ಕರೋನಾ ಕರೋನಾ (ಚುಟುಕಗಳು)
ಮಜಾ ಕರೋನಾ
*****************
ನಾಳೆಯಿಂದ ಒಂದು ವಾರ ಜರ್ಬೇ ಜರ್ಬು
ರಜಾ ಬಂತೆಂದು ಕುಣಿದಾಡಿದನು ಸುಬ್ಬು
ಎದುರಾಯ್ತು ಸುಬ್ಬುವಿಗೆ ಮರುದಿವಸ ಪೇಚು
ಬಿಟ್ಟುಬಿಟ್ಟಂತಾಯ್ತು ಕೈಗೇ ಬಂದಿದ್ದ ಕ್ಯಾಚು
ಬಂದಾಗಿದ್ದವು ಎಲ್ಲಾ ಮಾಲು ಥೇಟರು ಪಬ್ಬು
ಥಿಯರಿ
********
ಕೊರೊನಾ ಹೇಗೆ ಬಂತು ರೀ
ಎಲ್ಲರಿಗೂ ಇದೆ ಅವರವರ ಥಿಯರಿ
ಒಬ್ಬರಿಗೆ ಕಾಣುತ್ತದೆ ಚೈನಾದ ಬಾವಲಿ
ಇನ್ನೊಬ್ಬರಿಗೆ ಬಯಲಾಜಿಕಲ್ ವೆಪನರಿ
ಮೋದಿ ಅಪ್ಪುಗೆಯಿಂದ ಎಂದು ಕೆಲವರಿಗೆ ಭಯ ರೀ
ಟೆರರಿಸ್ಟ್
*********ಡೋಂಟ್ ಪ್ಯಾನಿಕ್ ಎಂಬ ದೊಡ್ಡ ತಲೆಬರಹ
ಕೆಳಗೇಕಿದೆ ಕೊರೊನಾಸುರನ ಚಿತ್ರ ಉಹಹಹಾ?
ಕೈತೊಳೆಯಬೇಕೆಂಬ ಸರಳ ಸಂದೇಶ
ಎಲ್ಲೋ ಮರೆಯಾಗಿದೆ ಈ ಮುಗ್ಧ ಉದ್ದೇಶ
ಹೆದರಿಸುತ್ತಾರೇಕೆ ಜನರು ಈ ತರಹ!
ಸೀನಿ
*****
ಸೀನಿ, ಸೀನು, ಸೀನಣ್ಣ ಎಲ್ಲರೂ
ಬದಲಾಯಿಸಿಕೊಳ್ಳಿ ಬೇಗನೇ ಹೆಸರು
ಯಾರಾದರೂ ಬಂಗಾಳಿ ಪ್ರಭೃತಿ
"ಸೀನಿ ದಾ" ಅಂದರೇನು ಗತಿ
ಜನರು ಎಷ್ಟು ಹೊತ್ತು ಹಿಡಿದಾರು ಉಸಿರು?
ಹೋಮ
*********
ಎಲ್ಲೆಲ್ಲೂ ಕೇಳುತ್ತಿದೆ ಕರೋನಾ ಕರೋನಾ
ಪುರೋಹಿತರನ್ನು ಕರೆದು ಹೋಮ ಮಾಡಿಸೋಣ
ತಾಳ್ಮೆಯಿಂದ ಕೇಳಿದ ಮೇಲೆ ಕಾಲರ್ ಟ್ಯೂನು
"ಸ್ವಾಮೀ ನಿಮ್ಮ ಹಾಗೆಯೇ ನಾನೂ ಕ್ವಾರಂಟೀನು
ಬೇಕಾದರೆ ಮಾಡೋಣ ಹೋಮ ವರ್ಕ್ ಫ್ರಮ್ ಹೋಮ"
ಸರಸ
******
ಟಿವಿಯಲ್ಲಿ ನೋಡಿನೋಡಿ ಅತ್ತೆ ಸೊಸೆ Vರಸ
ಬೋರಾಗಿತ್ತು ಎಂದಳು ಪಕ್ಕದ ಮನೆ ಸರಸ
ಈಗ ಸೀರೆಗೆ ಮ್ಯಾಚಿಂಗ್ ಮಾಸ್ಕ್ ಧರಿಸಿ
ಶುಚಿದರ್ಶಿನಿಯಿಂದ ಪಕೋಡಾ ತರಿಸಿ
ಕೂತಿದ್ದಾಳೆ ನೋಡುತ್ತಾ ಕರೋನಾ Yರಸ
ವಸತಿ
*******ದೊಡ್ಡ ಸಾಹೇಬರು "ವರ್ಕ್ ಫ್ರಮ್ ವಸತಿ"
ಬೆಲ್ ಒತ್ತಿ "ಕಾಫಿ" ಎಂದು ಕೂಗಿದರು ಮೂರು ಸರತಿ
ಒಳಗಿಂದ ಒಂದು ಧ್ವನಿ ಸಾಹೇಬರ ಬೀವೀ
"ನನಗೂ ಬೇಕು, ಸ್ವಲ್ಪ ಸ್ಟ್ರಾಂಗ್ ಇರಲಿ ರೀ"
"ಓಕೇ" ಎಂದು ಸಾಹೇಬರು ಮೇಲೆದ್ದರು ಪಾಲಿಸಲು ಅಣತಿ
ಭೀತಿ
******
ಆಫೀಸ್ ಕ್ಯಾಂಟೀನಲ್ಲಿ ಕಾಫಿ, ತಿಂಡಿ, ಊಟ
ಸಿಕ್ಕರೂ ಮೂಗು ಮುರಿಯುವುದು ಐಟಿ ಪರಿಪಾಠ
ಈಗ ತಾನೇ ಕಿಚನ್ನಿನೊಳಗೆ ಹೋಗಿ
ಬೇಯಿಸಿಕೊಳ್ಳುತ್ತಿರುವನು ಮ್ಯಾಗಿ
ಮನೆಗೆ ಪೀಟ್ಸಾ ತರಿಸಲು ಕೊರೋನಾ ಭೀತಿ ವಿಪರೀತ
ರಂಗು
*****
ಕರೋನಾದಿಂದ ಕಳೆಗುಂದಿದೆ ವ್ಯಾಪಾರದ ರಂಗು
ಹೀಗೆ ಅನ್ನಿಸುತ್ತಿತ್ತು ರೀ ವಾರದಿಂದ ನಂಗೂ
ಕಳೆಗುಂದಿಲ್ಲ ಬಣ್ಣ ಬದಲಾಗಿದೆ ಅಷ್ಟೇ
ಮಾಸ್ಕ್ ವ್ಯಾಪಾರಿಗಳಿಂದ ತುಂಬಿದೆ ಮಾರುಕಟ್ಟೆ
ಐನೂರು ರೂ ಅಂತೆ ಗೋಮೂತ್ರ, ಕೌಡಂಗು
ಮಿತ್ರ ಸೀತಾರಾಮ್ ಅವರ ಕಾಮೆಂಟ್ ಓದಿ.
