ಬೆಳಕಿನ ಹನಿ
ಮೂಲ ಹಿಂದಿ ಕವಿತೆ: ಗುಲ್ಜಾರ್ ಕನ್ನಡ ಅನುವಾದ: ಸಿ.ಪಿ. ರವಿಕುಮಾರ್ ಬರಿದೆ ನೋಡು ಆ ಕಣ್ಣುಗಳಿಂದ ಹೊಮ್ಮುವ ಸುಗಂಧವನು ಕೈಯಿಂದ ಮುಟ್ಟಿ ತೊಡಿಸದಿರು ಸಂಬಂಧಗಳ ಬೇಡಿ ಆತ್ಮದಿಂದ ಅನುಭವಿಸು, ಪ್ರೀತಿಯನ್ನು ಹಾಗೇ ಬಿಟ್ಟು ಬಿಡು ಹಣೆಪಟ್ಟಿ ಹಚ್ಚದಿರು ಹೆಸರನ್ನು ನೀಡಿ ಪ್ರೀತಿಗೊಂದು ಭಾಷೆಯಿಲ್ಲ, ಪ್ರೀತಿಗೆ ಸ್ವರವಿಲ್ಲ ಕೇಳುವುದು, ಆಡುವುದು ಮೌನದಲ್ಲೆ. ಆರದಿದು, ನಿಲ್ಲದಿದು, ನೆಲೆಸದಿದು ಎಲ್ಲೂ - ಬೆಳಕಿನ ಹನಿ, ಯುಗಗಳಿಂದ ಹರಿಯುತ್ತಿದೆ. ಕಣ್ಣುಗಳಲ್ಲಿ ಎಲ್ಲೋ ಅರಳಿ ನಗುವ ಮುಗುಳು ರೆಪ್ಪೆಗಳ ಮೇಲೆ ಆಟವಾಡುವ ಬೆಳಕು ಮೌನವಾಗಿದ್ದರೂ ಕಂಪಿಸುವ ತುಟಿಗಳಲಿ ಘನಿತವಾಗಿವೆ ಕಥಾನಕಗಳೆಷ್ಟೊಂದು ಕವಿತೆಯನ್ನು ಕುರಿತು ಗುಲ್ಜಾರ್ ಅವರ ಈ ಕವಿತೆಯನ್ನು ಖಾಮೋಶಿ ಚಿತ್ರದಲ್ಲಿ ಗೀತೆಯನ್ನಾಗಿ ಬಳಸಲಾಗಿದೆ. ಈ ಕವಿತೆಯಲ್ಲಿ ಪ್ರೇಮದ ಬಗ್ಗೆ ಒಂದು ವ್ಯಾಖ್ಯಾನವಿದೆ. ಪ್ರೀತಿಗೊಂದು ಭಾಷೆಯಿಲ್ಲ, ಪ್ರೀತಿಗೆ ಸ್ವರವಿಲ್ಲ ಕೇಳುವುದು, ಆಡುವುದು ಮೌನದಲ್ಲೆ ಆರದಿದು, ನಿಲ್ಲದಿದು, ನೆಲೆಸದಿದು ಎಲ್ಲೂ ಬೆಳಕಿನ ಹನಿ, ಯುಗಗಳಿಂದ ಹರಿಯುತ್ತಿದೆ ಖಾಮೋಶಿ ಚಿತ್ರದಲ್ಲಿ ದುರಂತನಾಯಕಿಯ ಪಾತ್ರದಲ್ಲಿ ವಹೀದಾ ರೆಹಮಾನ್ ಅಭಿನಯಿಸಿದ್ದಾರೆ. ಭಗ್ನಪ್ರೇಮದಿಂದ ಹುಚ್ಚನಾದ ಕವಿಯೊಬ್ಬ ಮಾನಸಿಕ ಆಸ್ಪತ್ರೆಗೆ ಸೇರುತ್ತಾನೆ. ಅವನನ್ನು ಪ್ರೀತಿಸುವ...