನಿಂದ ಬಳಪ
ಪಡೆದು ಕೊಡಲಿ ಗಣಪ

ಮಕ್ಕಳಿಗೆ ಬುದ್ಧಿ, ಅಭಯ
ಮತ್ತು ಸೆಂಟ್ ಪರ್ಸೆಂಟ್ ಶ್ರೇಯ

- ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)