ಪ್ರತ್ಯುತ್ತರಅಳಿಸಿಇದನ್ನೋದಿದ ಮೇಲೆ, "ಕ್ಯಾ, ಇಸ್‍ಕೇ ಬಾರೇ ಮ್ಞೇ ಹ್ಞಸ್‍ನಾ ಯಾ ರೋನಾ?" ಎಂಬ "ಸುಬ್ಬುವಿನ ಪೇಚು" ನನ್ನಲ್ಲೂ ಉದ್ಭವಿಸಿದೆ. ಇಲ್ಲಿ ಸೀನಿ, ಸೀನು, Cನಣ್ಣ ಅವರಿಗಿತ್ತಿರುವ ಎಚ್ಚರಿಕೆಯನ್ನು ಕಂಡು, "Cತ-ಆರಾಮ" ಆದ ನನ್ನ ಮನಸ್ಸನ್ನು ಒಂದು ಬಗೆಯ "ಕರೋನಾತಂಕ"ವು ಮೋದಿಯಪ್ಪುಗೆಯಂತೆ ಅಮರಿಕೊಂಡಿದೆ. ಮನಸ್ಸಿನ ಆತಂಕವು ಕೈತಂಕ ಇಳಿದು, ಗಳಿಗೆಗೊಮ್ಮೆ ಕೈತೊಳೆದುಕೊಂಡು, ಹೀಗೆ ಮಾಡುತ್ತಿದ್ದರೆ, I can wash my hands off this viral spiral ಎಂಬ ಭ್ರಮೆಯಲ್ಲಿ ತೇಲುತ್ತಿದ್ದೇನೆ. ಆದರೆ, ಬರಿಯ ನೀರಲ್ಲಿ ಕೈ ತೊಳೆದರೇನು ಸುಖ, Baba Bullshit brandನ "CowMouth Rum" ಎಂಬ "ಗೋಮೂತ್ರ ಮದ್ಯಸಾರ"ದಿಂದ ಹತ್ತು-ಹತ್ತು ನಿಮಿಷಗಳಿಗೊಮ್ಮೆ ಕೈ ಮತ್ತು ಮೈ ತೊಳೆಯುತ್ತಿರಬೇಕು; ಬಾಯಿ ಮುಕ್ಕಳಿಸುತ್ತಿರಬೇಕು ಎಂದು COVID-19 ಕೋವಿದರು ಇದೀಗ ಸಂದೇಶವಿತ್ತಿದ್ದಾರೆ. ಸರಕಾರವೂ ಏನೂ ಮಾಡಲು ತಿಳಿಯದೆ, ಎಲ್ಲ nursing homeಗಳಲ್ಲೂ "ನರಸಿಂಗ ಹೋಮ" ಮಾಡಿ, ಕಡೆಯ ದಿನ ಕೋವಿಂದ್ ಅವರಿಂದ COVID-19ಗೆ ಪೂರ್ಣಾಹುತಿ ಕೊಡಿಸಬೇಕೆಂದಿದೆಯಂತೆ. ಇನ್ನು ಕೆಲವರು ೪೦ ದಿನಗಳ ಸೂತಕ ಆಚರಿಸಿ, ಕಡೆಯದಿನ "Quarantine's Day" ಎಂದು ಹಬ್ಬ ಮಾಡಿದರೆ ಎಲ್ಲ ಸರಿಹೋಗುವುದು ಎಂದು ಸಿದ್ಧವಾಗುತ್ತಿದ್ದಾರಂತೆ. ಅಂತೂ "ಕುಛ್ ತೋ ಕರೋ ನಾ" ಎಂದು ಒಬ್ಬೊಬ್ಬರು ಒಂದು ಬಗೆಯಲ್ಲಿ ಪ್ರತಿಕ್ರಿಯಿಸುತ್ತಿರುವಾಗ, ಈ "ಮಜಾ ಕರೋ ನಾ" ಮಾತುಗಳೂ ಹಾಯ್ದು, ಮನಸ್ಸಿಗೆ ಹಾಯ್ ಎನಿಸಿತು. -- ಹತ್ತೊಂಬತ್ತನೆಯ ಕೋvind ರಾಮ.