ಹೊನಲು
ಮೂಲ ಹಿಂದಿ ಗಜಲ್ : ಜಾವೇದ್ ಅಖ್ತರ್
ಕನ್ನಡಕ್ಕೆ: ಸಿ.ಪಿ. ರವಿಕುಮಾರ್
ಕೆಲವೊಮ್ಮೆ ಅಳಲು, ಕೆಲವೊಮ್ಮೆ ನಗೆಮುಗುಳು
ಕ್ಷಣ ನಿಲ್ಲದೆ ಹರಿಯುತ್ತಿದೆ ಜೀವನದ ಹೊನಲು
ಕಂಡದ್ದು ಏನು ಕಣ್ಣೋ, ಇಲ್ಲ ಸ್ವಪ್ನಶೃಂಖಲೆಯೋ
ಕೇಳಿದ್ದು ಏನು ದನಿಯೋ, ಇಲ್ಲ ರಾಗಿಣಿಯ ಹೊನಲೋ
ಹೃದಯ ಬರಡಾಗಿ ಹಾರುತ್ತಿದೆ ಬಿರುಗಾಳಿಗೆ ಧೂಳು
ಹರಿಯುತ್ತಿತ್ತು ಹಿಂದೊಮ್ಮೆ ಇಲ್ಲಿ ಪ್ರೇಮದ ಹೊನಲು
ಕಿರಣಗಳಲ್ಲಿ ಹೊಳೆವ ಅಲೆಯೋ ಇಲ್ಲ ಅಲೆಗಳಲ್ಲಿ ಹೊಳೆವ ಕಿರಣವೋ
ಹೊನಲಲ್ಲಿ ಹೊಳೆವ ಬೆಳದಿಂಗಳೋ ಇಲ್ಲ ಬೆಳ್ದಿಂಗಳದೇ ಹೊನಲೋ
Kannada translation by C.P. Ravikumar of a Gazal by Javed Akhtar
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