ನೀವೂ ಬನ್ನಿ, ನಮಗೂ ನೀಡುತ್ತಿರಿ ಆಹ್ವಾನ 



ಮೂಲ ಉರ್ದು ಗಜಲ್ : ಜಾವೇದ್ ಅಖ್ತರ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ನೀವೂ ಬನ್ನಿ! ಆಗಾಗ  ನಮಗೂ ನೀಡುತ್ತಿರಿ ಆಹ್ವಾನ 
ಗೆಳೆತನವೇನೂ  ಅಪರಾಧವಲ್ಲ, ಬೆಳೆಸುತ್ತಿರಿ ಗೆಳೆತನ !

ನೀವು ಕುಡಿದರೂ ಹಾಲಾಹಲ, ಮಾಡಿಸಿ ಅನ್ಯರಿಗೆ ಅಮೃತಪಾನ 
ಗಾಯವಾದರೂ ಸಹಿಸಿಕೊಳ್ಳಿ ನೋವನ್ನು, ನಿಲ್ಲಿಸದಿರಿ ಗಾಯನ!

ಕನ್ನ  ಹಾಕಿದೆ ಕಾಲ  ಜನರ ಆಕಾಂಕ್ಷೆಗಳಿಗೆ 
ಕನಸು ಕಂಡರೆ ಹಂಚಿಕೊಳ್ಳಿ ಜನರೊಳಗೆ 

ನಿಮ್ಮ ಮನದಾಳದಲ್ಲೂ ಇರಲೇಬೇಕೊಂದು ಚಹರೆ 
ಬಿಡಿಸುತ್ತಿರಿ ಚಿತ್ರ, ಪೂರ್ಣವಾಗುವುದು ಇಂದಲ್ಲ ನಾಳೆ 

Kannada translation by C.P. Ravikumar of a Gazal by Javed Akhtar  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)