ಹಿಮ
ಮೂಲ ಅಮೆರಿಕನ್ ಕವಿತೆ - ಡೇವಿಡ್ ಬರ್ಮನ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಹೊಲದ ಮೂಲಕ ಹಾದು ಹೋಗುತ್ತಿದ್ದೆ ತಮ್ಮ ಸೆತ್ ಜೊತೆ. ಹಿಮದಲ್ಲಿ ಮಕ್ಕಳು ನಿರ್ಮಿಸಿದ್ದ ದೇವತೆಗಳ ಮೂರ್ತಿಗಳ ಕಡೆ ಬೆರಳು ಮಾಡಿ ತೋರಿಸಿದೆ. ನಂತರ ಏನೆನ್ನಿಸಿತೋ ಅವನಿಗೆ ಹೀಗೆಂದೆ - "ಬಂದೂಕಿನಿಂದ ಹೊಡೆದು ಹಾಕಿದ್ದಾರೆ, ಕರಗಿ ಹೋಗುತ್ತಾರೆ ಕುಸಿದು ಬಿದ್ದಾಗ ನೆಲಕ್ಕೆ." ಗುಂಡಿಟ್ಟು ಕೊಂದವರು ಯಾರು ಎಂದು ಕೇಳಿದ. ಒಬ್ಬ ರೈತ, ಎಂದೆ. ನಾವೀಗ ಸರೋವರದ ಮೇಲೆ ನಡೆಯುತ್ತಿದ್ದೆವು. ಮಂಜು ನೀರಿನ ಛಾಯಾಚಿತ್ರದಂತೆ ತೋರುತ್ತಿತ್ತು. ಯಾಕೆ ? ಅವನು ಕೇಳಿದ. ಯಾಕೆ ಗುಂಡಿಟ್ಟು ಕೊಂದಿದ್ದು? ಈ ಸಂಭಾಷಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೋ ತೋಚಲಿಲ್ಲ. ಆತನಿಗೆ ಸೇರಿದ ಜಮೀನಿನ ಮೇಲೆ ಇದ್ದರಲ್ಲ, ಅಂದೆ. ಹಿಮ ಸುರಿಯುವಾಗ ಹೊರಗಿನ ಜಗತ್ತು ಒಂದು ಕೋಣೆಯ ಹಾಗೆ ಕಾಣುತ್ತದೆ. ಬೆಳಗ್ಗೆ ಪಕ್ಕದ ಮನೆಯವನೊಂದಿಗೆ ಉಭಯ ಕುಶಲೋಪರಿ ನಡೆಸಿದಾಗ ದೂರದಿಂದಲೇ ಕೂಗಿ ನಮ್ಮ ಧ್ವನಿಗಳು ಒಂದನ್ನೊಂದು ಸಮೀಪಿಸಿದಾಗ ಕೋಣೆಯ ಒಂದು ಗೋಡೆ ವಿಸ್ಫೋಟಿಸಿ ಪುಡಿಪುಡಿಯಾಗಿ ನೆಲಕ್ಕೆ ಉದುರಿತು. ನಾವು ಮತ್ತೆ ತಲೆತಗ್ಗಿಸಿ ಹಿಮ ತೋಡುವುದನ್ನು ಮುಂದುವರೆಸಿದೆವು ಪಕ್ಕಪಕ್ಕದಲ್ಲೇ, ಮೌನವಾಗಿ ಕೆಲಸ ಮಾಡಿದೆವು. ಅವರು ಯಾಕೆ ಅವನ ಜಮೀನಿನ ಮೇಲಿದ್ದರು? ಎಂದವನು ಕೇಳಿದ. ಕವಿತೆಯ ಸ್ವಾರಸ್ಯ: ನಮ್ಮ ಜಮೀನುಗಳ ನಡುವೆ ...