ಅಪರಿಚಿತನಾಗಿರುವೆ ನನ್ನ ಮನೆಗೆ ನಾ ಬಂದು 

ಮೂಲ ಉರ್ದು ಗಜಲ್ : ಗುಲ್ಜಾರ್
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 




Man Sitting and Closing Eyes on Teal Bench
ಅಪರಿಚಿತನಾಗಿರುವೆ ನನ್ನ ಮನೆಗೇ ನಾ ಬಂದು
ಬೆದರಿಹುದು ನನ್ನಾತ್ಮ ನನ್ನನ್ನಿಲ್ಲಿ ಕಂಡು

ಮೂಲೆ ಸೇರಿಹವು ಆಸೆಗಳು ಯಾಕೋ ಮುನಿದು
ಅಭಿಲಾಷೆಗಳ ಮುಖಗಳಲ್ಲಿ ನಂದಿಹುದು ಬೆಳಕು

ಹವ್ಯಾಸವು ಮಾತಾಡದು ಹಿಡಿಯಲಾಗದೆ ಗುರುತು
ಸತ್ತು ಹೋಗಿದೆ ಆಕಾಂಕ್ಷೆ ಹೊಸಲಲ್ಲಿ ತಲೆಯಿಟ್ಟು

ಯಾವ ನಾಡನ್ನರಸುತ್ತಾ ಹೊರಟೆನೋ ಮನೆಯಿಂದ ಕಾಣೆ
ಮರಳಿದಾಗ ಹೊರಗಿನವನಾದೆ ನನ್ನ ಮನೆಯೊಳಗೇ

Translation of an Urdu Gazal by Gulzar. Translated into Kannada by C.P. Ravikumar

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)